ವಿನೂತನ ರೀತಿಯಲ್ಲಿ ಬಜೆಟ್ ಮಂಡಿಸಿ ಪ್ರಶಂಸೆಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಹೊಸ ಪ್ರಯತ್ನದಿಂದ ಗಮನ ಸೆಳೆಯಲಿದ್ದಾರೆ.
2021-22ನೇ ಸಾಲಿನ ಬಜೆಟ್ ಮುಂಗಡ ಪತ್ರಗಳನ್ನು ಕಾಗದರಹಿತವಾಗಿಸಿ, ಇ – ವರ್ಷನ್ನಲ್ಲಿ ಬಜೆಟ್ ಪ್ರತಿ ವಿತರಿಸಲು ಪ್ರಯತ್ನ ಆರಂಭಿಸಿರುವುದು ಹೊಸ ಬೆಳವಣಿಗೆ. ಬಜೆಟ್ ಆರಂಭದಲ್ಲಿ ನಡೆಯುತ್ತಿದ್ದ ಹಲ್ವಾ ಕಾರ್ಯಕ್ರಮವನ್ನೂ ಈ ಬಾರಿ
ರದ್ದುಗೊಳಿಸಲಾಗುವುದು. ಮಹಿಳಾ ಸಚಿವೆಯಾಗಿ ಉತ್ತಮ ಆಡಳಿತ ನಿರ್ವಹಿಸಿದ ಯಶಸ್ಸನ್ನು ಕಂಡಿದ್ದ ನಿರ್ಮಲಾ ಸೀತಾ ರಾಮನ್ 2020ನೇ ಸಾಲಿನ ಬಜೆಟ್ ಮಹತ್ವದನ್ನು ಸಾಧಿಸಿದ್ದರು.
ಮಹತ್ವಾಕಾಂಕ್ಷಿ ಭಾರತ, ಎಲ್ಲರ ಆರ್ಥಿಕ ಅಭಿವೃದ್ಧಿ, ಕಾಳಜಿಯುಕ್ತ ಸಮಾಜವೆಂಬ ತ್ರಿಕರಣ ಸೂತ್ರದ ಆಧಾರದಲ್ಲಿ ಬಜೆಟ್ ಮಂಡಿಸಲಾಗಿತ್ತು. ಭಾರತೀಯರಿಗೆ ತೆರಿಗೆ ಸಲ್ಲಿಸುವಿಕೆಯನ್ನು ಸರಳ ಗೊಳಿಸಿದ ಪ್ರಶಂಸೆ ಪಾತ್ರರಾಗಿದ್ದರು. ಬ್ರೀಫ್ ಕೇಸ್ ಸಂಸ್ಕೃತಿ ತೊಡೆದುಹಾಕಿ ವಿಭಿನ್ನ ಶೈಲಿ ಅನುಸರಿದ್ದು ಭಾರತೀಯರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತಲ್ಲದೆ ಹೊಸ ತೆರಿಗೆ ನಿಯಮ ಜಾರಿಯಿಂದ ಗಮನ ಸೆಳೆದಿದ್ದರು.
ಅನಾರೋಗ್ಯದ ನಡುವೆಯೂ ಬಜೆಟ್ ಮಂಡಿಸಿದ್ದಲ್ಲದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಸ್ಮರಿಸಿ, ವಿಪಕ್ಷಗಳ ಮೆಚ್ಚುಗೆ ಗಳಿಸಿದ್ದರು. ದೇಶದ ಪ್ರತಿಯೊಬ್ಬ ನಾಗರಿಕರನ್ನು ಆರ್ಥಿಕವಾಗಿ ಸದೃಢಗೊಳಿಸುವ ಪ್ರಯತ್ನ ಎಂದು ಭಾವಿಸಲಾಗಿದ್ದ
ಬಜೆಟನ್ನು ಸಮರ್ಥವಾಗಿ ನಿಭಾಯಿಸಿದ್ದರು. ಕೃಷಿ, ತಂತ್ರಜ್ಞಾನ, ಉದ್ಯೋಗ ಮತ್ತು ತೆರಿಗೆ ವಿಚಾರವನ್ನು ಮುಖ್ಯವಾಗಿ ಪರಿಗಣಿಸಿದ್ದು ಯಶಸ್ಸಿಗೆ ಕಾರಣವಾಗಿತ್ತು.
2025ರ ವೇಳೆಗೆ 5ಶತಕೋಟಿ ಡಾಲರ್ ಆರ್ಥಿಕ ಶಕ್ತಿಯಾಗುವ ಕನಸು ಬಿತ್ತಿದ್ದ ಬಜೆಟನ್ನು 160 ನಿಮಿಷಗಳ ಕಾಲ ಮಂಡಿಸ ಲಾಗಿದ್ದು, ದೇಶದ ಬಜೆಟ್ ಇತಿಹಾಸದಲ್ಲಿಯೇ ದೀರ್ಘವಧಿಯ ಬಜೆಟ್ ಮಂಡನೆ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಇದೀಗ ಇ-ಬಜೆಟ್ ಪ್ರತಿಗಳ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿರುವುದು ಮತ್ತಷ್ಟು ನಿರೀಕ್ಷೆಗಳನ್ನು ಸೃಷ್ಟಿಸಿದೆ.