Thursday, 31st October 2024

ಗುಬ್ಬಿ ಕಾಯಲು ಹೋಗಿ ಗೂಡು ಬಿಟ್ಟ ರೈತ

ಮಾನ್ವಿ : ಜಿಲ್ಲೆಯ ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದಲ್ಲಿ ಹಿರೇಕೊಟ್ನೆಕಲ್ ಇಂದ ಹಿರೇಹಣಗಿ ಹೆದ್ದಾರಿಯಲ್ಲಿ ಕಾರ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹಕ್ಕಿಗಳು (ಗುಬ್ಬಿ) ಕಾಯಲು ಹೊಲಕ್ಕೆ ಹೊರಟ ರೈತರೊಬ್ಬರು ಮೃತ ಪಟ್ಟಿದ್ದಾರೆ.

ಮೃತಪಟ್ಟ ರೈತ ಬಾಗಲವಾಡ ನಿವಾಸಿ ಆದಪ್ಪಗೌಡ ಬಾಗೋಡಿ (65) ಮೃತಪಟ್ಟ ದುರ್ದೈವಿ. ಕುಟುಂಬಸ್ಥರು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮನೆಯನ್ನು ಅಲಂಕರಿಸಿ ಬಂಧುಮಿತ್ರರು ಆಗಮಿಸಿ ಅದ್ದೂರಿಯಾಗಿ ಹಬ್ಬದ ಸಿದ್ಧತೆ ನಡೆದಿತ್ತು. ಜೋಳದ ಹೊಲಕ್ಕೆ ಹಕ್ಕಿಗಳು (ಗುಬ್ಬಿ) ಕಾಟ ಜಾಸ್ತಿ ಎಂದು ಹೊಲಕ್ಕೆ ಹೋಗಿ ಬೇಗನೆ ಬರುತ್ತೇನೆ ಎಂದು ತೆರಳಿದ ರಸ್ತೆಯಲ್ಲೇ ಜವರಾಯನ ರೂಪದಲ್ಲಿ ಬಂದ ಕಾರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಆದಪ್ಪಗೌಡ ಅವರು ಪತ್ನಿ, ಈ ಇಬ್ಬರು ಪುತ್ರ, ಮೂವರನ್ನು ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾರು ಚಾಲಕ ಪರಾರಿಯಾಗಿದ್ದು, ಕವಿತಾಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.