ನಾಲ್ಕು ವರ್ಷಗಳಿಂದ ಬಾಕಿ ಹಣ ನೀಡದ ಕೆಡಿಎಲ್‌ಡಬ್ಲ್ಯುಎಸ್
ಕಮಿಷನ್ ಕೊಟ್ಟರಷ್ಟೇ ಹಣ ಪಾವತಿ
ಬೆಂಗಳೂರು: ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್‌ಡಬ್ಲ್ಯುಎಸ್) ಔಷಧ ಸರಬರಾಜು ಮಾಡಿರುವ ಪೂರೈಕೆದಾರರಿಗೆ ನಿಯಮಾನುಸಾರ ನಾಲ್ಕು ವರ್ಷಗಳಿಂದ ಸಂಬಳ ಆಗುತ್ತಿಲ್ಲ. ಇದರಿಂದ ಪೂರೈಕೆ
ದಾರರು ತಮ್ಮ ಸಿಬ್ಬಂದಿಗಳಿಗೂ ವೇತನ ನೀಡದೆ ಪರದಾಡುವಂತಾಗಿದೆ.
ಟೆಂಡರ್ ನಿಯಮಾನುಸಾರ ಔಷಧ ಮತ್ತು ಇತರ ವಸ್ತುಗಳನ್ನು ಪೂರೈಸಿದ ಸರಬರಾಜುದಾರರಿಗೆ 30 ದಿನದೊಳಗೆ ಪೇಮೆಂಟ್ ಮಾಡಬೇಕೆಂಬ ನಿಯಮವಿದೆ. ಕೆಲ ಭ್ರಷ್ಟ ಅಧಿಕಾರಿಗಳು ಬಾಕಿ ಬಿಲ್ ಪಾವತಿಗೆ ಶೇ.10 ರಷ್ಟು ಕಮಿಷನ್ ಕೊಟ್ಟರೆ ಪೇಮೆಂಟ್ ಮಾಡುತ್ತೇವೆ ಎನ್ನುವ ದೂರುಗಳು ಕೇಳಿ ಬಂದಿವೆ. ಇದರಿಂದ ಕೋಟ್ಯಂತರ ರುಪಾಯಿ ಬಂಡವಾಳ ಹೂಡಿ ಔಷಧ ಪೂರೈಸಿ ರುವ ಸರಬರಾಜುದಾರರು ಕಂಗಲಾಗಿದ್ದಾರೆ ಹಾಗೂ ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ. ಅದಷ್ಟೂ ಬೇಗನೆ ಬಾಕಿ ಇರುವ ಪೇಮೆಂಟ್ ಮಾಡಲು ಮನವಿ ಮಾಡಿಕೊಂಡರೂ ಕಮಿಷನ್ ಇಲ್ಲದಿ ದ್ದರೆ ಪೇಮೆಂಟ್ ಮಾಡುವುದಿಲ್ಲ ಎನ್ನುತ್ತಾರೆ.
ನೂರಾರು ಕೋಟಿ ರು. ಇಎಂಡಿ ಬಾಕಿ: ನಿಯಮದಂತೆ ಟೆಂಡರ್ ಪಡೆದ ಕಂಪನಿಗಳು ಲಕ್ಷಾಂತರ ರೂಪಾಯಿ ಭದ್ರತಾ ಠೇವಣಿಯನ್ನು ಪಾವತಿಸಿ ಔಷಧ ಪೂರೈಕೆ ಮಾಡುತ್ತಾರೆ. ನಿಯಮಾನುಸಾರ ಔಷಧ ಪೂರೈಕೆ ಮಾಡಲು ಕಂಪನಿಗಳು ವಿಳಂಬ ಮಾಡಿದರೆ ಆ ಕಂಪನಿಗಳಿಗೆ ಕೆಡಿಎಲ್‌ಡಬ್ಲ್ಯುಎಸ್ ದಂಡ ಹಾಕಲಾಗುತ್ತದೆ. ಆದರೆ, 4 ವರ್ಷಗಳಿಂದ ನೂರಾರು ಕೋಟಿ ಭದ್ರತಾ ಠೇವಣಿ ಹಣವನ್ನು ವಾಪಸ್ ನೀಡುತ್ತಿಲ್ಲ.
ಪ್ರತಿಧ್ವನಿಸಿದ ಪೇಮೆಂಟ್ ವಿಚಾರ: ಈ ಹಿಂದೆ ಶಾಸಕ ಮಾಧುಸ್ವಾಮಿ, ಔಷಧ ಪೂರೈಸಿ 6 ತಿಂಗಳು ಕಳೆದರೂ ಸರಬರಾಜು ದಾರರಿಗೆ ಪೇಮೆಂಟ್ ಆಗದಿರುವ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಈಗ ರಾಜ್ಯದಲ್ಲಿ ಅವರದ್ದೆ ಬಿಜೆಪಿ ಸರಕಾರ ವಿದ್ದರೂ ಬಾಕಿ ಉಳಿದಿರುವ ನೂರಾರು ಕೋಟಿ ರು. ಲ್‌ಲ್ ಪೇಮೆಂಟ್ ಮಾಡದಿರುವುದು ವಿಪರ್ಯಾಸ.
ಕರೋನಾ ಔಷಧ ಪೂರೈಕೆಯ ಪುಡಿಗಾಸು ನೀಡಿಲ್ಲ
ಕರೋನಾ ಹಿನ್ನೆಲೆಯಲ್ಲಿ ಸರಕಾರವು ಅಂದಾಜು 5,500 ಕೋಟಿ ರು. ಖರ್ಚಾಗಿದೆ ಎಂದು ಹೇಳಿದೆ. ಆರೋಗ್ಯ ಇಲಾಖೆಗೆ ಕೋಟ್ಯಂತರ ರು, ಅನುದಾನ ನೀಡಿದೆ. ಕರೋನಾ ನಿವಾರಣೆಗೆ ಔಷಧ ಪೂರೈಸಿರುವ ಕಂಪನಿಗಳಿಗೆ ಪೇಮೆಂಟ್ ಆಗುತ್ತಿದೆ.
ಆದರೆ, ಕರೋನಾ ಮುನ್ನ ಹಾಗೂ ಕರೋನಾ ನಂತರ ಪೂರೈಸಿರುವ ಔಷಧಗಳಿಗೆ ಪೇಮೆಂಟ್ ಮಾಡುವುದಕ್ಕೆ ಹಣ ಇಲ್ಲವೆಂದು ಅಧಿಕಾರಿಗಳು ಸುಳ್ಳು ಹೇಳುತ್ತಾರೆ. ಜಾಸ್ತಿ ಕಮಿಷನ್ ಕೊಟ್ಟವರಿಗೆ ತಕ್ಷಣ ಪೇಮೆಂಟ್ ಆಗುತ್ತದೆ ಎಂಬ ಆರೋಪವಿದೆ.
***
ಕಿರುಕುಳದ ಆರೋಪ ಔಷಧ ಪೂರೈಸಿರುವ ಪೂರೈಕೆದಾರರು ಬಿಲ್‌ಗಳನ್ನು ಸಂಸ್ಥೆಗೆ ಕಳುಹಿಸಲಾಗುತ್ತದೆ. ಬಳಿಕ ಗೋದಾಮಿ ನಲ್ಲಿ ಔಷಧ ಸ್ವೀಕರಿಸುವವರು ಕೆಡಿಎಲ್ ಡಬ್ಲ್ಯುಎಸ್‌ಗೆ ಬಿಲ್ ಕಳುಹಿಸುತ್ತಾರೆ. ಆದರೆ, ಈ ಇಲಾಖೆ ಕೆಲ ಭ್ರಷ್ಟ ಅಧಿಕಾರಿಗಳು ಸರಿಯಾಗಿ ಕಮಿಷನ್ ನೀಡದ ಸರಬರಾಜುದಾರರ ಕಳುಹಿಸಿರುವ ಬಿಲ್‌ಗಳನ್ನು ಮಾಯ ಮಾಡಿ ಮತ್ತೊಮ್ಮೆ ಬಿಲ್ ಕಳುಹಿಸಿ ಎಂದು ಪೂರೈಕೆದಾರರಿಗೆ ನಿರಂತರವಾಗಿ ತೊಂದರೆ ಕೊಡುತ್ತಾರೆ ಎಂದು ಪೂರೈಕೆದಾರರೊಬ್ಬರು ಅಳಲು ತೋಡಿಕೊಂಡಿ ದ್ದಾರೆ.
***
ಟೆಂಡರ್‌ನಲ್ಲಿ 30 ದಿನದಲ್ಲಿ ಪೇಮೆಂಟ್ ಆಗಬೇಕೆಂಬ ನಿಯಮವಿದೆ.
4 ವರ್ಷಗಳು ಕಳೆದರೂ ಬಾಕಿ ಬಿಲ್ಗೆ ಪೇಮೆಂಟ್ ಆಗುತ್ತಿಲ್ಲ
ನೂರಾರು ಕೋಟಿ ಬಿಲ್‌ಗಳು ಬಾಕಿ
ನೆರೆಯ ತಮಿಳುನಾಡು ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತದೆ
ಬಾಕಿ ಭದ್ರತಾ ಠೇವಣಿ ಮೊತ್ತವನ್ನು ವಾಪಸ್ ನೀಡುತ್ತಿಲ್ಲ.
ಉಳಿದ ಕಾಯಿಲೆಗಳಿಗೆ ಔಷಧ ಪೂರೈಸಿರುವವರಿಗೆ ಪೇಮೆಂಟ್ ಆಗುತ್ತಿಲ್ಲ