ಹಲವು ಉದ್ಯಮಗಳ ಬೆಳವಣಿಗೆಗೆ ತಾಂತ್ರಿಕತೆ ಬಹು ದೊಡ್ಡ ಪಾತ್ರ ವಹಿಸಿದೆ. ಅದರಲ್ಲೂ ಆನ್‌ಲೈನ್ ಗೇಮ್ ಉದ್ಯಮಕ್ಕೆ
ತಾಂತ್ರಿಕತೆ ಮತ್ತು ಇಂಟರ್‌ನೆಟ್‌ನ ಕೊಡುಗೆ ಅತಿ ಪ್ರಮುಖವಾದದ್ದು.
ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಮತ್ತು ತಾಂತ್ರಿಕತೆಯಿಂದಾಗಿ ಮೋಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗಳನ್ನು ಆಡಲು ಪ್ರೇರೆಪಿಸಿವೆ. ಇದರಿಂದ ಕ್ಷಣದಲ್ಲೇ ದುಡ್ಡನ್ನು ತಮ್ಮದಾಗಿಸಿಕೊಳ್ಳುವ ಹವಣಿಕೆ ಅವರದ್ದಾಗಿದೆ. ಇದರಿಂದ ಆನ್‌ಲೈನ್’ನಲ್ಲಿ ಸಿಗುವ ಹಣದ ಜೊತೆಗೆ ಕೋಂಚ ಥ್ರಿಲ್ ಕೂಡ ತಮ್ಮದಾಗಿಕೊಳ್ಳಬಹುದು.
ಹೀಗೆ ತಮ್ಮದಾಗಿಸಿಕೊಂಡ ಥ್ರಿಲ್ ಮತ್ತು ಹಣವನ್ನು ತಮ್ಮ ಗೆಳೆಯರಿಗೂ ಹೇಳಿಕೊಳ್ಳುವವರಿದ್ದಾರೆ. ಇದೂ ಆನ್‌ಲೈನ್‌ನಲ್ಲಿ
ಆಟವಾಡಲು ಇಷ್ಟ ಪಡುವವರ ಸಂಖ್ಯೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇನ್ನು ಕೆಲವರು ಇದನ್ನೇ ಒಂದು ಉದ್ಯೋಗ ಮಾಡಿಕೊಳ್ಳುವ ಅವಕಾಶ ಎಂದು ನಂಬಿದ್ದಾರೆ ಕೂಡ.
ಆನ್‌ಲೈನ್ ಆಟಗಳು ಮಾನಸಿಕ ಮತ್ತು ಭಾವನಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತವೆ. ಮತ್ತೆ ಇದು ಕೆಲವರ ವಿಷಯದಲ್ಲಿ ಸತ್ಯವು ಹೌದು. ಅಂತವರು ತೀರ ವಿರಳ ಎನ್ನಬಹುದು. ಅಂತಹ ಕೆಲವರು ಆನ್‌ಲೈನ್ ಆಟಗಳ ವ್ಯಸನಿಗಳಾಗಿದ್ದಾರೆ. ಅದರೆ ಇಂತಹ ಆಟಗಳಿಂದ ಮನುಷ್ಯ ಅಲರ್ಟ್ ಆಗಿರಲು ಮತ್ತು ಸಮಸ್ಯೆಗಳನ್ನು ಎದುರಿಸಲು ಶಕ್ತನಾಗುತ್ತಾನೆ ಎಂದು ಸಾಬೀತಾಗಿದೆ.
ಇದರಿಂದ ಆನ್‌ಲೈನ್‌ನಲ್ಲಿ ಭಾಗವಹಿಸುವವನ ಧನಾತ್ಮಕ ಪರಿಣಾಮ ಬೀರುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಇಲ್ಲಿ ಕೆಲವು ಅಂತರ್ಗತ ಪರಿಣಾಮಗಳು ಇವೆ. ಆದರೆ ಆನ್‌ಲೈನ್ ಆಟಗಳಿಂದ ಸಿಗುವ ಹಲವು ಲಾಭಗಳನ್ನು ನಾವು ಮರೆಯು ವಂತಿಲ್ಲ. ಮಾನಸಿಕ ಆರೋಗ್ಯದ ಮೇಲೆ ಆನ್‌ಲೈನ್ ಆಟಗಳು ಪರಿಣಾಮಕಾರಿಯಾಗಿ ಪ್ರಭಾವ ಬೀರಬಲ್ಲವು ಎಂಬುದನ್ನು ಕೆಲ
ಅಧ್ಯಯನಗಳ ಸಾಬೀತುಪಡಿಸಿವೆ.
ಆನ್‌ಲೈನ್ ಆಟಗಳನ್ನು ಆಡುವಾಗ ಪ್ರಮುಖವಾಗಿ ನಾವು ನಮ್ಮ ನೆನಪಿನ ಶಕ್ತಿಯ ಮೇಲೆ ಕೇಂದ್ರೀಕರಿಸುತ್ತೇವೆ. ಆನ್‌ಲೈನ್
ಆಟಗಳು ನೀಡುವ ಮಾಹಿತಿಯನ್ನು ನಮ್ಮ ನೆನಪಿನ ಶಕ್ತಿಯಿಂದ ನಾವು ಗ್ರಹಿಸುತ್ತೇವೆ. ಹೀಗೆ ಆನ್‌ಲೈನ್ ಆಟಗಳು ನೀಡುವ ಅಮೂಲ್ಯ ಮಾಹಿತಿಯನ್ನು ನಮ್ಮದಾಗಿಸಿಕೊಳ್ಳಲು ಹಲವು ದಾರಿಗಳಿವೆ.
ಉದಾಹರಣೆಗೆ ಆಟದಲ್ಲಿನ ಸ್ಥಳಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು. ಆಟಗಳ ಕೆಲ ವಸ್ತುಗಳನ್ನು ನೆನಪಿನಲ್ಲಿ ಇಟ್ಟು ಕೊಳ್ಳುವುದು, ಹಂತ ಹಂತವಾಗಿ ಮೇಲೇರುವುದು ಹಾಗೂ ಆಯಾ ಹಂತದಲ್ಲಿ ನೀಡಲಾಗುವ ಸಮಸ್ಯೆಗಳನ್ನು ಬಗೆಹರಿಸುವುದು. ಈ ಎಲ್ಲದಕ್ಕಿಂತ ಹೆಚ್ಚಾಗಿ ಮನಸ್ಸನ್ನು ಕೇಂದ್ರೀಕರಿಸುವುದು ಜತೆಗೆ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯತಂತ್ರ
ರೂಪಿಸುವುದು ಸುಲಭದ ಕೆಲಸವಲ್ಲ. ಇದರಿಂದ ನಮ್ಮ ಮೆದಳನ್ನು ಇನ್ನಷ್ಟು ತೀಕ್ಷಗೊಳಿಸಿಕೊಳ್ಳಬಹುದು. ಆಟ ಯಾವುದೇ ಇದ್ದರೂ ಆಟದ ಮೇಲೆ ಸಂಪೂರ್ಣ ಗಮನ ಇಡಬೇಕಾಗುವುದು ಆಟಗಾರನಿಗೆ ಇರಬೇಕಾದ ಪ್ರಮುಖ ಮತ್ತು ಅತಮುಖ್ಯ ಗುಣ, ಇದರಿಂದ ಯಾವುದೇ ಆಟದಲ್ಲಿ ಪರಿಣಿತಿ ಹಾಗೂ ಗೆಲುವು ಸಾಧಿಸಲು ಸಾಧ್ಯ.
ಆಟದ ಅನುಗುಣವಾಗಿ ಬೇಕಾಗುವ ರಕ್ಷಣಾ ನಿಯಂತ್ರಣ, ಆಟಗಾರನ ಆರೋಗ್ಯದ ಗುಣಮಟ್ಟ ಮತ್ತು ಎದುರಾಳಿಗೆ ತಕ್ಕ ಪ್ರತಿದಾಳಿ ನಡೆಸುವುದು ಕೂಡ ಮುಖ್ಯವಾಗುತ್ತದೆ. ಅಂತಿಮವಾಗಿ ಜಯ ಸಾಧಿಸಲೇ ಬೇಕು ಎಂಬ ಛಲ ಹೊಂದಿದ್ದರೆ ಅದಕ್ಕೆ
ಏಕಾಗ್ರತೆ ಮತ್ತು ಆಟದ ಮೇಲೆ ಗಮನ ಕೇಂದ್ರೀಕರಿಸುವುದು ಅತಿ ಮುಖ್ಯವಾಗುತ್ತದೆ. ಆನ್‌ಲೈನ್ ಆಟಗಳು ಆಟಗಾರನಿಗೆ ಮನೋರಂಜನೆ ಜತೆಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಲೂ ಕೂಡ ಸಹಕಾರಿ ಎಂಬುದೂ ಕೂಡ ಸತ್ಯ.
ನಾಯಕತ್ವ ಗುಣ, ತಂಡದ ನಿರ್ವಹಣೆ, ಮುನ್ನಡೆಸುವ ಚಾಕಚಕ್ಯತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಛಾತಿಯನ್ನು ಬೆಳೆಸಿ ಕೊಳ್ಳಲು ಆನ್‌ಲೈನ್ ಆಟಗಳು ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ತಳ್ಳಿ ಹಾಕುವಂತದ್ದಲ್ಲ. ಇದರ ಜತೆಗ ಮೂಡ್
ಸ್ವಿಂಗ್‌ಗಳು, ಮನಸ್ಸಿನ ಗೊಂದಲ ನಿವಾರಣೆ, ಒಂಟಿತನ ಮತ್ತು ಒತ್ತಡ ನಿವಾರಣೆಗೂ ಕೂಡ ಆನ್ ಲೈನ್ ಗೇಮ್‌ಗಳು ಸಹಕಾರಿ
ಆಗಿದ್ದು, ಇದು ಜಗತ್ತಿನಾದ್ಯಂತ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಿನ ಆಟಗಳಾಗಿವೆ.
ಆನ್‌ಲೈನ್ ಆಟಗಳು ಆಟಗಾರರು ನಿರೀಕ್ಷೆ ಮಾಡದೇ ಇದ್ದಂತಹ ಸವಾಲುಗಳು, ಪರಿಸ್ಥಿತಿಗಳು ಇದ್ದಕ್ಕಿದ್ದಂತೆ ಮೂಡಿ ಬಿಡುತ್ತವೆ. ಇದರಿಂದಾಗಿ ಆಟಗಾರ ತನ್ನ ಪರಿದೆಗೂ ಮೀರಿದ ಯೋಚನೆ ಲಹರಿಯತ್ತ ಹೊರಳಲೇ ಬೇಕಾಗುತ್ತದೆ. ಇದರ ಜತೆಗೆ, ಕ್ರಿಯೇಟಿವ್ ಯೋಚನೆಗಳು, ಔಟ್ ಆಫ್ ದ ಬಾಕ್ಸ್ ಎನ್ನಬಹುದಾದ ನಿರ್ಧಾರಗಳನ್ನು ಆಟಗಾರರು ತಮ್ಮ ಯೋಚನಾ ಲಹರಿಯೊಳಗೆ
ಸೇರಿಸಿಕೊಳ್ಳುತ್ತಾರೆ.
ಇದೇ ಅಭ್ಯಾಸವು ನಿಜ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಕೂಡ ಸಹಾಯ ಮಾಡುತ್ತವೆ. ಒತ್ತಡ ಮತ್ತು ಫಾಸ್ಟ್ ಬದುಕಿನ ಇಂದಿನ ದಿನಗಳಲ್ಲಿ ಆನ್‌ಲೈನ್ ಆಟಗಳು ವ್ಯಕ್ತಿಯ ಉತ್ತಮ ಸಂಗಾತಿಯಾಗುತ್ತಿವೆ. ಓಡುತ್ತಿರುವ ಈ ಜಗತ್ತಿನಲ್ಲಿ ನಾನು ಒಬ್ಬಂಟಿಯಲ್ಲ ಎಂಬ ನಂಬಿಕೆ ಮತ್ತು ಹುರುಪು ತುಂಬಲು ಆನ್‌ಲೈನ್ ಗೇಮ್ ಗಳು ಸಹಕಾರಿ ಆಗಿವೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಆನ್‌ಲೈನ್ ಆಟಗಳಿಂದ ಇರುವ ಒಳ್ಳೆಯ ವಿಚಾರಗಳ ಬಗ್ಗೆ ಗಮನ ಹರಿಸಿ, ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ, ಬದುಕೇ ಸುಂದರ ಎನಿಸಿಕೊಳ್ಳುತ್ತದೆ.