ಔಷಧೀಯ ಗುಣವುಳ್ಳ ಮಹತ್ವದ ಬೆಳೆ ರೈತ ಧರೆಪ್ಪ ಉಳ್ಳಾಗಡ್ಡಿ ಪ್ರಯತ್ನಕ್ಕೆ ಯಶಸ್ಸು
ಟಿ.ಚಂದ್ರಶೇಖರ ರಬಕವಿ-ಬನಹಟ್ಟಿ
ಗೋಧಿ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಕೆಂಪು ಅಥವಾ ಬಿಳಿ ಬಣ್ಣ ರೂಪದಲ್ಲಿರುವ ಅದಕ್ಕೆ ಮತ್ತೊಂದು ಬಣ್ಣವೇ ಗೋಧಿ ಬಣ್ಣವೆಂದು ಕರೆಯುವುದುಂಟು. ಆದರೆ ಕಪ್ಪು ಬಣ್ಣದ ಗೋಧಿ ಇರುವುದು ಉತ್ತರ ಭಾರತದಲ್ಲಿ, ಅದರಲ್ಲೂ ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು.
ಕಪ್ಪು ಗೋಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಿಟಮಿನ್ ಬಿ, ಪಾಲಿಕ್ ಆಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನು ಹೊಂದಿದೆ. ಇದೀಗ ಕರ್ನಾಟಕದಲ್ಲಿಯೂ ಈ ಬೆಳೆಗೆ ಭಾರಿ ಬೇಡಿಕೆ ಬರುತ್ತಿರುವ ಹಿನ್ನೆಲೆ ಇದೀಗ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಪ್ರಗತಿಪರ ರೈತ ಧರೆಪ್ಪ ಉಳ್ಳಾಗಡ್ಡಿ ಒಂದಿಲ್ಲ ಒಂದು ಹವ್ಯಾಸದಲ್ಲಿ ತೊಡಗಿರುವುದು ನಿರಂತರ.
ಕೇವಲ ಅರ್ಧ ಎಕರೆಯಲ್ಲಿ ಮಾತ್ರ ಮೊಟ್ಟ ಮೊದಲು ಬೆಳೆದು ಸೈ ಎನ್ನಿಸಿಕೊಂಡಿರುವ ಧರೆಪ್ಪ, ಮೊದಲಿಗೆ ಕಪ್ಪು ಗೋಧಿ ಯನ್ನು ಬೆಳೆಯಲು ಅಧೈರ್ಯವಾದರೂ ಕೆಂಪು ಗೋಧಿಯನ್ನು ಬೆಳೆದಷ್ಟೇ ಸಲೀಸಾಗಿ ಬೆಳೆಗೆ ಬೇಕಾದ ಪೋಷ್ಟಿಕಾಂಶಗಳನ್ನು ನೀಡುತ್ತ ಇದೀಗ 110 ದಿನಗಳಲ್ಲಿ ಬೆಳೆ ಬರುವಲ್ಲಿ ಕಾರಣರಾಗಿದ್ದಾರೆ.
ಈ ಭಾಗದಲ್ಲಿಯೇ ಮೊಟ್ಟ ಮೊದಲಿಗೆ ಕಪ್ಪು ಗೋಧಿ ಬೆಳೆದು ವಾತಾವರಣದ ಪ್ರಭಾವವಿಲ್ಲವೆಂದು ತೋರಿಸಿಕೊಟ್ಟಿದ್ದಾರೆ.
ಸುಮಾರು 20 ಕೆ.ಜಿ.ಯಷ್ಟು ಬೀಜವನ್ನು ಮಧ್ಯಪ್ರದೇಶದಿಂದ ತರಿಸಿ, ಭೂಮಿಯಲ್ಲಿ ನೆಟ್ಟು ಅದಕ್ಕೆ ಬೇಕಾದ ಪೂರಕ ಗೊಬ್ಬರ ವನ್ನೆಲ್ಲ ಸಾವಯವ ರೂಪದಲ್ಲಿ ಒದಗಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಸಾಮಾನ್ಯ ಬೆಳೆ: ಕಪ್ಪು ಗೋಧಿಯನ್ನು ಬೆಳೆಯಬೇಕಾದರೆ ಯಾವದೇ ಸಮಸ್ಯೆ ಎದುರಾಗದು, ಸಾಮಾನ್ಯವಾಗಿ ಕೆಂಪು ಗೋಧಿಯನ್ನು ಬೆಳೆದಷ್ಟು ರೀತಿಯಲ್ಲಿಯೇ ಸುಲಭವಾಗಿ ಬೆಳೆಯಬಹುದಾಗಿದೆ. ಎಕರೆಗೆ 10 ಕ್ವಿಂಟಾಲ್‌ನಷ್ಟು ಬೆಳೆ ಬರುವ
ಸಾಧ್ಯತೆಯಿದೆ. ಆದಾಯ ಮಾತ್ರ ಕೆಂಪು ಗೋಧಿಗಿಂತಲೂ ದುಪ್ಪಟ್ಟು.
ಉತ್ತಮ ಬೆಲೆ: ಕಪ್ಪು ಗೋಧಿಗೆ ಇದೀಗ 80 ರು.ಗೆ ಒಂದು ಕೆಜಿಯಷ್ಟು ಬೆಲೆ ಇದೀಗ ಬಂದಿದೆ. 120 ರು.ಗಳವರೆಗೆ ಬರುವ ನಿರೀಕ್ಷೆಯಿದ್ದು, ಕಾದು ನೋಡಬೇಕೆನ್ನುತ್ತಾರೆ ಬೆಳೆಗಾರ ಧರೆಪ್ಪ ಕಿತ್ತೂರ. ಸ್ವಂತ ಮಾರುಕಟ್ಟೆ ಹೊಂದಿರುವ ಕಾರಣ ಸುಲಭ ವಾಗಿ ಮಾರಾಟ ಮಾಡುವಲ್ಲಿ ಕಾರಣವಾಗಲಿದೆ.
ಚಪಾತಿ ಹಾಗು ಹೋಳಿಗೆ ತಯಾರಿಸಲು ಕಪ್ಪು ಗೋಧಿ ಔಷಧೀಯ ಗುಣವುಳ್ಳದ್ದಾಗಿದ್ದರಿಂದ ಭಾರಿ ಬೇಡಿಕೆ ನಿರೀಕ್ಷೆಯಿದೆ. ಹೆಚ್ಚಿನ ಮಾಹಿತಿಗೆ 99162-38273 ನಂಬರನ್ನು ಸಂಪರ್ಕಿಸಬಹುದು.