ಶ್ರೀನಗರ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭದ್ರತೆ ಕಾರಣಗಳಿಂದ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ದೇಶಾದ್ಯಂತ 72ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ದೇಶದ ರಾಜಧಾನಿ ದೆಹಲಿಯ ರಾಜಪಥ್ ಮತ್ತು ಆಯಾ ರಾಜ್ಯ ಗಳಲ್ಲಿ ಕಾರ್ಯಕ್ರಮಗಳು ನೆರವೇರುತ್ತಿವೆ.
ಒಟ್ಟು 32 ಟಾಬ್ಲ್ಯಾಡ್ ಗಳು ಪಾಲ್ಗೊಳ್ಳಲಿದ್ದು, 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಕ್ಷಣಾ ಸಚಿವಾಲಯದ 6 ಮತ್ತು ಕೇಂದ್ರ ಸಚಿವಾಲಯ ಹಾಗೂ ಪಾರಾಮಿಲಿಟರಿ ಪಡೆಗಳ 9 ಟಾಬ್ಲ್ಯಾಡ್ ಗಳು ಪ್ರದರ್ಶನಗೊಳ್ಳಲಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ಕಾರ್ಯಾಚರಣೆಗಳನ್ನು ಮಟ್ಟ ಹಾಕಲು ಇಂದು ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.