Saturday, 23rd November 2024

ರೈತರ ಮುತ್ತಿಗೆ, ಕೆಂಪುಕೋಟೆ ಮೇಲೆ ಧ್ವಜ ಪ್ರದರ್ಶನ

ನವದೆಹಲಿ: ಟ್ರ್ಯಾಕ್ಟರ್‌ ಮೂಲಕ ಹೊರಟ ರೈತರು ಯಾವುದೇ ಅಡ್ಡಿಗಳಿಲ್ಲದೆ ಕೆಂಪುಕೋಟೆ ತಲುಪಿದ ರೈತರು, ಕೆಂಪುಕೋಟೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದ್ದು, ಧ್ವಜ ಹಾರಿಸಿ ಪ್ರದರ್ಶಿಸಿದ್ದಾರೆ.

ದೆಹಲಿ ಕೆಂಪುಕೋಟೆಗೆ ರೈತರ ಮುತ್ತಿಗೆ ಹಾಕಿದ್ದು, ಇದು ದೇಶದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಇತಿಹಾಸ ದಲ್ಲೇ ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆ ಮೇಲೆ ಮುತ್ತಿಗೆ ಹಾಕಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ. ಆಗಸ್ಟ್‌ 15ರ ಸ್ವಾತಂತ್ರ‍್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲೆ ಪ್ರಧಾನಿಗಳು ಧ್ವಜಾರೋಹಣ ಮಾಡುತ್ತಾರೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಮುಖ್ಯ ಕೇಂದ್ರವಾಗಿದ್ದು, ರೈತರು 50ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ತಲುಪಿದ್ದಾರೆ. ಪರೇಡ್ ‌ತಡೆಯಲು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಕೆಂಪುಕೋಟೆ ಪ್ರದೇಶವನ್ನು ಪ್ರವೇಶಿಸಿದ್ದು, ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನ ಮಾಡಿಲ್ಲ.

ದೆಹಲಿ ಪೊಲೀಸ್ ಸಿಬ್ಬಂದಿ ರಾಷ್ಟ್ರ ರಾಜಧಾನಿಗೆ ತೆರಳುವುದನ್ನು ತಡೆದಾಗ ದೆಹಲಿಯ ಅಕ್ಷರಧಾಮದ ಬಳಿ ಖಡ್ಗವನ್ನು ಪ್ರದರ್ಶಿಸಿದರು. ದೆಹಲಿಯ ಅಕ್ಷರಧಾಮದ ಬಳಿ ಇರುವ ನೋಯ್ಡಾ ಮಾಡ್ ನಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿ ಚಾರ್ಜ್ ಮಾಡಿದ ನಂತರ ಪ್ರತಿಭಟನಾಕಾರರು ಖಡ್ಗ ಪ್ರದರ್ಶಿಸಿದರು.

ರೈತ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.