ಸರಕಾರದ ಹಣ ವ್ಯರ್ಥವಾಗದಿರಲಿ
ಸಮಸ್ಯೆಗಳು ಪರಿಹಾರವಾಗಲಿ
ವಿಶೇಷ ವರದಿ: ರಂಗನಾಥ ಕೆ.ಮರಡಿ
ತುಮಕೂರು: ಫೆ.20ರಂದು ಹಮ್ಮಿಕೊಂಡಿರುವ ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ವಿನೂತನ
ಕಾರ್ಯಕ್ರಮ ನೆಪಮಾತ್ರವಾಗದೆ ಅಭಿವೃದ್ಧಿಗೆ ಮುನ್ನುಡಿಯಾಗಲಿ. ಜಿಲ್ಲೆಯಲ್ಲಿ ಶಿರಾ ತಾಲೂಕಿನ ಹೊನ್ನಗಾನಹಳ್ಳಿ, ಯಾದಲಡಕು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿರುವ ಹಳ್ಳಿಗಳು ಇಂದಿಗೂ ಸಮಸ್ಯೆಗಳಿಂದ ಬಳಲುತ್ತಿವೆ.
ಡಿಸಿ ಅವರು ಮಧುಗಿರಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಷ್ಮಿಪುರದಲ್ಲಿ ವಾಸ್ತವ್ಯ ಹೂಡಲಿದ್ದು, ಜಿಲ್ಲೆಯ
ಎಲ್ಲಾ ತಾಲೂಕುಗಳ ತಹಸೀಲ್ದಾರ್ಗಳು ಅನೇಕ ಅಧಿಕಾರಿಗಳೊಂದಿಗೆ ವಾಸ್ತವ್ಯ ಮಾಡಲಿದ್ದು, ಇದರಿಂದ ಹಳ್ಳಿಗಳ ಅನೇಕ
ಸಮಸ್ಯೆಗಳು ಬಗೆಹರಿಯಬೇಕು. ಸರಕಾರದ ಹಣ ಮತ್ತಷ್ಟು ವ್ಯರ್ಥವಾಗುತ್ತದೆ. ಆಯಾ ಗ್ರಾಮಗಳಲ್ಲಿ ಸರಕಾರಿ ಶಾಲೆಗಳನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
ವಾಸ್ತವ್ಯ ಹೂಡುವ ಗ್ರಾಮಗಳು
*ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮಿಪುರ.
*ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಮುಗ್ಳೂರು.
*ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಹಂದನಕೆರೆ.
*ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಬ್ಯಾತಗ್ರಾಮ.
*ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹುಲಿಕುಂಟೆ.
*ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿ.
*ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿ,
*ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ.
*ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ವಿಜ್ಞಸಂತೆ.
*ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಜಿ.ಹೊಸಹಳ್ಳಿ
ವಾಸ್ತವ್ಯದಲ್ಲಿ ಯಾರು ಇರುತ್ತಾರೆ
ಉಪವಿಭಾಗಾಧಿಕಾರಿ
ತಹಸೀಲ್ದಾಾರ್
ಕಂದಾಯ ಇಲಾಖೆ ಅಧಿಕಾರಿಗಳು
ಕೃಷಿ, ತೋಟಗಾರಿಕೆ ಅಧಿಕಾರಿಗಳು
ಆರೋಗ್ಯ, ಆಹಾರ, ಸಮಾಜ ಕಲ್ಯಾಣ, ಇಲಾಖೆ ಅಧಿಕಾರಿಗಳು
ಸ್ಥಳೀಯ ಶಾಸಕರು
ಜಿಪಂ, ತಾಪಂ, ಗ್ರಾಪಂ ಸದಸ್ಯರು
ಅಧಿಕಾರಿಗಳು ಗ್ರಾಮವಾಸ್ತವ್ಯ ಮಾಡುತ್ತಿರುವುದು ಜನರಲ್ಲಿ ಭರವಸೆ ಮೂಡಿಸಿದೆ. ಇದರಿಂದ ಸಮಸ್ಯೆಗಳು ಬಗೆಹರಿಯಬೇಕು.
ವಾಸ್ತವ್ಯದ ನೆಪದಲ್ಲಿ ಸರಕಾರಿ ಖಜಾನೆ ಖಾಲಿಯಾಗಬಾರದು. ವಾಸ್ತವ್ಯದಿಂದ ಹಳ್ಳಿಗಳ ಅಭಿವೃದ್ದಿಯಾಗಬೇಕು.
– ದೇವರಾಜು, ಯುವಮುಖಂಡ
ಗ್ರಾಮವಾಸ್ತವ್ಯದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ಉಳಿದ ಸಮಸ್ಯೆಗಳನ್ನು ಹಂತ,ಹಂತವಾಗಿ ಪರಿಹರಿಸಲಾಗುವುದು.
– ವೈ.ಎಸ್.ಪಾಟೀಲ್ ಡಿಸಿ, ತುಮಕೂರು