ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ತಮ್ಮ ಬಹುಕಾಲದ ಗೆಳೆಯ ಅಕ್ಷಯ್ ಅವರೊಂದಿಗೆ
ಡಿಸೆಂಬರ್ ತಿಂಗಳಿನಲ್ಲಿ ಸಪ್ತಪದಿ ತುಳಿದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅಕ್ಷಯ್ ಹಾಗೂ ನಿಹಾರಿಕಾ ಸತಿಪತಿಗಳಾದರು. ಕುಟುಂಬ ಸ್ಥರು, ಬಂಧು ಬಳಗದವರು, ಆತ್ಮೀಯರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜನವರಿ 16 ರಂದು ನವದಂಪತಿಗಳ ಆರತಕ್ಷತೆ ಕಾರ್ಯ ಕ್ರಮ ಖಾಸಗಿ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.
ಸ್ಯಾಂಡಲ್‌ವುಡ್‌ನ ನಟ ನಟಿಯರು ಮತ್ತು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ನವ ವಧುವರರನ್ನು ಹರಸಿದರು. ಅಷ್ಟೇ ಅಲ್ಲ, ವೇದಿಕೆಯಲ್ಲಿ ವಧುವರರ ಜತೆ ಸ್ಟೆಪ್ ಹಾಕಿ ರಂಜಿಸಿದರು.
ರಾಕಿಂಗ್‌ಸ್ಟಾರ್ ಯಶ್ ‘ಮಾಸ್ಟರ್ ಪೀಸ್’ ಚಿತ್ರದ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದರು. ರಮೇಶ್ ಕೂಡ ಇವರಿಗೆ ಸಾಥ್ ನೀಡಿದರು.
ಬಳಿಕ ಬಂದ ಸ್ಯಾಂಡಲ್‌ವುಡ್ ಪೈಲ್ವಾನ ಸುದೀಪ್ ‘ಪೈಲ್ವಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರನ್ನು ಕುಣಿಯುವಂತೆ ಮಾಡಿದರು. ಶಿವರಾಜ್ ಕುಮಾರ್, ಪುನೀತ್‌ರಾಜ್‌ಕುಮಾರ್, ರಾಘವೇಂದ್ರರಾಜ್ ಕುಮಾರ್ ಕುಟುಂಬ
ಸಮೇತರಾಗಿ ಆಗಮಿಸಿ, ನಿಹಾರಿಕಾ ಹಾಗೂ ಅಕ್ಷಯ್ ಅವರಿಗೆ ಶುಭ ಹಾರೈಸಿದರು.
ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್, ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಸಚಿವ ಸುರೇಶ್‌ಕುಮಾರ್,
ತೇಜಸ್ವಿ ಸೂರ್ಯ ಸೇರಿದಂತೆ ಹಲವು ಗಣ್ಯರು ಮತ್ತು ಚಿತ್ರನಟರು ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.