Friday, 22nd November 2024

ಟೂಲ್ ಕಿಟ್ ಪ್ರಕರಣ: ನಿರೀಕ್ಷಣಾ ಜಾಮೀನು ಪಡೆದ ಶಂತನು ಮುಲುಕ್

ಬಾಂಬೆ: ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಶಂತನು ಮುಲುಕ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ 10 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಳೆದ ಶನಿವಾರ 21 ವರ್ಷದ ಯುವತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಭಾನುವಾರ ದೆಹಲಿಗೆ ಕರೆತಂದ ನಂತರ ಪಟಿಯಾಲಹೌಸ್ ಮ್ಯಾಜಿಸ್ಟ್ರೇಟ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.

ಮುಂಬೈ ಹೈಕೋರ್ಟ್ʼನ ಪ್ರಧಾನ ಪೀಠವು ಈ ಸಂಬಂಧ ಅಂತಾರಾಷ್ಟ್ರೀಯ ಹೋರಾಟಗಾರ್ತಿ ಗ್ರೆಟಾ ಥುನ್ ಬರ್ಗ್ ಟ್ವಿಟರ್ʼ ನಲ್ಲಿ ಹಂಚಿಕೊಂಡಿರುವ ‘ಟೂಲ್ ಕಿಟ್’ ಅನ್ನು ಸೃಷ್ಟಿಸಿದ ಆರೋಪದಲ್ಲಿರುವ ವಕೀಲೆ ನಿಖಿತಾ ಜಾಕೋಬ್ ಅವರ ಟ್ರಾನ್ಸಿಟ್ ಜಾಮೀನು ಅರ್ಜಿಯ ವಿಚಾರಣೆಯನ್ನ ಬುಧವಾರಕ್ಕೆ ಕಾಯ್ದಿರಿಸಿದೆ.