Wednesday, 30th October 2024

‘ಇನ್ನಿನಿಸು ನೀ ಬದುಕಬೇಕಿತ್ತು’ ಕವಿನುಡಿ ನೆನಪಾಗುವುದೇಕೆ?

ಅನಿಸಿಕೆ

ರಾಂ ಎಲ್ಲಂಗಳ

ಎಂದಿನಂತೆ ಅಕ್ಟೋೋಬರ್ 2 ಬಂದು ಹೋಯಿತು. ಅಂದುಕೊಂಡಂತೆ ಗಾಂಧೀ ಜಯಂತಿ ಆಚರಣೆಯೂ ಮುಗಿದು ಹೋಯಿತು. ನಾಡು ಮತ್ತೆೆ ಯಥಾಸ್ಥಿಿತಿಗೆ ಮರಳಿದೆ. ಬದುಕಿನುದ್ದಕ್ಕೂ ಸತ್ಯ-ಅಹಿಂಸೆಗಳ ತತ್ವಾಾದರ್ಶಗಳನ್ನು ಮುಂದಿಟ್ಟುಕೊಂಡು ಮುನ್ನಡೆದ ಮಹಾತ್ಮ ಅವರು.

ಅಸ್ಪಶ್ಯತೆ, ಜಾತೀಯತೆ ವಿರುದ್ಧ ಅವಿರತ ಹೋರಾಡಿದರು ಬಾಪೂ. ಆದರೆ ಅವಿನ್ನೂ ಜೀವಂತ. ಮೊನ್ನೆೆ ಮೊನ್ನೆೆ ಸಂಸದ ನಳಿನ್‌ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಾಧ್ಯಕ್ಷರಾದಾಗ ಹಿರಿಯ ಮುಸ್ಲಿಿಂ ನಾಯಕರು ಅವರನ್ನು ಅಭಿನಂದಿಸಿದರು. ಕೈ ಪಾಳಯಕ್ಕದು ಅಪಥ್ಯ ಅನಿಸಿತು. ಅಭಿನಂದಿಸುವುದೂ ಅಪರಾಧವೆನಿಸಿಬಿಟ್ಟಿಿತು. ಅಭಿನಂದಿಸಿದ್ದಕ್ಕೂ ಅಪಸ್ವರವೆತ್ತಿಿತು! ಇದೂ ಒಂದು ತೆರನಾದ ಅಸ್ಪಶ್ಯತೆ. ಪಕ್ಷಗಳ ನಡುವಣ ಅಸ್ಪಶ್ಯತೆ.

ಒಂದು ಪಕ್ಷದವರು ಇನ್ನೊೊಂದು ಪಕ್ಷದವರ ಕೈಕುಲುಕುವುದೂ ಅಪರಾಧ. ವೇದಿಕೆ ಹಂಚಿಕೊಂಡರಂತೂ ಮಹಾಪರಾಧ. ಅದು ಪಕ್ಷವಿರೋಧಿ ಚಟುವಟಿಕೆ.

ಅಶ್ಪಶ್ಯತೆಯೆಂಬುದು ಹಿಂದೂ ಧರ್ಮಕ್ಕಂಟಿದ ಲಜ್ಜಾಾಸ್ಪದ ಕಳಂಕ. ಹಾಗೆಂದು ಅದನ್ನು ನಿರ್ಮೂಲನಗೊಳಿಸುವುದು ಬಸವಣ್ಣನವರ ಆಶಯವೂ ಆಗಿತ್ತು. ಅಂಬೇಡ್ಕರ್ ಅಸ್ಪಶ್ಯತೆಯ ಕಹಿಯುಂಡವರು. ಅವರು ಅದನ್ನೊೊಂದು ಸಾಮಾಜಿಕ ಪಿಡುಗೆಂದು ತಿಳಿದು ತೊಡೆದು ಹಾಕಲು ಪಣತೊಟ್ಟರು. ಆದರೇನು ಮಾಡೋಣ? ಅದಿಂದು ರಾಜಕೀಯ ಸ್ವರೂಪ ತಳೆದುಬಿಟ್ಟಿಿದೆ.

ಸದ್ಯದಲ್ಲೇ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಸಂಸತ್ ಅಧಿವೇಶನವೂ ನಡೆಯಲಿದೆ. ಅಧಿವೇಶನವೆಂದ ಮೇಲೆ ಸರಕಾರ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅಧಿವೇಶನದಲ್ಲಿ ಅಭಿವೃದ್ಧಿಿ ಕಾರ್ಯಗಳ ಬಗ್ಗೆೆ ಚರ್ಚೆ ನಡೆಸಬೇಕಾಗುತ್ತದೆ. ಆದರೆ ಆಡಳಿತ ಪಕ್ಷಕ್ಕಿಿಂತಲೂ ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಳ್ಳುವುದೇ ಹೆಚ್ಚು. ಅದು ಸರಕಾರವನ್ನು ಇಕ್ಕಟ್ಟಿಿಗೆ ಸಿಲುಕಿಸುವ ಸಲುವಾಗಿ! ಆಡಳಿತ ಪಕ್ಷಕ್ಕೆೆ ಕ್ರೆೆಡಿಟ್ ತರಬಲ್ಲ ಕ್ರಮಗಳನ್ನು ಸಹಿಸದೆ ಅಧಿವೇಶನಕ್ಕೆೆ ಅಡ್ಡಿಿಪಡಿಸುವುದೇ ರೂಢಿ.

ಪಕ್ಷದೊಳಗಣ ವಿವಿಧ ಬಣಗಳ ನಡುವೆಯೂ ಅಸ್ಪಶ್ಯತೆ ಇರುವುದುಂಟು. ಬಣಗಳೊಳಗೆ ವೈಷಮ್ಯ ತಲೆದೋರುವುದುಂಟು. ಪ್ರಸ್ತುತ ರಾಜ್ಯ ಕಾಂಗ್ರೆೆಸಿನಲ್ಲಿ ಮೂಲ ಹಾಗೂ ವಲಸಿಗರ ನಡುವೆ ತಿಕ್ಕಾಾಟ ನಡೆದಿದೆ. ಪರಮೇಶ್ವರ-ಸಿದ್ದರಾಮಯ್ಯ ಬಣಗಳ ನಡುವಣ ತಾಕಲಾಟ ತಾರಕಕ್ಕೇರುವುದರಲ್ಲಿದೆ. ಅಷ್ಟೇಕೆ? ರಾಜ್ಯ ಬಿಜೆಪಿಯಲ್ಲೂ ಯಡಿಯೂರಪ್ಪ ಬಣ-ನಳಿನ್ ಕುಮಾರ್ ಬಣಗಳ ನಡುವಣ ಮುಸುಕಿನೊಳಗಣ ಗುದ್ದಾಾಟ ಯುವ ಮೋರ್ಚಾ ಮತ್ತು ಹಿಂದುಳಿದ ವರ್ಗಗಳ ಮೋರ್ಚಾಗಳೊಳಗೆ ಸಮರಕ್ಕೆೆಡೆಮಾಡಿದೆ.

ಹಬ್ಬ-ಉತ್ಸವಾದಿಗಳ ಸಂದರ್ಭದಲ್ಲಿ ಜನಪ್ರತಿನಿಧಿಗಳು ಶಾಂತಿ-ಸಾಮರಸ್ಯ ಕಾಯ್ದುಕೊಳ್ಳುವಂತೆ ಜನತೆಗೆ ಕರೆ ನೀಡುವುದಿದೆ. ವೇದಿಕೆ ಏರಿ ಏಕತೆ-ಸಮಾನತೆಗಳ ಬಗ್ಗೆೆ ಮಾತನಾಡುವುದಿದೆ. ಆದರೆ ಅವರೇ ಅದನ್ನು ಪಾಲಿಸರು. ಎಲ್ಲವೂ ಈಗೀಗ ವೇದಿಕೆಗಷ್ಟೇ ಸೀಮಿತವಾಗಿಬಿಟ್ಟಂತಿದೆ.

ಇನ್ನು ಜಾತಿ ಮನೋಭಾವವೂ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ರಾಜಕಾರಣಿಗಳ ಮತ ಗಳಿಕೆಗೆ ಅಸ್ತ್ರವಾಗಿ ಬಳಕೆಯಾಗುತ್ತಿಿದೆ. ಚುನಾವಣೆ ಸಮೀಪಿಸುತ್ತಲೇ ರಾಜಕೀಯ ಪಕ್ಷಗಳು ಜಾತಿ ಲೆಕ್ಕಾಾಚಾರ ಮಾಡುವುದೇನೂ ಗುಟ್ಟಾಾಗಿ ಉಳಿದಿಲ್ಲ. ಅಭ್ಯರ್ಥಿಗಳನ್ನು ಕಣಕ್ಕಿಿಳಿಸುವಲ್ಲಾಾಗಲೀ ಸಚಿವ ಸ್ಥಾಾನ ನೀಡುವಲ್ಲಾಾಗಲೀ ಜಾತಿವಾರು ಆದ್ಯತೆ ಹೊಸದಲ್ಲ. ಜಾತ್ಯತೀತ ರಾಷ್ಟ್ರವೆಂಬ ಹಣೆಪಟ್ಟಿಿ ಕಟ್ಟಿಿಕೊಂಡಿದ್ದರೂ, ಬಸವಣ್ಣನವರಂತಹ ದಾರ್ಶನಿಕರು ಅದರ ‘ಬೇರಿಗೆ ಬೆನ್ನೀರು ಹೊಯ್ಯಬೇಕೆ’ಂದಿದ್ದ ಜಾತೀಯತೆಯ ಪಿಡುಗು ರಾಜಕಾರಣಿಗಳ ಕೈಲಿನ್ನೂ ಜೀವಂತ!

ಸತ್ಯ-ಅಹಿಂಸೆಗಳ ವಿಚಾರದಲ್ಲೂ ಅಷ್ಟೆೆ. ಗಾಂಧೀಜಿಯವರೇನೋ ಅವುಗಳನ್ನು ವ್ರತೋಪಾದಿ ಪಾಲಿಸಿಕೊಂಡು ಬಂದರು. ಆದರೆ ವರ್ಷಕ್ಕೊೊಂದು ದಿನ ಗಾಂಧೀ ಸಮಾಧಿ ಮೇಲೆ ತಪ್ಪದೆ ಹೂವಿಡುವ ನಮ್ಮ ಜನಪ್ರತಿನಿಧಿಗಳು ಸತ್ಯಕ್ಕೆೆ ಸಮಾಧಿ ಕಟ್ಟಿಿಬಿಟ್ಟಿಿದ್ದಾಾರೆ. ಹಾಗಲ್ಲದೆ ಒಬ್ಬರ ಹಿಂದೆ ಒಬ್ಬರು ಜೈಲು ಸೇರುವ ಪ್ರಮೇಯ ಬರುತ್ತಿಿತ್ತೆೆ?
ದೇಶ ಭಯೋತ್ಪಾಾದನೆಯ ಕಪಿಮುಷ್ಟಿಿಯೊಳಗೆ ಸಿಲುಕಿ ನಲುಗುತ್ತಿಿದೆ. ಹಾಡುಹಗಲೇ ಹತ್ಯೆೆ ನಡೆದು ಅಮಾಯಕರ ಜೀವ ಬಲಿಯಾಗುತ್ತಿಿದೆ. ಆದರೆ ಸಾವಿನ ವಿಚಾರದಲ್ಲೂ ರಾಜಕೀಯ ನಡೆಯುತ್ತಿಿರುವುದೊಂದು ದುರಂತ. ರಾಷ್ಟ್ರದ ಏಕತೆ ಹಾಗೂ ಭದ್ರತೆ ವಿಚಾರದಲ್ಲೂ ಪಕ್ಷಭೇದ ತೋರುವುದು ರಾಜಕೀಯ ಅಸ್ಪಶ್ಯತೆಯ ಪರಮಾವಧಿಯಲ್ಲವೆ? ವಿರೋಧಕ್ಕಾಾಗಿ ವಿರೋಧ ರಾಷ್ಟ್ರಹಿತಕ್ಕೆೆ ಬಲು ಆತಂಕಕಾರಿ.