Sunday, 5th January 2025

ವಾಯು ಮಾಲಿನ್ಯ ಕೋವಿಡ್ ಹೆಚ್ಚಿಸುವುದೇ ?

ವೈದ್ಯವೈವಿಧ್ಯ

ಡಾ.ಎಚ್.ಎಸ್.ಮೋಹನ್‌

ಈ ಕೋವಿಡ್ ಕಾಯಿಲೆ ಹೀಗೆ ಮುಂದುವರಿಯುತ್ತಿದ್ದಂತೆಯೇ ಅದರ ಅನೇಕ ಮಗ್ಗುಲುಗಳನ್ನು ವೈದ್ಯ ವಿಜ್ಞಾನಿಗಳು ಅನಾವರಣಗೊಳಿಸುತ್ತಿದ್ದಾರೆ. ವಾತಾವರಣ ಕಲುಷಿತವಾಗುವಿಕೆ ಮತ್ತು ಕೋವಿಡ್ ಕಾಯಿಲೆ ಬಗ್ಗೆ ಇತ್ತೀಚಿಗೆ ಸಂಶೋಧನೆ ಮಾಡಲಾಗಿದೆ.

ವಾತಾವರಣ ಮಲಿನವಾಗುವಿಕೆಯು ಹೃದಯದ ಮತ್ತು ಶ್ವಾಸಕೋಶದ ಕಾಯಿಲೆಗಳು ಜಾಸ್ತಿಯಾಗುವಂತೆ ಮಾಡುತ್ತದೆ ಎನ್ನುತ್ತದೆ ಈ ಸಂಶೋಧನೆ. ಹಾಗೆಯೇ ವಾತಾವರಣ ಕಲುಷಿತವಾಗುವಿಕೆ ಕೋವಿಡ್ ಕಾಯಿಲೆ ಜಾಸ್ತಿಯಾಗುವಂತೆ ಮಾಡುತ್ತದೆ ಎಂದು ಅದು ತಿಳಿಸುತ್ತದೆ. ಹಾಗೆಯೇ ಇದೇ ಕಾರಣದಿಂದ ಈ ಕೋವಿಡ್ ಕಾಯಿಲೆ ಕಪ್ಪು ಜನರು ಮತ್ತು ಇತರ ವರ್ಣೀಯರಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತದೆ, ಹಾಗೆಯೇ ಅವರಲ್ಲಿ ಕಾಯಿಲೆ ತೀವ್ರ ಪ್ರಮಾಣಕ್ಕೆ ತಿರುಗುತ್ತದೆ ಎನ್ನುವುದನ್ನೂ ತಿಳಿಸುತ್ತದೆ.

ವಾತಾವರಣ ಮಲಿನತೆ ಮತ್ತು ಆರೋಗ್ಯ: ಈ ವಾತಾವರಣ ಮಲಿನತೆಯ ಬಗ್ಗೆ ಸ್ವಲ್ಪ ಗಮನ ಹರಿಸೋಣ. ವಿಶ್ವ ಆರೋಗ್ಯ ಸಂಸ್ಥೆ (WHO) ಯ ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿ ಶೇ.91 ಜನರು ಆ ಸಂಸ್ಥೆಯ ವಾತಾವರಣ ಕಲುಷಿತಗೊಳ್ಳದಿರುವ
ಮಟ್ಟದಲ್ಲಿ ಜೀವಿಸುತ್ತಿಲ್ಲ. ಹಾಗೆಯೇ ಅಮೆರಿಕದ ಶ್ವಾಸಕೋಶದ ಸಂಸ್ಥೆಯು ಅಲ್ಲಿನ ಅರ್ಧಕ್ಕಿಂತಲೂ ಹೆಚ್ಚು ಜನರು ವಿವಿಧ ರೀತಿಯ ವಾತಾವರಣ ಮಲಿನತೆಗೆ ಒಳಗಾಗಿದ್ದಾರೆ. ಹಾಗೆಯೇ ಈ ಮಲಿನತೆ ಕ್ರಮೇಣವಾಗಿ 2017, 2018, 2019ರಲ್ಲಿ ಕ್ರಮೇಣವಾಗಿ ಜಾಸ್ತಿಯಾಗುತ್ತದೆ ಎನ್ನುತ್ತದೆ.

ಹಲವಾರು ಸಂಶೋಧಕರು ಈಗಾಗಲೇ ವಾತಾವರಣದ ಮಲಿನತೆಯು ಶ್ವಾಸಕೋಶದ ಮತ್ತು ಹೃದಯದ ಕಾಯಿಲೆಗಳನ್ನು ಹೆಚ್ಚು ಮಾಡುತ್ತವೆ, ಅಂತೆಯೇ ನರವ್ಯೂಹ ವ್ಯವಸ್ಥೆಯನ್ನು ಹಾಳುಗೆಡವುತ್ತದೆ ಮತ್ತು ಕ್ಯಾನ್ಸರ್ ಬರಲು ಕಾರಣವಾಗುತ್ತದೆ – ಎಂದು ಮಾಹಿತಿ ಹೊರಗೆಡವಿzರೆ. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಂದಾಜಿನ ಪ್ರಕಾರ ಹೊರಗಿನ ವಾತಾವರಣದ
ಮಲಿನತೆಯು ಜಗತ್ತಿನಾದ್ಯಂತ ಪ್ರತಿ ವರ್ಷ 4.2 ಮಿಲಿಯನ್ ಜನರನ್ನು ಕೊಲ್ಲುತ್ತದೆ. ಈ ಕೋವಿಡ್ ಕಾಯಿಲೆ ಆರಂಭವಾದಾಗಿ ನಿಂದಲೂ ವಾತಾವರಣ ಮಲಿನತೆ ಮತ್ತು ಕೋವಿಡ್ ಕಾಯಿಲೆಯ ಸಂಬಂಧದ ಬಗ್ಗೆ ವಿಜ್ಞಾನಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಕೋವಿಡ್ ಮತ್ತು ವಾತಾವರಣದ ಮಲಿನತೆ: ಅಮೆರಿಕದ ಬಾಸ್ಟನ್‌ನ ಬೆತ್ ಇಸ್ರೇಲ್ ಡಿಕೋನ್ ನೆಸ್ ವೈದ್ಯಕೀಯ ಕೇಂದ್ರದ ವೈದ್ಯಕೀಯ ತಜ್ಞ ಡಾ ಸ್ಟೀಫನ್ ಆಂಡ್ರೂ ಮೈನ್ ಹಲವಾರು ಅಧ್ಯಯನಗಳು ಹೆಚ್ಚಾದ ವಾತಾವರಣ ಮಲಿನತೆಯು ಕರೋನಾ ಸೋಂಕು ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಹಾಗೆಯೇ ಕೋವಿಡ್ ಕಾಯಿಲೆಯಿಂದ ಮರಣ ಸಂಭವಿಸುವ ಸಾಧ್ಯತೆ ಯನ್ನೂ ಜಾಸ್ತಿ ಮಾಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಇತಿಹಾಸದತ್ತ ಅವಲೋಕಿಸಿದರೆ ವಾತಾವರಣ ಮಲಿನತೆ ಆರೋಗ್ಯವನ್ನು ತೀವ್ರವಾಗಿ ಕೆಡಿಸುತ್ತದೆ, ಹಾಗೆಯೇ ಮರಣ ಪ್ರಮಾಣವನ್ನೂ ಜಾಸ್ತಿ ಮಾಡುತ್ತದೆ. ಅದರಲ್ಲಿಯೂ ಇನ್ ಫ್ಲುಯೆಂಜಾ ಮತ್ತು ಇತರ ಶ್ವಾಸಕೋಶದ ವೈರಸ್ ಗಳು ಇದಕ್ಕೆ ಹೆಚ್ಚು ಕಾರಣ.

ಆದರೆ ಈಗಿನ ಕೋವಿಡ್ ಕಾಯಿಲೆಯ ಸಂದರ್ಭದಲ್ಲಿ ಕಾಯಿಲೆ ಬರುವುದನ್ನು ಮತ್ತು ಮರಣ ತರುವುದನ್ನು ತೀವ್ರವಾಗಿ ಹೆಚ್ಚಿಸುತ್ತಿರುವುದರಿಂದ ನಾವು ಈಗ ವಾತಾವರಣ ಮಲಿನತೆಯ ಬಗ್ಗೆ ಹೆಚ್ಚು ಶೀಘ್ರವಾಗಿ ಮತ್ತು ಅಗತ್ಯವಾಗಿ ಗಮನ ಹರಿಸಬೇಕಿದೆ ಎಂದು ಅವರು ಮುಂದುವರಿದು ಅಭಿಪ್ರಾಯ ಪಡುತ್ತಾರೆ.

ಸಂಶೋಧಕರು ಈ ವಾತಾವರಣ ಮಲಿನತೆಯು ಹಲವು ರೀತಿಯಲ್ಲಿ ಕೋವಿಡ್ ಕಾಯಿಲೆಯನ್ನು ತೀವ್ರಗೊಳಿಸುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ವಾತಾವರಣದ ಮಲಿನತೆ ವ್ಯಕ್ತಿಯ ಪ್ರತಿರೋಧ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ, ಪರಿಣಾಮ
ಎಂದರೆ ಆತನಿಗೆ ವೈರಸ್ ಸೋಂಕು ಬರುವ ಸಾಧ್ಯತೆ ಹೆಚ್ಚುತ್ತದೆ, ಹಾಗೆಯೇ ಆತ ತೀವ್ರ ರೀತಿಯ ಸೋಂಕಿಗೆ ಒಳಗಾಗುತ್ತಾನೆ. ಮತ್ತೊಂದು ರೀತಿ ಎಂದರೆ ಈ ವಾತಾವರಣದ ಮಲಿನತೆ ಉಸಿರಾಟದ ಅಂಗಗಳಲ್ಲಿರುವ ಸೀಲಿಯ (Cilia) ಎಂಬ ಕೂದಲಿನ
ರೀತಿಯ ಆಕೃತಿಯನ್ನು ಹಾನಿಗೊಳಿಸುತ್ತದೆ.

ಈ ಸೀಲಿಯವು ಶ್ವಾಸಕೋಶದ ಸೋಂಕು ತಡೆಯಲು ರೂಪಿತವಾಗಿರುವ ದೇಹದ ಒಂದು ರಕ್ಷಣಾ ವ್ಯವಸ್ಥೆ. ವಾತಾವರಣದ ಮಲಿನತೆಯ ಎರಡು ರೀತಿ ಎಂದರೆ – ವಾತಾವರಣದ ಪಾರ್ಟಿಕ್ಯುಲೇಟೆಡ್ ವಸ್ತು ಮತ್ತು ನೈಟ್ರೋಜನ್ ಡೈ ಆಕ್ಸೆ ಡ್. ಈ ಎರಡೂ ಒಂದು ಎಂಜೈಮ್ ಉತ್ಪಾದಿಸುವಲ್ಲಿ ಪಾಲ್ಗೊಳ್ಳುತ್ತವೆ. ಕರೋನಾ ವೈರಸ್ ಈ ಎಂಜೈಮ್ ಉಪಯೋಗಿಸಿ ಜೀವಕೋಶ
ಪ್ರವೇಶಿಸುವಲ್ಲಿ ಸಫಲವಾಗುತ್ತದೆ. ಈ ರೀತಿಯ ಕ್ರಮವೇ ವಾತಾವರಣ ಮಲಿನತೆಯು ಕೋವಿಡ್ ಕಾಯಿಲೆ ತೀವ್ರ ರೀತಿಯಲ್ಲಿ ಉಂಟು ಮಾಡಲು ಕಾರಣವಾಗುತ್ತದೆ.

ಹಾಗೆಯೇ ದೀರ್ಘ ಕಾಲದ ವಾತಾವರಣದ ಮಲಿನತೆಯು ಆ ವ್ಯಕ್ತಿಯಲ್ಲಿ ಹೃದಯ ಸಂಬಂಧಿ, ಶ್ವಾಸಕೋಶದ ಕಾಯಿಲೆಗಳು
ಹಾಗೂ ಬೇರೆ ಮೆಟಬಾಲಿಕ್ ಕಾಯಿಲೆಗಳು ಬರುವ ಸಾಧ್ಯತೆಯನ್ನು ಜಾಸ್ತಿ ಮಾಡುತ್ತವೆ. ಹಾಗಾಗಿ ಅಂತಹವರು ಕೋವಿಡ್ ಕಾಯಿಲೆಯಿಂದ ಮರಣ ಹೊಂದುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.

ತಾತ್ಕಾಲಿಕ ವಿರಾಮ: ಕೋವಿಡ್ ಕಾಯಿಲೆಯ ಆರಂಭದ ದಿನಗಳಲ್ಲಿ ಜಗತ್ತಿನ ಎಲ್ಲಾ ಕಡೆ ಲಾಕ್ ಡೌನ್ ಮಾಡಿದ್ದರಿಂದ ಕೈಗಾರಿಕೋದ್ಯಮದಿಂದ ಉಂಟಾಗುವ ವಾಯು ಮಾಲಿನ್ಯ ಮತ್ತು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದ್ದನ್ನು ಮೇಲಿನ ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾಗಿ ಉಸಿರಾಟದ ಸಂಬಂಧಿ
ಉದಾಹರಣೆ ಶ್ವಾಸಕೋಶದ ಕಾಯಿಲೆಗಳು ಗಮನಾರ್ಹವಾಗಿ ಕಡಿಮೆಯಾಗಿದ್ದನ್ನು ಈ ಸಂಶೋಧಕರ ತಂಡದ ಮತ್ತೊಬ್ಬ ಮುಖ್ಯ ವಿಜ್ಞಾನಿ ಡಾ.ಮೇರಿ ಕೈಸ್ ಗುರುತಿಳಿಸಿದ್ದಾರೆ. ಹಾಗಾಗಿ ಈ ತರಹದ ಕಾಯಿಲೆಗಳನ್ನು ಕಡಿಮೆ ಮಾಡಲು ನಾವು
ವಾಯು ಮಾಲಿನ್ಯ ಕಡಿಮೆ ಮಾಡಲು ತೀವ್ರವಾಗಿ ಗಮನಹರಿಸಬೇಕು ಎಂದು ಅವರು ನುಡಿಯುತ್ತಾರೆ.

ಅಮೆರಿಕದ ಸಂದರ್ಭದಲ್ಲಿ ಈ ವಾಯು ಮಾಲಿನ್ಯವು ಳಿಯರಲ್ಲದ ಇತರ ರೇಸ್ ನ ಜನರಲ್ಲಿ ಅಂದರೆ ಕಪ್ಪು ವರ್ಣೀಯರನ್ನು ಹೆಚ್ಚು ತೊಂದರೆಗೆ ಒಳಮಾಡಿದೆ. ಅಂದರೆ ಆ ಜನಾಂಗದವರು ಅಲ್ಲಿನ ಮೆಜಾರಿಟಿ ಬಿಳಿ ಜನಾಂಗದವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಹಾಗೆಯೇ ಕೋವಿಡ್ ಕಾಯಿಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮರಣ ವನ್ನೂ ಹೊಂದಿದ್ದಾರೆ.

ಅಲ್ಲಿ ನಡೆದ ಹಿಂದಿನ ಹಲವು ಅಧ್ಯಯನಗಳು ಕಪ್ಪು ವರ್ಣೀಯರು ಹೆಚ್ಚಾಗಿ ಔದ್ಯಮಿಕ ವಲಯ ಅಥವಾ ಫ್ಯಾಕ್ಟರಿಗಳ
ಆಸುಪಾಸಿನಲ್ಲಿ ತುಂಬಾ ಕಡಿಮೆ ಸ್ಥಳದಲ್ಲಿ ಹೆಚ್ಚು ಜನರು ವಾಸಿಸುವುದರಿಂದ ಅವರು ವಾತಾವರಣದ ಮಾಲಿನ್ಯ ದಿಂದ ಬರುವ ಶ್ವಾಸಕೋಶದ ಕಾಯಿಲೆಗಳ ಹೆಚ್ಚಳವನ್ನು ದೃಢೀಕರಿಸಿವೆ. ಹಾಗಾಗಿ ಕೋವಿಡ್ 19 ಕಾಯಿಲೆ ನಮಗೆ ವಾಯು ಮಾಲಿನ್ಯದ ಬಗ್ಗೆಯೂ ಎಚ್ಚರ ವಾಗುವಂತೆ ಮಾಡಿದೆ. ಇದನ್ನು ನಾವು ಎಚ್ಚರಿಕೆಯ ಗಂಟೆ ಎಂದು ಭಾವಿಸಿ ವಾಯು ಮಾಲಿನ್ಯ ತೀವ್ರವಾಗಿ
ಕಡಿಮೆ ಮಾಡುವಲ್ಲಿ ಬಹಳವಾಗಿ ಪ್ರಯತ್ನಿಸಬೇಕು ಎಂದು ಈ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಏಡ್ಸ್‌ಗೆ ವ್ಯಾಕ್ಸೀನ್ ಶೀಘ್ರದಲ್ಲಿಯೇ ಲಭ್ಯವಾಗುವುದೇ? ಇತ್ತೀಚಿನ ಮತ್ತೊಂದು ಮಹತ್ವದ ಸಂಶೋಧನೆಯ ಬಗ್ಗೆ ಗಮನ ಹರಿಸೋಣ. ತಮಗೆ ಗೊತ್ತಿರುವಂತೆ ಹೆಚ್‌ಐವಿ ವೈರಸ್ ಸೋಂಕಿನಿಂದ ಬರುವ ಏಡ್ಸ್ ಕಾಯಿಲೆ ಜಗತ್ತಿನಾದ್ಯಂತ ವ್ಯಾಪಕವಾಗಿ
ತನ್ನ ಕಬಂಧ ಬಾಹುವನ್ನು ಚಾಚಿದೆ. 1980ರ ದಶಕದಲ್ಲಿ ಕಂಡುಬಂದ ಈ ಕಾಯಿಲೆ ಕೋಟ್ಯಂತರ ಮನುಷ್ಯರ ಮರಣಕ್ಕೆ ಕಾರಣವಾಗಿದೆ. ನಿಖರವಾದ ಚಿಕಿತ್ಸೆ ಇಲ್ಲದಿದ್ದರೂ ಕಳೆದ ಕೆಲವು ವರ್ಷಗಳಿಂದ ಒಂದು ಪ್ರಮಾಣದ ಚಿಕಿತ್ಸೆ ಈಗ ಲಭ್ಯವಿದೆ.

ಜೀವನ ಪರ್ಯಂತ ತೆಗೆದುಕೊಳ್ಳಬೇಕಾದ ಈ ಚಿಕಿತ್ಸೆಯ ಖರ್ಚು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೀರಾ ದುಬಾರಿ ಎನಿಸಿರುವುದೂ ಇದೆ. ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಸರಕಾರವೇ ಅಗತ್ಯ ಔಷಧಗಳ ಪೂರೈಕೆಯನ್ನೂ ಮಾಡುತ್ತಿದೆ. ಹಾಗಲ್ಲದೆ ಈ ಔಷಧ ಗಳು ಈಗಾಗಲೇ ಪ್ರತಿರೋಧ ಶಕ್ತಿ ಕುಂದಿದ ಏಡ್ಸ್ ಕಾಯಿಲೆಗೆ ಒಳಗಾದ ಹಲವು ರೋಗಿಗಳಲ್ಲಿ ತೀವ್ರ
ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದೂ ಇದೆ. ಹಾಗಾಗಿ ವೈದ್ಯ ವಿಜ್ಞಾನಿಗಳು ಈ ಕಾಯಿಲೆಗೆ ಸೂಕ್ತ ವ್ಯಾಕ್ಸೀನ್ ಲಭ್ಯವಾಗುವುದೇ ಎಂಬ ತೀವ್ರವಾದ ಹುಡುಕಾಟದಲ್ಲಿ ತೊಡಗಿದ್ದರು.

ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ 38 ಮಿಲಿಯನ್ ಜನರು ಪ್ರಸ್ತುತ ಏಡ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ 2019ರಲ್ಲಿ 1.7 ಮಿಲಿಯನ್ ಜನರು ಹೊಸದಾಗಿ ಸೋಂಕಿಗೆ ಒಳಗಾಗಿ ಅದರಲ್ಲಿ 619000 ಜನರು ಹೆಚ್ ಐ ವಿ ಸಂಬಂಽತ ಕಾರಣಗಳಿಂದ ಮರಣ ಹೊಂದಿದರು ಎನ್ನಲಾಗಿದೆ. ಕೆಲವು ದಶಕಗಳಿಂದ ವೈದ್ಯ
ವಿಜ್ಞಾನಿಗಳು ಈ ಸೋಂಕಿನ ಕಾಯಿಲೆಗೆ ವ್ಯಾಕ್ಸೀನ್ ಹುಡುಕಾಟದಲ್ಲಿ ತೀವ್ರವಾದ ಸಂಶೋಧನೆಯಲ್ಲಿ ತೊಡಗಿದ್ದರು.

ಅವರಿಗೆ ಇಲ್ಲಿಯವರೆಗೆ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ. ಕಾರಣ ಎಂದರೆ- ಈ ವೈರಸ್ ನ ಹೊರಭಾಗದ ಹೆಚ್ಚಿನ ಎಲ್ಲಾ ಭಾಗಗಳು ಸಕ್ಕರೆಯ ತುಣುಕುಗಳಿಂದ ಲೇಪಿಸಲ್ಪಟ್ಟಿವೆ. ಈ ಕೋಟಿಂಗ್ ಪ್ರತಿರೋಧ ಪ್ರತಿಕ್ರಿಯೆಗೆ ಸ್ಪಂದಿಸುವುದಿಲ್ಲ. ಕರೋನಾ
ವೈರಸ್ (SARS CoV – 2) ರೀತಿಯಲ್ಲಿಯೇ ಹೆಚ್‌ಐವಿ ವೈರಸ್ ಕೂಡ ಮಾನವ ಜೀವಕೋಶದ ಒಳಗೆ ಪ್ರವೇಶಿಸಲು ಸ್ಪೆ ಕ್ ಪ್ರೋಟೀನ್‌ನ್ನು ಉಪಯೋಗಿಸುತ್ತದೆ.

ಹೆಚ್‌ಐವಿ ವೈರಸ್ ಮೇಲಿನ ಸ್ಪೆ ಕ್ ಪ್ರೋಟೀನ್ ತುಂಬಾ ವಕ್ರವಾದ ಗುಣವನ್ನು ಹೊಂದಿದೆ. ಅಂದರೆ ಅದು ನೇರವಾದದ್ದಲ್ಲ. ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಕ್ರಿಪ್ ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಮತ್ತು ಪ್ರತಿರೋಧ ಶಾಸ್ತ್ರಜ್ಞ
ಡಾ.ವಿಲಿಯಂ ಷೀ- ಅಭಿಪ್ರಾಯ ಪಡುತ್ತಾರೆ. ಈ ಸ್ಪೆ ಕ್ ಪ್ರೋಟೀನ್‌ನ ಜೀನ್‌ಗಳು ತುಂಬಾ ಕ್ಷಿಪ್ರಗತಿಯ ಮ್ಯುಟೇಷನ್‌ಗೆ ಒಳಗಾಗುತ್ತವೆ. ಹಾಗಾಗಿ ಹೆಚ್‌ಐವಿ ವೈರಸ್ ಹಲವಾರು ಮಿಲಿಯನ್ ಸ್ಟ್ರೇನ್ (ಪ್ರಭೇದ) ಗಳನ್ನು ಹೊಂದಿದೆ. ಹಾಗಾಗಿ ಯಾವುದಾದರೂ ಒಂದು ಪ್ರಭೇದದ ವಿರುದ್ಧ ಆಂಟಿಬಾಡಿ ಉಂಟು ಮಾಡುವ ವ್ಯಾಕ್ಸೀನ್ ಕಂಡು ಹಿಡಿದರೆ ಅದು ಉಳಿದ ಪ್ರಭೇದದ ವೈರಸ್‌ಗಳನ್ನು ನಿಯಂತ್ರಿಸಲಾರದು.

ಹಾಗಾಗಿ ಪ್ರೊ.ಷೀ- ಪ್ರಕಾರ ಹೆಚ್‌ಐವಿ ಒಂದು ವೈರಸ್ ಅಲ್ಲ. ಜಗತ್ತಿನಾದ್ಯಂತ ಅದರ 50 ಮಿಲಿಯನ್ ಪ್ರಭೇದಗಳಿವೆ.
ಹಾಗಾದರೆ ವ್ಯಾಕ್ಸೀನ್ ಹೇಗೆ ಮಾಡುವುದು? ಅವರು ವೈರಸ್‌ನಲ್ಲಿ ಏನಾದರೂ ವೀಕ್ ಪಾಯಿಂಟ್ ಇದೆಯೇ ಎಂದು ಹುಡುಕಲಾ ರಂಭಿಸಿದರು. ಹೆಚ್ಚು ಬದಲಾವಣೆ ಹೊಂದದ ಸ್ಪೆ ಕ್ ಪ್ರೋಟೀನ್‌ನ ಭಾಗವನ್ನು ತಲುಪುವುದು ಕಷ್ಟ ಎಂದು ಸಂಶೋಧಕರಿಗೆ ಹಲವು ಸಮಯದಿಂದ ಗೊತ್ತಿರುವ ವಿಷಯ. ಆದರೆ ಅಂತಹ ಸಣ್ಣ ಭಾಗವನ್ನು ಹುಡುಕಿ ಆ ಭಾಗವನ್ನು ನ್ಯೂಟ್ರಲೈಸ್ ಮಾಡುವ ಆಂಟಿಬಾಡಿಗಳನ್ನು ಇವರುಗಳು ಬ್ರಾಡ್ ಲೀ ನ್ಯೂಟ್ರಲೈಸಿಂಗ್ ಆಂಟಿಬಾಡಿಗಳು ಎಂದು ಕರೆದರು. ಈ
ಆಂಟಿಬಾಡಿಗಳು ಹೆಚ್‌ಐವಿ ವೈರಸ್‌ನ ಹಲವು ಪ್ರಭೇದಗಳನ್ನು ಗುರಿಯಾಗಿಸಿ ನ್ಯೂಟ್ರಲೈಸ್ ಮಾಡಬಲ್ಲವು.

ಹೆಚ್‌ಐವಿ ಸೋಂಕು ಹೊಂದಿರುವವರು ತುಂಬಾ ಅಪರೂಪದಲ್ಲಿ ಸಹಜವಾಗಿ ಈ ಆಂಟಿಬಾಡಿಗಳನ್ನು ತಮ್ಮಲ್ಲಿಯೇ ಉತ್ಪಾದಿಸಬಹುದು ಎನ್ನಲಾಗಿದೆ. ಈ ಸಹಜ ಉತ್ಪಾದನೆಯ ಫಲವಾಗಿ ವಿಜ್ಞಾನಿಗಳು ಈ ಆಂಟಿಬಾಡಿಗಳು ವೈರಸ್‌ನ ಯಾವ
ಭಾಗಕ್ಕೆ ಅಂಟಿಕೊಳ್ಳುತ್ತವೆ ಎಂದು ಕಂಡುಕೊಳ್ಳಬಹುದು. ಈ ಜ್ಞಾನದಿಂದ ಅವರು ವ್ಯಾಕ್ಸೀನ್‌ನಲ್ಲಿ ಉಪಯೋಗಿಸಬಹುದಾದ ಇಮ್ಯುನೋಜೆನ್ ಗಳನ್ನು ಅಭಿವೃದ್ಧಿ ಪಡಿಸಬಹುದು.

ಮುಖ್ಯ ಅಂಶ ಎಂದರೆ ನೈವ್ ಬಿ ಜೀವಕೋಶ ಎಂಬ ಹೆಚ್ಚು ಬೆಳವಣಿಗೆ ಹೊಂದಿಲ್ಲದ ಅಪರೂಪದ ಜೀವಕೋಶವು ಸರ್ಕುಲೇಟಿಂಗ್ ಬಿ ಜೀವಕೋಶವಾಗಿ ಅಭಿವೃದ್ಧಿ ಹೊಂದಬಲ್ಲದು. ಈ ಸರ್ಕುಲೇಟಿಂಗ್ ಬಿ ಜೀವಕೋಶವು ಹೆಚ್‌ಐವಿ ವಿರುದ್ಧ
ನ್ಯೂಟ್ರಲೈಸಿಂಗ್ ಆಂಟಿಬಾಡಿಗಳನ್ನು ಹುಟ್ಟು ಹಾಕಬಲ್ಲದು. ಪ್ರೊ.ಷೀ- ಅವರ ಪ್ರಕಾರ ಒಂದು ಮಿಲಿಯನ್ ಜೀವಕೋಶಗಳಲ್ಲಿ ಒಂದಕ್ಕೆ ಮಾತ್ರ ಹೀಗೆ ಆಂಟಿಬಾಡಿ ಹುಟ್ಟು ಹಾಕುವ ಸಾಮರ್ಥ್ಯ ಇದೆ. ಈ ಸಮಸ್ಯೆಯನ್ನು ನೀಗಿಸಲು ಅವರು ಮತ್ತು ಅವರ
ಸಹೋದ್ಯೋಗಿಗಳು ಜೆರ್ಮ್ ಲೈನ್ ಟಾರ್ಗೆಟಿಂಗ್ ಎಂಬ ತಾಂತ್ರಿಕತೆ ಉಪಯೋಗಿಸಿ ಮೇಲೆ ತಿಳಿಸಿದ ಅಪರೂಪದ ಜೀವಕೋಶಗಳನ್ನು ಉದ್ದೀಪನ (ಕ್ರಿಯಾತ್ಮಕ) ಗೊಳಿಸಿ ವ್ಯಾಕ್ಸೀನ್ ಅಭಿವೃದ್ಧಿ ಪಡಿಸಿದ್ದಾರೆ.

ಈಗಾಗಲೇ ಅವರು ಈ ವ್ಯಾಕ್ಸೀನ್‌ನ ಮೊದಲ ಫೀಸ್‌ನ ಕ್ಲಿನಿಕಲ್ ಟ್ರಯಲ್ ಕೈಗೊಂಡಿzರೆ. ಅದು ತುಂಬಾ ಸುರಕ್ಷಿತ ಎನಿಸಿರು ವುದು ಮಾತ್ರವಲ್ಲದೆ ಪ್ರಯೋಗಿಸಿದ ಎಲ್ಲಾ ಸ್ವಯಂ ಸೇವಕರಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡು ಬಂದಿದೆ. ವಾಷಿಂಗ್ಟನ್‌ನ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಮತ್ತು ಸಿಯಾಟಲ್‌ನ -ಡ್ ಹಚಿನ್ ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ 48 ಆರೋಗ್ಯವಂತ ವಯಸ್ಕರನ್ನು ಈ ಟ್ರಯಲ್‌ಗೆ

ಆರಿಸಿಕೊಳ್ಳಲಾಗಿದೆ. ವ್ಯಾಕ್ಸೀನ್ ಮತ್ತು ಪ್ಲಾಸಿಬೋವನ್ನು ಎರಡು ಡೋಸ್‌ಗಳಲ್ಲಿ ಕೊಡಲಾಗಿದೆ. ಶೇ.97 ವ್ಯಕ್ತಿಗಳಲ್ಲಿ
ಈ ವ್ಯಾಕ್ಸೀನ್ ಮೊದಲು ತಿಳಿಸಿದ ನೈವ್ ಬಿ ಜೀವಕೋಶಗಳನ್ನು ಕ್ರಿಯಾತ್ಮಕಗೊಳಿಸಿದೆ. ಹೆಚ್‌ಐವಿ ವ್ಯಾಕ್ಸೀನ್‌ನಲ್ಲಿ  ಮುಖ್ಯ ವಾದದ್ದೇ ನ್ಯೂಟ್ರಲೈಸಿಂಗ್ ಆಂಟಿಬಾಡಿಗಳನ್ನು ಹುಟ್ಟು ಹಾಕುವುದು. ಅದನ್ನು ನಾವು ಸ-ಲಗೊಳಿಸಿದ್ದೇವೆ. ಎಂದು ಪ್ರೊ. ಷೀ- ಅಭಿಪ್ರಾಯ ಪಡುತ್ತಾರೆ. ಅವರು ತಮ್ಮ ಈ ಸಂಶೋಧನೆಯನ್ನು ಅಂತಾರಾಷ್ಟ್ರೀಯ ಏಡ್ಸ್ ಸೊಸೈಟಿಯ ಫೆಬ್ರವರಿ 2021ರ ವಾರ್ಷಿಕ ಸಮ್ಮೇಳನದಲ್ಲಿ ಒಂದು ವೈದ್ಯಕೀಯ ಪ್ರಬಂಧವಾಗಿ ಮಂಡಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ದೊಡ್ಡ ಮಟ್ಟದಲ್ಲಿ ನಡೆದು ಸ-ಲವಾದರೆ ಹೆಚ್‌ಐವಿ ವಿರುದ್ಧದ ವ್ಯಾಕ್ಸೀನ್‌ನ ಕನಸು ನನಸಾಗುತ್ತದೆ ಎನ್ನಲಾಗಿದೆ.

ಕೊನೆಯ ಗುಟುಕು: ಇತ್ತೀಚಿನ ಸುದ್ದಿಯ ಪ್ರಕಾರ ಬ್ರೆಜಿಲ್‌ನ ಪಿ1 ಕರೋನಾ ವೈರಸ್ ವೇರಿಯಂಟ್ ಆ ದೇಶದಲ್ಲಿ ತೀವ್ರ ರೀತಿಯ ಎರಡನೇ ಅಲೆಗೆ ಕಾರಣವಾಗಿ ಅಲ್ಲಿ ಅದು ಹಾಹಾಕಾರ ಉಂಟು ಮಾಡಿದೆ. ಅದು ಆಂಟಿಬಾಡಿಗಳ ನಿಯಂತ್ರಣದಿಂದ ತಪ್ಪಿಸಿ ಕೊಳ್ಳುತ್ತಿದೆ. ಪರ್ಯಾಯವಾಗಿ ವ್ಯಾಕ್ಸೀನ್‌ಗಳು ಇದರ ವಿರುದ್ಧ ಕೆಲಸ ಮಾಡುವುದು ಸಂಶಯ ಎಂಬ ಅಭಿಪ್ರಾಯ ಕೇಳಿ
ಬರುತ್ತಿದೆ. ಈ ಪಿ1 ವೇರಿಯಂಟ್ ಪ್ರಭೇದವು ಮೊದಲಿನ ಕರೋನಾ ವೈರಸ್‌ಗಿಂತ 2.5 ಪಟ್ಟು ಹೆಚ್ಚು ಪ್ರಮಾಣದಲ್ಲಿ ಹರಡು ತ್ತದೆ. ಆ ದೇಶದಲ್ಲಿ ಈಗಾಗಲೇ 350000 ಜನರು ಮರಣ ಹೊಂದಿದ್ದು ಜಗತ್ತಿನಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದೆ.

Leave a Reply

Your email address will not be published. Required fields are marked *