Wednesday, 30th October 2024

ಷೇರುಪೇಟೆ: ಸಂವೇದಿ ಸೂಚ್ಯಂಕದಲ್ಲಿ 300 ಅಂಕಗಳ ಏರಿಕೆ

ಮುಂಬೈ: ಸತತ ಕುಸಿತ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಮಂಗಳವಾದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಬಿಎಸ್ ಇ ಸಂವೇದಿ ಸೂಚ್ಯಂಕ 260.39 ಅಂಕಗಳೊಂದಿಗೆ 50,004.71ರ ಗಡಿ ತಲುಪಿದೆ. ಎನ್ ಎಸ್ ಇ ನಿಫ್ಟಿ ಕೂಡಾ 81.50 ಅಂಕಗಳ ಏರಿಕೆಯೊಂದಿಗೆ 14,757.20 ವಹಿವಾಟು ನಡೆಸಿದೆ.

ಸಂವೇದಿ ಸೂಚ್ಯಂಕ ಏರಿಕೆಯಿಂದ ಒಎನ್ ಜಿಸಿ, ಎಲ್ ಆಯಂಡ್ ಟಿ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಆಯಕ್ಸಿಸ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇ.6ರಷ್ಟು ಲಾಭ ಗಳಿಸಿದೆ.

ಕೋವಿಡ್ ಸೋಂಕಿನ ಭೀತಿ ಹೆಚ್ಚಳದ ಹಿನ್ನಲೆಯಲ್ಲಿ ಷೇರುಪೇಟೆ ಹೂಡಿಕೆದಾರರು ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿದ್ದ ಪರಿಣಾಮ ಸೋಮವಾರ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,145.44 ಅಂಕಗಳ ಭಾರೀ ಕುಸಿತ ದಾಖಲಿಸಿ, 49,744.32ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.