Friday, 20th September 2024

ಜ.26ರ ಹಿಂಸಾಚಾರದ ಸಾಕ್ಷ್ಯಾಧಾರ ಹಂಚಿಕೊಳ್ಳಲು ದೆಹಲಿ ಪೊಲೀಸ್‌ ಮನವಿ

ನವದೆಹಲಿ : ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರ ಭುಗಿಲೆದ್ದ ಮೂರು ದಿನಗಳ ನಂತರ, ಹಿಂಸಾಚಾರದ ಸಾಕ್ಷಿಯಾದ ಜನರು ಪೊಲೀಸರೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳು ವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.

ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿ, ದೆಹಲಿಯಲ್ಲಿ ಹಿಂಸಾಚಾರ ನಡೆಸಿದ್ದರು. ಘಟನೆಗಳಿಗೆ ಸಾಕ್ಷಿಯಾಗಿರುವ ಅಥವಾ ಘಟನೆಯ ಬಗ್ಗೆ ಯಾವುದೇ ಮಾಹಿತಿ ಹೊಂದಿರುವ ಅಥವಾ ಅವರ ಮೊಬೈಲ್ ಫೋನ್ ಅಥವಾ ಕ್ಯಾಮೆರಾದಲ್ಲಿ ಯಾವುದೇ ಚಟುವಟಿಕೆಯನ್ನು ಸೆರೆ ಹಿಡಿದಿದ್ದರೆ, ಹೇಳಿಕೆ/ಫೂಟೇಜ್/ಚಿತ್ರವನ್ನು ತಮಗೆ ನೀಡುವಂತೆ ಮನವಿ ಮಾಡಲಾಗಿದೆ’

ವಸ್ತುಗಳನ್ನು ಕೊಠಡಿ ಸಂಖ್ಯೆ 215, ಎರಡನೇ ಮಹಡಿ, ಹಳೆ ದೆಹಲಿ ಪೊಲೀಸ್ ಪ್ರಧಾನ ಕಚೇರಿ, ಐ.ಟಿ.ಓ. ಇದಕ್ಕೆ ಕಳುಹಿಸಿ ಕೊಡಬೇಕಾಗಿ ತಿಳಿಸಿದ್ದಾರೆ. ಸಾಕ್ಷಿಯ ಗುರುತುಗಳನ್ನು ರಹಸ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಎಫ್ ಐಆರ್ ಗಳನ್ನು ದಾಖಲಿಸಿದ್ದಾರೆ.