Friday, 22nd November 2024

ಕೊರೊನಾ ಸೋಂಕು ಹೆಚ್ಚಳ: ಇಂದೋರ್, ಭೂಪಾಲ್‍ನಲ್ಲಿ ರಾತ್ರಿ ಕರ್ಫ್ಯೂ

ಇಂದೋರ್: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರ ಇಂದೋರ್ ಮತ್ತು ಭೂಪಾಲ್‍ನಲ್ಲಿ ರಾತ್ರಿ ಕಫ್ರ್ಯೂ ಜಾರಿಗೆ ನಿರ್ಧರಿಸಿದೆ.

ಮಧ್ಯಪ್ರದೇಶದಲ್ಲಿ ದಿನೇ ದಿನೇ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ಅವರು ಶುಕ್ರವಾರ ತಡರಾತ್ರಿವರೆಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸೋಂಕಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ಇಂದೋರ್ ಮತ್ತು ಭೂಪಾಲ್‍ ಈ ಎರಡೂ ಪ್ರದೇಶಗಳಲ್ಲಿ ಭಾನುವಾರ ಅಥವಾ ಸೋಮವಾರದಿಂದ ರಾತ್ರಿ ಕಫ್ರ್ಯೂ ಜಾರಿ ಗೊಳಿಸಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರದಿಂದ ವಿಮಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಬರುವವರನ್ನು ಕಡ್ಡಾಯ ವಾಗಿ ತಪಾಸಣೆಗೊಳಪಡಿಸಲು ಸರ್ಕಾರ ಆದೇಶಿಸಿದೆ.

ಮಹಾರಾಷ್ಟ್ರದಲ್ಲಿ ಈಗಾಗಲೇ ಸೋಂಕು ಹೆಚ್ಚಾಗಿರುವುದರಿಂದ ಕೆಲವು ಕಡೆ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಮಹಾರಾಷ್ಟ್ರದ ಹಾದಿಯಲ್ಲೇ ಹೆಜ್ಜೆ ಹಾಕಿದೆ.