ಡಾ.ಸಿ.ರಾಮಚಂದ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕರು
ಕರೋನಾ ಮಹಾಮಾರಿಯಿಂದಾಗಿ ನಿರೀಕ್ಷೆಯಲ್ಲಿದ್ದ ಕಾರ್ಯಕ್ರಮಗಳಿಗೆ ಸ್ವಲ್ಪ ಹಿಂಜರಿತವಾಗಿರಬಹುದು. ಕರೋನಾ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಿರುವುದು ನಿಜಕ್ಕೂ ಶ್ಲಾಘನೀಯ.
ಆದರೆ, ರಾಜ್ಯದಲ್ಲಿ ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ತರಲು ಹೊಸ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾದ್ದರಿಂದ ರಾಜ್ಯ ಸರಕಾರದ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಹಲವು ಕಾರ್ಯಕ್ರಮಗಳನ್ನು
ರೂಪಿಸಲಾಗುತ್ತಿದ್ದು, ಪ್ರಮುಖವಾಗಿ ಕ್ಯಾನ್ಸರ್ ತಡೆ ಹಾಗೂ ಸ್ಕ್ರೀನಿಂಗ್‌ಗೆ (ಪತ್ತೆ ಕಾರ್ಯ) ವಿಶೇಷ ಅನುದಾನ ನೀಡಬೇಕಿತ್ತು. ಏಕೆಂದರೆ ಇತರ ಕಾಯಿಲೆಗಳಿಗೂ ವಿಭಿನ್ನವಾಗಿರುವ ಕ್ಯಾನ್ಸರ್ ರೋಗ ದೇಶದಲ್ಲಿ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಹಚ್ಚುವುದರಿಂದ ಕ್ಯಾನ್ಸರ್‌ನಿಂದ ಪಾರಾಗುವ ಮೂಲಕ ಸಾಮಾನ್ಯರಂತೆ ಜೀವನ ನಡೆಸಲು ಸಹಕಾರಿ ಯಾಗಲಿದೆ.
ಆದರೆ, ಕರೋನಾದಿಂದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ ಆರೋಗ್ಯ ವಲಯಕ್ಕೆ ವಿಶೇಷ ಆದ್ಯತೆ ನೀಡಿರುವುದು ಆರೋಗ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಇದಾಗಿದೆ ಎಂದು ತಿಳಿಯಬೇಕಾಗಿದೆ. ಸಾಮಾನ್ಯವಾಗಿ ಇತರ ಯೋಜನೆಗಳಿಗೆ ವಿಭಿನ್ನವಾಗಿ ಆರೋಗ್ಯ ವಲಯಕ್ಕೆ ಒಟ್ಟು 2,23,846 ಕೋಟಿ ರು. ಹಣ ಮೀಸಲಿಟ್ಟಿರುವ ಕೇಂದ್ರ ಸರಕಾರದ ಆರೋಗ್ಯ ಕಾಳಜಿ ತೋರುತ್ತಿದೆ. ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಾಸ್ಥ್ಯ ಭಾರತ ಯೋಜನೆಗೆ (6 ವರ್ಷ) 64,180 ಕೋಟಿ ರು. ನಿಗದಿ ಮಾಡಿರುವುದು ಒಳ್ಳೆಯ ವಿಚಾರ.
ಹಾಗೆಯೇ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಂಜೀವಿನಿ ತಯಾರಿಕೆ 35,000 ಕೋಟಿ ರು. ವಿನಿಯೋಗ ಮಾಡ ಲಾಗುತ್ತಿದೆ. ಹಾಗೆಯೇ ದೇಶದಲ್ಲಿ ಆರೋಗ್ಯ ನಗರಗಳನ್ನಾಗಿ ಮಾರ್ಪಾಡು ಮಾಡಲು 500 ಅಮೃತ ನಗರಗಳ ನಿರ್ಮಾಣ
ಮಾಡಲಾಗುತ್ತಿದ್ದು, ಇತರ ದೇಶಗಳಿಗೂ ಇದು ಮಾದರಿಯಾಗಲಿದೆ. 17 ಗ್ರಾಮೀಣ ವೆಲ್ನೆಸ್ ಸೆಂಟರ್ ಯುನಿಟ್ ಸ್ಥಾಪನೆ, ಆರೋಗ್ಯ ಕ್ಷೇತ್ರದ 3 ವಲಯ ಉನ್ನತಮಟ್ಟಕ್ಕೆ ಅಭಿವೃದ್ಧಿ, ರಾಷ್ಟ್ರೀಯ ಆರೋಗ್ಯ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವಿಕೆ, ರಾಷ್ಟ್ರೀಯ ಸಾಂಕ್ರಾಮಿಕ ರೋಗನಿಯಂತ್ರಣ ಕೇಂದ್ರ ಸ್ಥಾಪನೆ. ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಟ್ಟಿರುವುದು ಕಾಳಜಿ ತೋರುತ್ತದೆ.