Thursday, 19th September 2024

ಜೇಮ್ಸ್‌, ಲೀಚ್‌ ದಾಳಿಗೆ ಮಂಕಾದ ವಿರಾಟ್‌ ಪಡೆ, ಪ್ರವಾಸಿಗರಿಗೆ 227 ರನ್‌ ಗೆಲುವು

ಚೆನ್ನೈ: ಎಂ.ಸಿ.ಚಿದಾಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಅಕ್ಷರಶಃ ಪ್ರಭುತ್ವ ಸಾಧಿಸಿತು.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ತಂಡ 227 ರನ್ನುಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಪ್ರವಾಸಿ ಇಂಗ್ಲೆಂಡ್‌ ತಂಡ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಮಂಗಳವಾರ ಐದನೇ ದಿನದಾಟ ಭಾರತಕ್ಕೆ ಶುಭಮನ್ ಗಿಲ್ (50) ಅರ್ಧಶತಕ ಗಳಿಸಿ ಔಟಾದರು. ನಾಯಕ ವಿರಾಟ್‌ ಕೊಹ್ಲಿ 72 ರನ್‌ ಗಳಿಸಿ, ಬೆನ್‌ ಸ್ಟೋಕ್‌ ಗೆ ಬೌಲ್ಡ್‌ ಆಗಿ, ತಂಡದ ಸೋಲನ್ನು ಖಚಿತಪಡಿಸಿದರು.

ರಹಾನೆ 0, ವಾಷಿಂಗ್ಟನ್‌ ಸುಂದರ್ 0, ರಿಷಬ್‌ ಪಂತ್‌ 11 ರನ್‌ ಗಳಿಸಿ ಜೇಮ್ಸ್ ‌ಗೆ ವಿಕೆಟ್‌ ಒಪ್ಪಿಸಿದ್ದಾರೆ. 15 ರನ್‌ ಗಳಿಸಿದ್ದ ಚೇತೇಶ್ವರ್‌ ಪೂಜಾರ ರನ್ನು ಜ್ಯಾಕ್ ಲೀಚ್ ಔಟ್‌ ಮಾಡಿದರು.

 

Leave a Reply

Your email address will not be published. Required fields are marked *