ಬೆಂಗಳೂರು : ಇದೇ ತಿಂಗಳ 22 ರಿಂದ 6-8 ನೇ ತರಗತಿ ಆರಂಭವಾಗಲಿದೆ ಎನ್ನಲಾಗಿದೆ. ಶಾಲೆ ಆರಂಭಕ್ಕೆ ಕೊವಿಡ್ ತಾಂತ್ರಿಕ ಸಮಿತಿ ಸೂಚನೆ ನೀಡಿದೆ.
ಮಂಗಳವಾರ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಶೀಘ್ರದಲ್ಲಿ 1 ರಿಂದ 5 ನೇ ತರಗತಿಯ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವುದಕ್ಕೆ ಸಂಬಂಧಪಟ್ಟಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪ್ರಾರಂಭದಲ್ಲಿ ವಿದ್ಯಾಗಮನವನ್ನು ಜಾರಿಗೆ ತಂದು ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯುವ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎನ್ನಲಾಗಿದೆ.