ಚೆನ್ನೈ: ಆಸೀಸ್ ವಿರುದ್ದ ಅವರದೇ ನೆಲದಲ್ಲಿ ಆತಿಥೇಯರನ್ನು ೨-೧ ಅಂತರದಿಂದ ಸದೆಬಡಿದು ಗವಾಸ್ಕರ್-ಬೋರ್ಡರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡ ಟೀಂ ಇಂಡಿಯಾ ದಾಖಲೆ ಮಾಡಿತು. ಇದಕ್ಕೆ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರ ನಾಯಕತ್ವವೂ ಕಾರಣ.
ಆ ಬಳಿಕ, ಭಾರತೀಯ ನಾಯಕ ರಹಾನೆ, ನೂರು ಟೆಸ್ಟ್ ಪಂದ್ಯವನ್ನಾಡಿದ ಆಸೀಸ್ ಸ್ಪಿನ್ನರ್ ನಥನ್ ಲಿಯೋನ್‌ಗೆ ಟೀಂ ಇಂಡಿಯಾ ಸದಸ್ಯರ ಸಹಿಯುಳ್ಳ ಜೆರ್ಸಿಯನ್ನು ಕಾಣಿಕೆಯಾಗಿ ನೀಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಆದರೆ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಚೆನ್ನೈ ಟೆಸ್ಟ್‌ನಲ್ಲಿ ಪ್ರವಾಸಿ ತಂಡದ ನಾಯಕ ಜೋ ರೂಟ್ ಕೂಡ ಚೆನ್ನೈ ಟೆಸ್ಟ್ ಪಂದ್ಯ ಆಡುವ ಮೂಲಕ ನೂರು ಟೆಸ್ಟ್ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಈ ಸಾಧನೆಗಾಗಿ, ರೂಟ್, ಟೀಂ ಇಂಡಿಯಾ ನಾಯಕನಿಂದ ಸಹಿಯುಳ್ಳ ಜೆರ್ಸಿ ಪಡೆದಿದ್ದಾರೆಯೇ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಆದರೆ, ರೂಟ್ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಕ್ಕೆ ಭಾರತದ ಹೋಟೆಲ್‌ನಲ್ಲೇ ಕೇಕ್ ಕಟ್ ಮಾಡಿ, ಸಂಭ್ರಮವಾಚರಿಸಿದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.