Thursday, 31st October 2024

ಪದವಿ ಕಾಲೇಜಿನಲ್ಲಿ ಮತದಾರರ ದಿನ ಆಚರಣೆ

ಹುಳಿಯಾರು: ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಸಾಂಸ್ಕöÈತಿಕ ಸಂಘದ ವತಿಯಿಂದ ಅಂತಿಮ ಬಿ.ಎ. ವಿದ್ಯಾರ್ಥಿಗಳಿಗೆ “ರಾಷ್ಟ್ರೀಯ ಮತದಾರರ ದಿನ” ಮತ್ತು “72 ನೇಯ ಗಣರಾಜ್ಯೋತ್ಸವ”ದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ “ಮತದಾರರ ಪ್ರತಿಜ್ಞಾ ವಿಧಿ”ಯನ್ನು ಬೋಧಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗಾಗಿ “ಗಣರಾಜ್ಯೋತ್ಸವ” ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತರಾದ ಹೆಚ್.ಡಿ.ಚೈತ್ರ, ಎಲ್.ಎಸ್.ಕಾವ್ಯ ಎಸ್.ಟಿ.ಸವಿತಾ ಅವರಿಗೆ ಬಹುಮಾನ ನೀಡಲಾಯಿತು.

ಭಾಷಣ ಸ್ಪರ್ಧಯಲ್ಲಿ “ಸಂವಿಧಾನ ಮತ್ತು ಮಹಿಳೆ”, “ಸಂವಿಧಾನದ ಮಹತ್ವ”, “ಹಕ್ಕು ಮತ್ತು ಕರ್ತವ್ಯಗಳು”, “ಸಂವಿಧಾನ ರಚನೆ – ಒಂದು ನೋಟ”, “ಸಂವಿಧಾನ ಮತ್ತು ಅಂಬೇಡ್ಕರ್”- ಹೀಗೆ ಸಂವಿಧಾನ ಸಂಬAಧಿ ವಿಭಿನ್ನ ವಿಷಯಗಳ ಮೇಲೆ ವಿದ್ಯಾರ್ಥಿಗಳು ಮಾತನಾಡಿದರು.

“ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮ ವನ್ನು ಆಯೋಜಿಸಿದ್ದ, ಅಂತಿಮ ಬಿ.ಎ. ವಿದ್ಯಾರ್ಥಿಗಳ ಮೆಂಟರ್ ಪ್ರೊ. ಮೋಹನ್ ಕುಮಾರ್ ಅವರು ಸಂವಿಧಾನದ ಪೀಠಿಕೆ ಯನ್ನು ಅರ್ಥೈಸಿದರು. ಉಪನ್ಯಾಸಕರಾದ ಕುಮಾರಸ್ವಾಮಿ ಅವರು ಸಂವಿಧಾನ ರಚನೆಯ ಹಿನ್ನೆಲೆಯನ್ನು ಕುರಿತು ಮಾತನಾಡಿ ದರು.

ಪ್ರಾಚಾರ್ಯರಾದ ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತನಾಡಿ ಗಾಂಧಿ, ಅಂಬೇಡ್ಕರ್ ಮೊದಲಾದ ಮಹನೀಯರ ಶ್ರಮ ದಿಂದಾಗಿ ಇಂದು ನಾವು ಗಣರಾಜ್ಯವನ್ನು ಅನುಭವಿಸುತ್ತಿದ್ದೇವೆ. ರಾಜಪ್ರಭುತ್ವದಲ್ಲೂ ಇರಬಹುದಾದ ಕೆಲವೊಂದು ಒಳ್ಳೆಯ ಅಂಶಗಳೂ ಸೇರಿದಂತೆ ದೇಶ ವಿದೇಶಗಳ ಸಂವಿಧಾನವನ್ನು ಪರಾಮರ್ಶಿಸಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಸವಿತಾ ಎಸ್.ಟಿ. “ಪ್ರೇರಣಾ ಗೀತೆ”ಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಿವ್ಯ ಕೆ. ಕಾರ್ಯ ಕ್ರಮವನ್ನು ನಿರೂಪಿಸಿದರೆ, ಚೈತ್ರಾ ಹೆಚ್.ಡಿ. ಸ್ವಾಗತಿಸಿದರು, ಆಯೇಷಾ ಬಿ. ವಂದಿಸಿದರು.