Saturday, 23rd November 2024

ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ: ನರೇಶ್ ಟೀಕಾಯತ್‌

ನವದೆಹಲಿ: ಮೂರು ಕೃಷಿ ಕಾಯಿದೆ ವಿರೋಧಿಸಿ ಆರಂಭಿಸಿದ ರೈತರ ಪ್ರತಿಭಟನೆಗೆ ಐದು ತಿಂಗಳು ಕಳೆದಿವೆ, ಆದರೆ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ನರೇಶ್ ಟೀಕೈತ್ ಹೇಳಿದ್ದಾರೆ.

ಸರ್ಕಾರವು ರೈತರ ಕಡೆಗೆ ಗಮನಹರಿಸುತ್ತಿಲ್ಲ, ನಮ್ಮ ಬೇಡಿಕೆಗಳನ್ನು ಈಡೇರಿಸುವ ಮಾತನ್ನೂ ಆಡುತ್ತಿಲ್ಲ, ಹೀಗಾಗಿ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

 

ಕೃಷಿ ಕಾಯ್ದೆಗಳನ್ನು ಕೈಬಿಟ್ಟು ಸರ್ಕಾರ ರೈತರ ಮನವಿಯನ್ನು ಸ್ವೀಕರಿಸಬೇಕು, ಅಲ್ಲಿಯವರೆಗೂ ಹೋರಾಟ ಮುಂದುವರೆಯ ಲಿದೆ. ರೈತರು ಬಿಜೆಪಿಗೆ ಮತ ನೀಡಿ ಅಧಿಕಾರಕ್ಕೆ ತಂದಿದೆ. ರೈತರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ರೈತರು ತಮ್ಮ ಜೀವವನ್ನೇ ತ್ಯಾಗ ಮಾಡುತ್ತಾರೆಯೇ ವಿನಃ ಪ್ರತಿಭಟನೆ ನಿಲ್ಲಿಸಲ್ಲ ಎಂದರು.

ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ ಗಡಿಯಲ್ಲಿ ಕಳೆದ ಐದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ ಕರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡುವಂತೆ ಹಲವು ರಾಜಕೀಯ ಮುಖಂಡರುಗಳು ಮನವಿ ಮಾಡಿದ್ದರು.