Friday, 22nd November 2024

ಟಾಸ್‌ ಗೆದ್ದ ಇಂಗ್ಲೆಂಡ್‌, ಟೀಂ ಇಂಡಿಯಾ ಬ್ಯಾಟಿಂಗ್‌: ನಟರಾಜನ್’ಗೆ ಛಾನ್ಸ್‌

ಪುಣೆ: ಅಂತಿಮ ಹಣಾಹಣಿಗೆ ಭಾರತ- ಇಂಗ್ಲೆಂಡ್ ತಂಡಗಳು ಸಜ್ಜಾಗಿವೆ. ಸರಣಿಯಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು ಭಾನುವಾರದ ಪಂದ್ಯ ಗೆದ್ದು, ಸರಣಿ ಗೆಲ್ಲುವ ಇರಾದೆಯಲ್ಲಿದೆ. ಟೀಂ ಇಂಡಿಯಾಕ್ಕೆ ಇಂಗ್ಲೆಂಡಿನ ಬಲಾಢ್ಯ ಬ್ಯಾಟಿಂಗ್‌ ಸವಾಲಾಗಿದ್ದು, ಆರಂಭದಲ್ಲಿ ವಿಕೆಟ್ ಕಿತ್ತರೆ, ಮೇಲುಗೈ ಸಾಧಿಸಬಹುದು. ಅಂದ ಹಾಗೆ ಭಾರತದ ಬ್ಯಾಟಿಂಗ್‌ ಉತ್ತಮರನ್ನೇ ಹೊಂದಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಹಂಗಾಮಿ ನಾಯಕ ಬೋಸ್ ಬಟ್ಲರ್, ವಿರಾಟ್ ಕೊಹ್ಲಿ ಪಡೆಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.

ಎರಡೂ ತಂಡಗಳಲ್ಲಿ ಒಂದೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಟೀಂ ಇಂಡಿಯಾದಲ್ಲಿ ಕುಲದೀಪ್ ಯಾದವ್ ಬದಲಿಗೆ ನಟರಾಜನ್ ಬಂದರೆ, ಇಂಗ್ಲೆಂಡ್ ತಂಡದಲ್ಲಿ ಟಾಮ್ ಕರ್ರನ್ ಬದಲಿಗೆ ಮಾರ್ಕ್‌ ವುಡ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡಗಳು

ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್(ಕೀ)‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌, ಶಾರ್ದೂಲ್‌ , ಪ್ರಸಿದ್ಧ್ ಕೃಷ್ಣ, ಟಿ. ನಟರಾಜನ್‌.

ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ ಸ್ಟೊ, ಬೆನ್‌ ಸ್ಟೋಕ್ಸ್‌, ಡೇವಿಡ್‌ ಮಲಾನ್‌, ಜಾಸ್‌ ಬಟ್ಲರ್‌ (ನಾಯಕ/ಕೀ), ಲಿಯಮ್‌ ಲಿವಿಂಗ್‌ಸ್ಟೋನ್‌, ಮೊಯಿನ್‌ ಅಲಿ, ಸ್ಯಾಮ್‌ ಕರನ್‌, ಮಾರ್ಕ್‌ ವುಡ್‌, ಆದಿಲ್‌ ರಶೀದ್‌, ರೀಸ್‌ ಟಾಪ್ಲಿ

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily