Sunday, 5th January 2025

ಶಿಕ್ಷಕ ಅಮಾನತ್ತು

ಪಾವಗಡ: ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡದ ಕಾರಣ ಸಹ ಶಿಕ್ಷಕ ಆನಂದ ಆರ್. ಅಮಾನತ್ತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಆದೇಶ ಹೊರಡಿಸಿದ್ದಾರೆ.

ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡದ ಸ.ಕಿ.ಪ್ರಾ ಶಾಲೆಯ ಶಿಕ್ಷಕ ಅನಂದ್ ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಆವರ ಜಯಂತಿಯನ್ನು ಶಾಲೆಯಲ್ಲಿ ಆಚರಣೆ ಮಾಡಿದೆ ಶಾಲಾ ಕರ್ತವ್ಯಕ್ಕೆ ಗೈರುಹಾಜರಿಯಾಗಿರು ತ್ತಾರೆ.

ಒಂದು ವರ್ಷದಿಂದ ಶಾಲೆಗೆ ಸರಿಯಾಗಿ ಹಾಜರಾಗಿರುವುದಿಲ್ಲ. ಇಸ್ಪೀಟ್, ಐಪಿಎಲ್ ಬೆಟ್ಟಿಂಗ್ ದಂಧೆಗಳಲ್ಲಿ ಈತನ ಮೇಲುಗೈ ಆಗಿರುತ್ತದೆ. ಸದರಿ ಶಿಕ್ಷಕನನ್ನು ಕೂಡಲೇ ಆಮಾನತ್ತು ಮಾಡಬೇಕೆಂದು ಶಂಕರ್ ಗೌಡ ಕೆ.ಆರ್.ಸಂಸ್ಥಾಪಕ ರಾಜ್ಯಾಧ್ಯಕ್ಷ ಕರ್ನಾಟಕ ರಣಧೀರರ ವೇದಿಕೆ ಜಕ್ಕಸಂದ್ರ, ನೆಲಮಂಗಲ, ಬೆಂಗಳೂರು ಅವರ ದೂರಿನ ಮೇರೆಗೆ ಶಿಕ್ಷಕ ಅನಂದ್ ಆರ್. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಏ.19ರಂದು ತನಿಖೆ ನಡೆಸಿ ಅಮಾನತ್ತು ಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಿಕ್ಷಕ ಅನಂದ್ ಹಲವು ದಿನಗಳಿಂದ ಶಾಲೆಗೆ ಗೈರುಹಾಜರಾಗಿರುತ್ತಾರೆ.ಮತ್ತು ಇಸ್ಪೀಟ್. ಐಪಿಎಲ್ ಬೆಟ್ಟಿಂಗ್ ದಂಧೆಗಳಲ್ಲಿ ತೊಡಗಿದ್ದಾರೆ ಎಂಬುದಾಗಿ ಕರ್ನಾಟಕ ರಣಧೀರ ವೇದಿಕೆ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು .ಕೆ.ಆರ್. ದೂರಿನ ಅನ್ವಯ ನಾಗಲ ಮಡಿಕೆ ಕ್ಲಸ್ಟರ್ ಸಂಯೋಜಕರು ಮತ್ತು ಸಿ.ಆರ್.ಪಿ.ನೀಡಿದ ಪರಿಶೀಲಿಸಿ ಮಾಹಿತಿ ಆಧರಿಸಿ ಶಿಕ್ಷಕನನ್ನ ಅಮಾನತ್ತು ಗೊಳಿಸಿ ಆದೇಶಿಸಿದೆ.

ಅಮಾನತ್ತಾಗಿರುವ ಶಿಕ್ಷಕ ಅನಂದ್ ಮಾತನಾಡಿ, ಸಕ್ಕರೆ ಕಾಯಿಲೆಯಿಂದ ಆರೋಗ್ಯ ದಲ್ಲಿ ಏರುಪೇರು ಆದ ಕಾರಣ ಏ.14ರಂದು ಶಾಲೆಗೆ ಹೋಗಿರಲಿಲ್ಲ. ಶಾಲೆಯ ಕೆಲಸದ ಸಿಬ್ಬಂದಿಯಿಂದ ಅಂಬೇಡ್ಕರ್ ಜಯಂತಿ ಮಾಡಿಸಿದ್ದೇನೆ. ನನ್ನ ತೇಜೋವಧೆ ಮಾಡಲು ರಣಧೀರ ವೇದಿಕೆ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು ಕೆ.ಆರ್ ಸುಳ್ಳು ಆರೋಪ ಮಾಡಿದ್ದಾರೆ.

ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೀಟ್ ಆಡುತ್ತಾರೆ ಎಂಬುದಿದ್ದರೆ ಪೋಲಿಸ್ ಠಾಣೆಯಲ್ಲಿ ನನ್ನ ಮೇಲೆ ದೂರು ದಾಖಲೆಗಳು ಇದ್ದರೆ ನೀಡಬೇಕಾಗಿತ್ತು. ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡಿದ್ದಾರೆ. ಅವರ ವಿರುದ್ದ ಮಾನನಷ್ಟ ಕೇಸು ದಾಖಲು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *