Saturday, 23rd November 2024

ಜನತಾ ಕರ್ಫ್ಯೂ ಇಡೀ ವಿಶ್ವಕ್ಕೆ ಸ್ಫೂರ್ತಿ: ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಪರಿಣಾಮ ಕಳೆದ ವರ್ಷ ಇದೇ ಮಾರ್ಚ್ ತಿಂಗಳಿನಲ್ಲಿ ಹೇರಲಾಗಿದ್ದ ಜನತಾ ಕರ್ಫ್ಯೂ ಇಡೀ ವಿಶ್ವಕ್ಕೆ ಸ್ಫೂರ್ತಿಯಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 75ನೇ  ‘ಮನ್ ಕಿ ಬಾತ್’ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಜನತಾ ಕರ್ಫ್ಯೂ ಬಗ್ಗೆ ಮಾತನಾಡಿದ ಪಿಎಂ, ಜನತಾ ಕರ್ಫ್ಯೂ ಇಡೀ ಜಗತ್ತಿಗೆ ಸ್ಫೂರ್ತಿಯಾಗಿದೆ, ಏಕೆಂದರೆ ಇದು ಶಿಸ್ತಿನ ಒಂದು ಅಸಾಧಾರಣ ಉದಾಹರಣೆಯಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ಹೋರಾಟದಲ್ಲಿ ನಮ್ಮ ಹೋರಾಟಗಾರರು ಅಸಂಖ್ಯಾತ ಕಷ್ಟಗಳನ್ನು ಎದುರಿಸಿದ್ದಾರೆ. ದೇಶಕ್ಕಾಗಿ ಅವರು ತಮ್ಮ ಪ್ರಾಣ ತ್ಯಾಗವನ್ನು ತಮ್ಮ ಕರ್ತವ್ಯ ಎಂದು ಪರಿಗಣಿಸಿದ್ದರು. ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಲಿವೆ.

ವಿಶ್ವದಲ್ಲಿಯೇ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ನಡೆಸುತ್ತಿದ್ದೇವೆ. ಜನರು ತಮ್ಮ ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಹಾಕಿಸಿ ಅದರ ಫೋಟೋವನ್ನು ಟ್ವೀಟರ್‌ಗಳಲ್ಲಿ ಹಾಕುತ್ತಿದ್ದಾರೆ. ವಿಶ್ವದ ಅತೀದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಉತ್ತರಪ್ರದೇಶದ ಜಣನ್ಪುರದಲ್ಲಿ 109 ವರ್ಷದ ವೃದ್ಧ ಮಹಿಳೆ ಸ್ವತಃ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ದೆಹಲಿಯಲ್ಲಿ 107 ವರ್ಷದ ವ್ಯಕ್ತಿಯು ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆಯುವಂತೆ ಜನರಿಗೆ ಸಾವು ಅರಿವು ಮೂಡಿಸಬೇಕೆಂದಿದ್ದಾರೆ.

ಸಾಕಷ್ಟು ಮಹಿಳಾ ಸ್ಪರ್ಧಿಗಳು ತಮ್ಮ ಹೆಸರಿನಲ್ಲಿ ದಾಖಲೆ ಮತ್ತು ಪದಕಗಳನ್ನು ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ಆಯೋ ಜಿಸಿದ್ದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್ ನಲ್ಲಿ ಭಾರತ ಉನ್ನತ ಸ್ಥಾನ ಪಡೆದುಕೊಂಡಿತ್ತು. ಇಟಲಿಯಲ್ಲೂ ಕೂಡ ಚಿನ್ನದ ಪದಕದಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿತ್ತು.

ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಮಿಥಾಲಿ ರಾಜ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿಯವರು, ಮಿಥಾಲಿ ರಾಜ್‌ ಅವರ ಕಠಿಣ ಶ್ರಮ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ದವಾಯಿ ಭೀ, ಕಡಾಯ್ ಭೀ ಮಂತ್ರಕ್ಕೆ ಜನರನ್ನು ನಾವು ಬದ್ಧರಾಗಿಸಬೇಕಾಗಿದೆ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಸಾಹಸವಿರಲಿ, ಸ್ಥಳದ ಇತಿಹಾಸವೇ ಇರಲಿ ಅತವಾ ದೇಶದ ಯಾವುದೇ ಸಾಂಸ್ಕೃತಿಕತೆ ಇರಲಿ ಅದನ್ನು ಅಮೃತ ಮಹೋತ್ಸವ ವೇಳೆ ಮುನ್ನೆಲೆಗೆ ತರಬೇಕು ಮತ್ತು ಅದು ದೇಶದ ಪ್ರತೀಯೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಬಿಡಬ್ಲ್ಯುಎಫ್ ಓಪನ್ ಸೂಪರ್ 300 ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು, 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಿಥಾಲಿ ರಾಜ್ ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಗುರುಡುಂ ಗ್ರಾಮದ ಡಾರ್ಜಿಲಿಂಗ್ ನ ಜನರು ಜೇನು ಕೃಷಿಯನ್ನು ಕೈಗೆತ್ತಿಕೊಂಡಿದ್ದು, ಇಂದು ಅವರು ಬೆಳೆದ ಜೇನುಕೃಷಿಗೆ ಸಾಕಷ್ಟು ಬೇಡಿಕೆ ಇದೆ. ಇದರಿಂದ ಅವರ ಆದಾಯವೂ ಹೆಚ್ಚುತ್ತಿದೆ. ಅವರು ಭಾರತ್ ಅಭಿಯಾನಕ್ಕೆ ನೆರವಾಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily