Saturday, 23rd November 2024

ಪಂಚರಾಜ್ಯಗಳಿಗೆ ಚುನಾವಣೆ ದಿನಾಂಕ ಫಿಕ್ಸ್

ನವದೆಹಲಿ: ಭಾರತದ ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ  ದಿನಾಂಕಗಳನ್ನು ಶುಕ್ರವಾರ ಪ್ರಕಟಿಸಿದೆ.

ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ. ಮಾರ್ಚ್ 27ರಂದು ಮತದಾನ ನಡೆಯಲಿದ್ದು, ಮೇ 2ರಂದು ಪಂಚ ರಾಜ್ಯಗಳ ಚುನಾವಣೆಗೆ ಮತ ಏಣಿಕೆ ಕಾರ್ಯ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದಂತ ಸುನೀಲ್ ಅರೋರಾ ಅವರು, ಕೊರೋನಾ ಕಾರಣ ದಿಂದಾಗಿ ಸಹೋದ್ಯೋಗಿಯೊಬ್ಬರು ಮೃತರಾದರು. ಅವರ ಆತ್ಮಕ್ಕೆ ಮೊದಲು ಶಾಂತಿಕೋರುತ್ತೇನೆ ಎಂದರು.

ಈ ಬಾರಿ ಶೇ.30ಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಹೆಚ್ಚಳ ಮಾಡಲಾಗಿದೆ. ಕೊರೋನಾ ಕಾರಣದಿಂದಾಗಿ ಮತದಾನದಂದು ನೂಕು ನುಗ್ಗಲು ಈ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಕಾರಣಕ್ಕಾಗಿ ಮತದಾನದ ಕಾಲವನ್ನು ಒಂದು ಗಂಟೆ ಹೆಚ್ಚುವರಿ ಸಮಯಾವ ಕಾಶ ನೀಡಲಾಗಿದೆ ಎಂದರು.

824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಈ ಚುನಾವಣೆಯಲ್ಲಿ 18.68 ಕೋಟಿ ಮತದಾರರು ಭಾಗವಹಿಸ ಲಿದ್ದಾರೆ. 2.7 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂ – 126, ತಮಿಳುನಾಡು – 234, ಪಶ್ಚಿಮ ಬಂಗಾಳ – 294, ಕೇರಳ -140 ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ- 30 ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ ಎಂದರು.

ವಿಧಾನಸಭಾ ಚುನಾವಣೆ ವೇಳಾಪಟ್ಟಿ

ಕೇರಳ:
ಒಂದೇ ಹಂತದಲ್ಲಿ ಎಪ್ರಿಲ್ 6ರಂದು ಮತದಾನ.
ಮತ ಎಣಿಕೆ: ಮೇ 2

ಅಸ್ಸಾಂ: ಮೂರು ಹಂತದ ಚುನಾವಣೆ.
ಮೊದಲ ಹಂತ ಮಾರ್ಚ್ 27
2ನೇ ಹಂತ ಏಪ್ರಿಲ್ 1,
3ನೇ ಹಂತ ಏಪ್ರಿಲ್ 6

ಅಸ್ಸಾಂನಲ್ಲಿ 126, ತಮಿಳುನಾಡಿನಲ್ಲಿ 234, ಪಶ್ಚಿಮ ಬಂಗಾಳದಲ್ಲಿ 294, ಕೇರಳದಲ್ಲಿ 140 ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯಲಿದೆ. ಹಾಗೆಯೇ 2.7 ಲಕ್ಷ ಮತಗಟ್ಟೆಗಳನ್ನು ಹೊಂದಿರಲಿದೆ.

ಅಸ್ಸಾಂ ವಿಧಾನಸಭೆ ಮೇ 31ರವರೆಗೂ ಇರಲಿದ್ದು 126 ಸೀಟುಗಳಿಗೆ ಚುನಾವಣೆ ನಡೆಯಲಿದೆ.

ತಮಿಳುನಾಡು ವಿಧಾನಸಭೆ ಅವಧಿ- ಮೇ 24 , ಒಟ್ಟು ಸೀಟುಗಳು 234,

ಪಶ್ಚಿಮ ಬಂಗಾಳ ವಿಧಾನಸಭೆ ಅವಧಿ ಮೇ 30, ಸೀಟುಗಳು 294,

ಕೇರಳ ವಿಧಾನಸಭೆ-ಜೂನ್ 1, ಸೀಟುಗಳು-140,

ಪುದುಚೇರಿ-30