ಭುವನೇಶ್ವರ್: ಟ್ರಕ್ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ್ದ ಚಾಲಕನಿಗೆ ತಮ್ಮ ವಿರುದ್ಧ ಹೆಲ್ಮೆಟ್ ಧರಿಸದ ಪ್ರಕರಣ ದಾಖಲಾಗಿದ್ದು ಕಂಡು ದಂಗಾಗಿದ್ದಾನೆ.
ಟ್ರಕ್ ಚಾಲಕ ಪ್ರಮೋದ್ ಕುಮಾರ್ ತನ್ನ ವಾಹನದ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಕಚೇರಿಗೆ ತೆರಳಿದ್ದ. ಆತನ ಪರ್ಮಿಟ್ ನವೀಕರಣ ಸಾಧ್ಯವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಪ್ರಮೋದ್ ಕಾರಣ ಕೇಳಿದಾಗ ಪೊಲೀಸರು ನಿಮ್ಮ ವಿರುದ್ಧ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿರುವ ಪ್ರಕರಣ ದಾಖಲಿಸಿ ಒಂದು ಸಾವಿರ ರೂ.ದಂಡ ವಿಧಿಸಿದ್ದಾರೆ.
ದಂಡದ ಮೊತ್ತ ಪಾವತಿಸದಿರುವ ಹಿನ್ನಲೆಯಲ್ಲಿ ವಾಹನದ ಪರ್ಮಿಟ್ ನವೀಕರಣ ಸಾಧ್ಯವಿಲ್ಲ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದಾಗ ಬೆಚ್ಚಿ ಬೀಳುವ ಸರದಿ ಚಾಲಕನದ್ದಾಗಿತ್ತು.
ಹೆಲ್ಮೆಟ್ ಹಾಕಿಕೊಂಡೆ ಟ್ರಕ್ ಚಲಾಯಿಸುವ ಕಾನೂನು ಜಾರಿಗೆ ತಂದರೆ ಅದೇ ರೀತಿ ಮಾಡುತ್ತೇನೆ. ಅದರೆ, ದುರುದ್ದೇಶ ಪೂರ್ವಕವಾಗಿ ಲಂಚ ಕೀಳಲು ಇಲ್ಲಸಲ್ಲದ ಆರೋಪ ಮಾಡುವುದು ಯಾವ ನ್ಯಾಯ ಎಂದು ಪ್ರಮೋದ್ ಪ್ರಶ್ನಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ