Sunday, 24th November 2024

ಕರೋನಾ ಎರಡನೇ ಅಲೆಯ ಅಬ್ಬರ: 89,129 ಮಂದಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕರೋನಾ ಎರಡನೇ ಅಲೆಯ ಅಬ್ಬರ ಹೆಚ್ಚಿದೆ. ಶನಿವಾರದವರೆಗೆ 24 ತಾಸುಗಳ ಅವಧಿಯಲ್ಲಿ 89,129 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಹೊಸ ಸೋಂಕಿನೊಂದಿಗೆ ದೇಶದಲ್ಲಿ ಒಟ್ಟಾರೆ ಕರೋನಾ ಪೀಡಿತರ ಸಂಖ್ಯೆ 1,23,92,260ಕ್ಕೆ ಏರಿದ್ದರೆ, ಮೃತರ ಸಂಖ್ಯೆ 1,64,110ಕ್ಕೆ ಹೆಚ್ಚಳವಾಗಿದೆ. 2020ರ ಅ.2 ರಂದು ದೇಶದಲ್ಲಿ 81,484 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಡಿ.6 ರಂದು 482 ಮಂದಿ ಮೃತಪಟ್ಟಿದ್ದರು.

ಸಕ್ರಿಯ ಪ್ರಕರಣಗಳ ಸಂಖ್ಯೆ 6,58,909ಕ್ಕೆ ಹೆಚ್ಚಳವಾಗಿದೆ. ಇದು ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.5ರಷ್ಟಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 44,202 ಮಂದಿ ಗುಣಮುಖರಾಗುವುದರೊಂದಿಗೆ ಚೇತರಿಸಿಕೊಂಡವರ 1,15,69,241ಕ್ಕೆ ತಲುಪಿದೆ.

ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 7,30,54,295 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ