Thursday, 21st November 2024

ಏರಿಕೆ ಕಂಡ ತೈಲ ದರ: ನವದೆಹಲಿಯಲ್ಲಿ ಪೆಟ್ರೋಲ್‌ 87.60 ರೂ. ಬೆಂಗಳೂರಿನಲ್ಲಿ 90.53 ರೂ

ನವದೆಹಲಿ: ಬುಧವಾರ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಏರಿಕೆ ಆಗಿದೆ. ಪೆಟ್ರೋಲ್ ಲೀಟರ್ ಗೆ 35 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 25 ಪೈಸೆಯನ್ನು ದೆಹಲಿಯಲ್ಲಿ ಹೆಚ್ಚಳ ಮಾಡಿವೆ. ದೆಹಲಿಯಲ್ಲಿ ಲೀಟರ್ ಗೆ ರು. 87.60, ಎನ್ ಸಿಆರ್ ನಲ್ಲಿ ಡೀಸೆಲ್ ರು. 77.73 ತಲುಪುವ ಮೂಲಕ ಹೊಸ ದಾಖಲೆ ಬರೆದಿವೆ.

ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಪ್ರಮಾಣ ತೈಲ ಆಮದು ಮಾಡಿಕೊಳ್ಳುವ ದೇಶ ಭಾರತ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಏರಿಕೆಯಾದರೂ ಅದರಿಂದ ಇಲ್ಲಿ ಬೆಲೆ ಹೆಚ್ಚಾಗುತ್ತದೆ. ಆಮದು ವೆಚ್ಚವನ್ನು ಹೆಚ್ಚು ಮಾಡುತ್ತದೆ.

ಒಂದು ಡಾಲರ್ ಬೆಲೆ ಹೆಚ್ಚಾದರೆ ಭಾರತದ ಆಮದು ವೆಚ್ಚ ವಾರ್ಷಿಕ ಲೆಕ್ಕಾಚಾರದಲ್ಲಿ ರು. 10,700 ಕೋಟಿ ಹೆಚ್ಚಳವಾಗುತ್ತದೆ. ಭಾರತವು 2019-20ರಲ್ಲಿ ಕಚ್ಚಾ ತೈಲ ಆಮದಿಗಾಗಿ 101.4 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಿದೆ.

ಕೊರೊನಾ ನಂತರ ಭಾರತದ ಕಚ್ಚಾ ತೈಲ ಬ್ಯಾಸ್ಕೆಟ್ ದರವು ಏಪ್ರಿಲ್ 2020ರಲ್ಲಿ ಬ್ಯಾರೆಲ್ ಗೆ $ 49.84ಕ್ಕೆ ಚೇತರಿಸಿಕೊಳ್ಳುವ ಮೊದಲಿಗೆ $ 19.90ಗೆ ಕುಸಿದಿತ್ತು.

ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಹೀಗಿದೆ:

ಬೆಂಗಳೂರು: 90.53, 82.40

ಚೆನ್ನೈ: 89.96, 82.90

ಹೈದರಾಬಾದ್: 91.09, 84.79

ಮುಂಬೈ: 94.12, 84.63

ದೆಹಲಿ: 87.60, 77.73

ಕೋಲ್ಕತ್ತಾ: 88.92, 81.31

ಮಂಗಳವಾರ: ತೈಲ ಮಾರ್ಕೆಟಿಂಗ್ ಕಂಪೆನಿಗಳು ಲೀಟರ್ ಪೆಟ್ರೋಲ್ ದರ 35 ಪೈಸೆ ಹೆಚ್ಚಳ ಮಾಡಿದ್ದು, ರು. 87.30ರಲ್ಲಿ ಇದೆ. ಇನ್ನು ಡೀಸೆಲ್ ಕೂಡ ಲೀಟರ್ ಗೆ 35 ಪೈಸೆ ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ ರು. 77.48 ಆಗಿತ್ತು. ಮುಂಬೈನಲ್ಲೂ ಪೆಟ್ರೋಲ್- ಡೀಸೆಲ್ ದರವು ದಾಖಲೆ ಎತ್ತರಕ್ಕೆ ಏರಿದ್ದು, ಪೆಟ್ರೋಲ್ ರು. 93.83 ಮತ್ತು ಡೀಸೆಲ್ ರು. 84.36 ಇದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ರು. 90.22 ಮತ್ತು ಡೀಸೆಲ್ ರು. 82.13 ಇತ್ತು.