ನವದೆಹಲಿ: ರೈತರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ರ್ಯಾಲಿ ವೇಳೆ ದೆಹಲಿಯ ಕೆಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ 550ಕ್ಕೂ ಹೆಚ್ಚು ಟ್ವಟರ್ ಖಾತೆಗಳನ್ನ ಅಮಾನತುಗೊಳಿಸಲಾಗಿದೆ.
ಮೈಕ್ರೋ ಬ್ಲಾಗಿಂಗ್ ವೆಬ್ ಸೈಟ್ʼನ ವಕ್ತಾರರು, ‘ತಂತ್ರಜ್ಞಾನ ಮತ್ತು ಮಾನವ ವಿಮರ್ಶೆಯ ಸಂಯೋಜನೆಯನ್ನ ಬಳಸಿಕೊಂಡು, ಟ್ವಿಟರ್ʼನ ನೂರಾರು ಖಾತೆಗಳು ಮತ್ತು ಟ್ವೀಟ್ʼಗಳ ಮೇಲೆ ಕ್ರಮ ಕೈಗೊಂಡಿದೆ. ಸ್ಪ್ಯಾಮ್ ಮತ್ತು ಪ್ಲಾಟ್ ಫಾರ್ಮ್ ಮ್ಯಾನಿಪ್ಯು ಲೇಶನ್ʼನಲ್ಲಿ ತೊಡಗಿರುವ 550 ಕ್ಕೂ ಹೆಚ್ಚು ಖಾತೆಗಳನ್ನ ಅಮಾನತುಗೊಳಿಸಲಾಗಿದೆ’ ಎಂದು ಅವರು ಹೇಳಿದರು.