Saturday, 23rd November 2024

ಪಂಜಾಬ್‌: ಇಡೀ ರಾಜ್ಯಕ್ಕೆ ‘ರಾತ್ರಿ ನಿಷೇಧಾಜ್ಞೆ’ ವಿಸ್ತರಣೆ

ಅಮೃತಸರ: ಪಂಜಾಬ್‌ನಲ್ಲಿ ರಾತ್ರಿ ನಿಷೇಧಾಜ್ಞೆ ಸೇರಿದಂತೆ ವಿವಿಧ ನಿರ್ಬಂಧ ಗಳನ್ನು ಜಾರಿಗೆ ತರಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯದಾ ದ್ಯಂತ ಜನರ ಸಂಚಾರ, ವ್ಯಾಪಾರ ವಹಿವಾಟಿನ ಮೇಲೆ ನಿರ್ಬಂಧ ವಿಧಿಸ ಲಾಗಿದೆ.

ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಅಂತ್ಯ ಸಂಸ್ಕಾರ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಜನರು ಗುಂಪುಗೂಡುವುದನ್ನು ನಿಯಂತ್ರಿಸಲು ಒಬ್ಬ ಪೊಲೀಸ್ ಸಿಬ್ಬಂದಿ ಹಾಜರಿರುವುದು ಕಡ್ಡಾಯವಾಗಿದೆ. ಒಳಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಹಾಗೂ ಹೊರಾಂಗಣ ಕಾರ್ಯಕ್ರಮಗಳಲ್ಲಿ ಗರಿಷ್ಠ 100 ಮಂದಿ ಮಾತ್ರ ಸೇರಲು ಅವಕಾಶ ನೀಡಲಾಗಿದೆ.

ಸರ್ಕಾರಿ ಕಚೇರಿಗಳು ಉದ್ಯೋಗಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಹೊಸ ನಿರ್ಬಂಧಗಳ ಜತೆಗೆ ಶಾಲೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವುದು ಸೇರಿದಂತೆ, ವಿವಿಧ ನಿಯಗಳು ಏ.30ರವರೆಗೂ ಮುಂದುವರಿಯಲಿವೆ.

ಸಿನಿಮಾ ಮಂದಿರಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಮಾತ್ರ ನಡೆಯ ಬೇಕಿವೆ. ಮಾಲ್‌ಗಳಲ್ಲಿನ ಅಂಗಡಿಗಳಿಗೆ ತಲಾ 10 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಒಂದು ಮಾಲ್‌ಗೆ ಗರಿಷ್ಠ 100 ಮಂದಿ ಒಂದು ಕಾಲದಲ್ಲಿ ಪ್ರವೇಶ ಪಡೆಯಬಹು ದಾಗಿತ್ತು. ಆ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಸ್‌ಎಡಿ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಅವರು ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ರಾಜಕೀಯ ಸಮಾವೇಶ ನಡೆಸಿರುವುದನ್ನು ಅಮರಿಂದರ್ ಖಂಡಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily