Saturday, 14th December 2024

ದಕ್ಷಿಣ ಭಾರತ ಚಿತ್ರರಂಗಕ್ಕೆ ಮಹತ್ವದ ಕ್ಷಣ

ಪ್ರಸ್ತುತ ಈ ಬಾರಿಯ 51ನೇ ದಾದಾ ಸಾಹೇಬ್ ಪ್ರಶಸ್ತಿಗೆ ಖ್ಯಾತ ನಟ ರಜನಿಕಾಂತ್ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಗೆ ಎಷ್ಟು ಮಹತ್ವ ವಿದೆಯೋ ಅಷ್ಟೇ ಇತಿಹಾಸವೂ ಇದೆ. ದುಂಡಿರಾಜ್ ಗೋವಿಂದ ಫಾಲ್ಕೆ ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಹಾಗೂ ನಿರ್ಮಾಪಕ. ಇವರನ್ನು ಭಾರತೀಯ ಚಿತ್ರರಂಗ ಗುರುತಿಸುವುದು ದಾದಾ ಸಾಹೇಬ್ ಫಾಲ್ಕೆ ಹೆಸರಿನಿಂದ.

1913ರಲ್ಲಿ ತೆರೆಕಂಡ ಭಾರತ ಮೊಟ್ಟ ಮೊದಲ ಕಥಾಚಿತ್ರದ ರಾಜಾ ಹರಿಶ್ಚಂದ್ರದ ನಿರ್ದೇಶಕ – ನಿರ್ಮಾಪಕರು.  ಸಂಕಷ್ಟ ದಲ್ಲಿಯೂ ಕುಗ್ಗದೆ 40ನಿಮಿಷ ಅವಧಿಯ ಕಥಾಚಿತ್ರವನ್ನು ಭಾರತೀಯ ಚಿತ್ರರಂಗಕ್ಕೆ ಸಮರ್ಪಿಸಿದವರು. ಆದ್ದರಿಂದ ಇವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಯಲಾಗುತ್ತದೆ. ಕೇಂದ್ರ ಸರಕಾರವು ಇವರ ಜನ್ಮ ಶತಾಬ್ದಿ ವರ್ಷ (1969) ದಿಂದ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವ ಪದ್ಧತಿಯನ್ನು ಆರಂಭಿಸಿದೆ. ಇವರಿಗೆ ಲಭ್ಯವಾಗಿರುವ ಈ ಪ್ರಶಸ್ತಿ ನಮಗೆ ಎರಡು ಕಾರಣಗಳಿಗಾಗಿ ಬಹುಮುಖ್ಯ.

ಪ್ರಶಸ್ತಿಗೆ ಪಾತ್ರರಾಗಿರುವ ರಜನಿಕಾಂತ್ ಮೂಲತಃ ಕರ್ನಾಟಕದವರು ಎನ್ನುವ ಕಾರಣ ಒಂದೆಡೆಯಾದರೆ, ಮತ್ತೊಂದೆಡೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎರಡನೆ ಬಾರಿಗೆ ದೊರೆಯುತ್ತಿರುವ ಮಹತ್ವದ ಗೌರವ. ಈ ಪ್ರಶಸ್ತಿ ಇಡೀ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತದೆ. ಆದರೆ ಮೊದಲಿನಿಂದಲೂ ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರವೇ ಎಂಬಂತಾಗಿದೆ. ಕಾಲಿವುಡ್-ಟಾಲಿವುಡ್-ಸ್ಯಾಂಡಲ್‌ವುಡ್ ಒಳಗೊಂಡ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಸಾಧಕರಿದ್ದರೂ, ದೊರೆತ ಮನ್ನಣೆ ಕಡಿಮೆ.

1995ರಲ್ಲಿ ಡಾ.ರಾಜ್‌ಕುಮಾರ್ ಅವರಿಗೆ ಈ ಪ್ರಶಸ್ತಿ ದೊರೆತ ನಂತರ ದಕ್ಷಿಣ ಭಾರತೀಯ ಚಿತ್ರರಂಗದ ಸಾಧಕರೂ ಇಂಥ ಪ್ರಶಸ್ತಿಗೆ ಅರ್ಹರು ಎನ್ನುವಂಥ ಭರವಸೆ ಮೂಡಿತು. ಇದೀಗ ರಜನಿಕಾಂತ್ ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಮತ್ತೊಮ್ಮೆ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಚೈತನ್ಯ ಮೂಡಿದೆ.