Thursday, 28th November 2024

ಕಟ್ಟಿಗೆಯ ಸಾ ಮೀಲ್ ನಲ್ಲಿ ಅಗ್ನಿ ಅವಘಡ: 15 ಲಕ್ಷ ರೂ. ಮೌಲ್ಯದ ಮರ ದಿಂಬಿಗಳು ಅಗ್ನಿಗೆ ಆಹುತಿ

ಪಾವಗಡ: ಸರೋಜ ಕಟ್ಟಿಗೆಯ ಸಾ ಮೀಲ್ ನಲ್ಲಿ ಬಾರಿ ಅಗ್ನಿ ಅವಘಡ ಸುಮಾರು 15 ಲಕ್ಷದ ಮರ ದಿಂಬಿ ಗಳು ಅಗ್ನಿಗೆ ಆಹುತಿಯಾದ ಘಟನೆ ಪಟ್ಟದ ಹೊರವಲಯದಲ್ಲಿ ಸಂಭವಿಸಿದೆ.

ಪಾವಗಡ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ಇರುವ ಪ್ರಕಾಶ. ಎಂಬುವರಿಗೆ ಸೇರಿದ ಸಾ ಮಿಲ್ ರಾತ್ರಿ ಕಿಡಿಗೇಡಿ ಗಳಿಂದ ಈ ಕೃತ್ಯ ವೆಸಗಿರಬಹುದು ಎಂಬುದ ಮಾಲೀಕರ ಅನುಮಾನ.

ಮಧ್ಯರಾತ್ರಿ ಈ ಘಟನೆ ಸಂಭವಿಸಿರುವ ಅಗ್ನಿ ಅವಘಡ ಬೆಳಗ್ಗೆ ಗಮನಿಸಿದ ಕಾರಣ ಸಾ ಮಿಲ್ ನಲ್ಲಿರುವ ಬಹುತೇಕ ಕಟ್ಟಿಗೆಯ ದಿಂಬಿಗಳು ಸುಟ್ಟು ಕರಕಲಾಗಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗ್ನಿ ಹರಿಸುವಲ್ಲಿ ಹರಸಾಹಸ ಪಡುತ್ತಿರುವುದು ಕಂಡುಬಂದಿತು.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗ್ನಿ ಹರಿಸಲು ಸುಮಾರು ಹತ್ತು ಲೋಡ್‌ ನೀರು ತಂದು ಹಾರಿಸಿದರು ಹಾರದ ಆಗ್ನಿ. ಆಗ್ನಿ ಶಾಮಕ ಠಾಣೆಯಲ್ಲಿಯೇ ನೀರಿನ ವ್ಯವಸ್ಥೆ ಇಲ್ಲ. ವಿಪರ್ಯಾಸವೆಂದರೆ ಪಾವಗಡ ಆಗ್ನಿ ಶಾಮಕ ಠಾಣೆಯಲ್ಲಿ ನೀರಿನ ವ್ಯವಸ್ಥೆ ಇಲ್ಲಾದೆ ಮನೆ ಮನೆಗೆ ಹೋಗಿ ನೀರು ತಂದು ಇಂತಹಾ ಆಗ್ನಿ ಅವಘಡಕ್ಕೆ ರಕ್ಷಿಸಲು ಮುಂದಾಗಬೇಕಾದ ಪರಿಸ್ಥಿತಿ ಇಲ್ಲಿನ ಅಗ್ನಿಶಾಮಕ ಸಿಬ್ಬಂದಿ ವರ್ಗದ ಅಳಲು.

ಸಿಬ್ಬಂದಿ ಒಬ್ಬರು ಹೇಳುವ ಪ್ರಕಾರ ಈ ತಿಂಗಳಲ್ಲಿ ತಾಲೂಕಿ ನಲ್ಲಿ 82 ನೇ ಆಗ್ನಿ ಅವಘಡ ಇದು ಆದರೆ ಸ್ವಲ್ಪ ನೀರು ತರುವ ತಡ ಆದರೆ ನಮ್ಮ ಮೇಲೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಆದರೆ ನಮ್ಮ ಠಾಣೆಗೆ ನೀರಿನ ವ್ಯವಸ್ಥೆ ಇಲ್ಲಾ ಇಂದು ನಡೆದ ಆಗ್ನಿ ಅವಘಡಕ್ಕೆ ಹೆಚ್ಚಾಗಿ ನೀರಿನ ವ್ಯವಸ್ಥೆ ಬೇಕಾಗುತ್ತದೆ. ನಾವು ಒಂದು ತಿಂಗಳಿಂದ ರಾತ್ರಿ ಹಗಲು ಕೆಲಸ ಮಾಡುತ್ತಿದ್ದೆವೆ ಎಂಬುದಾಗಿ ಮಾದ್ಯಮ ಬಳಿ ತಿಳಿಸಿದ್ದಾರೆ.