Saturday, 23rd November 2024

ಚೆನ್ನೈ ಟೆಸ್ಟ್’ನಲ್ಲಿ ರವಿಚಂದ್ರನ್‌ ಅಶ್ವಿನ್‌ ವಿಶಿಷ್ಟ ದಾಖಲೆ

ಚೆನ್ನೈ: ಭಾರತದ ನೀಡಿದ 329 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.

ಆದರೆ, ಭಾರತದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ವಿಶಿಷ್ಟ ದಾಖಲೆಗೆ ಪಾತ್ರರಾದರು, ಅವರು ಎದುರಾಳಿಯ ಅತೀ ಹೆಚ್ಚು ಎಡಗೈ ಬ್ಯಾಟ್ಸ್’ಮನ್‌ಗಳ ವಿಕೆಟ್ ಕಬಳಿಸಿದ ಮೊದಲ ಬೌಲರ್‌ ಆಗಿ ಮೂಡಿಬಂದರು. 200 ಮಂದಿ ಆಟಗಾರರ ವಿಕೆಟ್ ಕಬಳಿಸಿದ್ದಾರೆ.

ಈ ಪೈಕಿ ಹತ್ತು ಬಾರಿ ಆಸೀಸ್‌ ತಂಡದ ಡೇವಿಡ್‌ ವಾರ್ನರ್‌, ಒಂಬತ್ತು ಸಲ ಆಂಗ್ಲರ ಮಾಜಿ ನಾಯಕ ಅಲಸ್ಟೇರ್‌ ಕುಕ್‌ ಹಾಗೂ ಬೆನ್‌ ಸ್ಟೋಕ್ಸ್‌, ಏಳು ಬಾರಿ ಎಡ್‌ ಕೋವನ್ ಮತ್ತು ಜೇಮ್ಸ್‌ ಆಂಡರ್ಸನ್‌, 36 ಬಾರಿ ಸ್ಟುವರ್ಟ್‌ ಬ್ರಾಡ್‌ ಮುಂತಾದವರ ವಿಕೆಟ್‌ ಕಬಳಿಸಿದ್ದಾರೆ.

ಅಶ್ವಿನ್‌ ಅವರು ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್‌ ಅವರ ದಾಖಲೆ (89 ಟೆಸ್ಟ್’ಗಳಿಂದ 22 ಬಾರಿ ಐದು ವಿಕೆ‌ಟ್‌) ಯನ್ನು ಮೀರಿ ದರು. ಸ್ವದೇಶದಲ್ಲಿ ಶ್ರೀಲಂಕಾದ ಮುರಳೀಧರನ್‌ ಹಾಗೂ ಹೆರಾತ್‌ ಕ್ರಮವಾಗಿ 45 ಮತ್ತು 26 ಬಾರಿ ಹಾಗೂ ಭಾರತದ ಮಾಜಿ ಬೌಲರ್‌ ಅನಿಲ್‌ ಕುಂಬ್ಳೆ 25 ಬಾರಿ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್‌ ಪಡೆದಿದ್ದಾರೆ.