Thursday, 31st October 2024

ಹುಳಿಯಾರು ಪಟ್ಟಣದ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಂಕು

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ಅನುದಾನಲ್ಲಿ 1 ಕೋಟಿ ರೂ.ಗಳಿಗೂ ಹೆಚ್ಚಿನ ಹಣದ ಅಭಿವೃದ್ಧಿ ಕಾಮಗಾರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.

57 ಲಕ್ಷ ರೂ. ವೆಚ್ಚದಲ್ಲಿ ಹುಳಿಯಾರು ರಾಮಗೋಪಾಲ್ ಸರ್ಕಲ್‌ನಿಂದ ಹಿರಿಯೂರು ರಸ್ತೆಯವರೆವಿಗಿನ ರಸ್ತೆಗೆ ಮುಂದುವರೆದ ಸಿಸಿ ರಸ್ತೆ ಕಾಮಗಾರಿ, ರಾಮಗೋಪಾಲ್ ಸರ್ಕಲ್‌ನ ಎಸ್‌ಬಿಐ ಬ್ಯಾಂಕ್‌ನಿಂದ ಬಸವೇಶ್ವರ ಪ್ರೌಢಶಾಲೆಯವರೆವಿಗೆ 27 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ರಾಮಗೋಪಾಲ್ ಸರ್ಕಲ್‌ನಿಂದ ಹಿರಿಯೂರು ರಸ್ತೆಯವರೆವಿಗೆ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಚರಂಡಿ, ಕರಿಯಣ್ಣನ ಮನೆ ಯಿಂದ ಜಗದೀಶ್ ಮಾಸ್ಟರ್ ಮನೆಯವರೆವಿಗೆ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್, ಗುತ್ತಿಗೆದಾರರಾದ ತಿಮ್ಮೇಗೌಡ, ಕೆಂಕೆರೆ ನವೀನ್, ನಂದಿಹಳ್ಳಿ ಶಿವಣ್ಣ, ಹೊಸಹಳ್ಳಿ ಜಯಣ್ಣ, ಸೀತರಾಮಯ್ಯ, ವಸಂತಯ್ಯ, ದಾಸಪ್ಪ, ನಜರುಲ್ಲಾಖಾನ್, ಲೋಕೇಶ್, ಪಾತ್ರೆ ಪರಮೇಶ್, ಕೆಎಂಎಲ್ ಕಿರಣ್, ದುರ್ಗಯ್ಯ, ಬಡಗಿ ರಾಮಣ್ಣ, ಧನಂಜಯ್ಯ ಮತ್ತಿತರರು ಇದ್ದರು.