Sunday, 24th November 2024

ಕರೋನಾ ಸಂಕಷ್ಟದ ನಡುವೆ ವಾಣಿಜ್ಯ ನಗರಿಯಲ್ಲೊಬ್ಬ ʼಆಕ್ಸಿಜನ್‌ ಮ್ಯಾನ್ʼ …

ಮುಂಬೈ: ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಮುಂಬೈನ ನಿವಾಸಿ ಶೆಹನಾಜ್​ ಶೇಖ್​ ಎಂಬವರು ರೋಗಿಗಳಿಗೆ ಕೃತಕ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡ್ತಿದ್ದಾರೆ. ಇದಕ್ಕಾಗಿ ʼಆಕ್ಸಿಜನ್‌ ಮ್ಯಾನ್ʼ ಎಂಬ ಬಿರುದನ್ನೂ ಪಡೆದಿದ್ದಾರೆ.

ತಮ್ಮ 22 ಲಕ್ಷದ ಎಸ್​ಯುವಿ ಕಾರನ್ನ ಮಾರಾಟ ಮಾಡಿದ್ದಾರೆ. ಬಂದ ಹಣ ದಿಂದ 160 ಆಮ್ಲಜನಕ ಸಿಲಿಂಡರ್​ಗಳನ್ನ ಖರೀದಿ ಮಾಡಿದ್ದಾರೆ. ಅವಶ್ಯ ಇರುವವರಿಗೆ ಸಹಾಯ ಮಾಡಲು ಹಣ ಸಾಲದ ಕಾರಣ ತಮ್ಮ ಕಾರನ್ನ ಮಾರಿ ದ್ದೇನೆ ಎಂದು ಶೆಹನಾಜ್​ ಹೇಳಿದ್ದಾರೆ.

ಕಳೆದ ವರ್ಷ ಶೆಹನಾಜ್​ ಪತ್ನಿ ಆಮ್ಲಜನಕದ ಕೊರತೆಯಿಂದಾಗಿ ಆಟೋರಿಕ್ಷಾ ದಲ್ಲೇ ಪ್ರಾಣ ಬಿಟ್ಟಿದ್ದರು. ಈ ಘಟನೆ ಬಳಿಕ ಶೆಹನಾಜ್​ ಮುಂಬೈನಲ್ಲಿ ರೋಗಿ ಗಳಿಗೆ ಆಮ್ಲಜನಕ ಪೂರೈಕೆ ಕಾರ್ಯ ಮಾಡುತ್ತಿದ್ದಾರೆ. ಶೆಹನಾಜ್​​ ಸಹಾಯ ವಾಣಿ ಸಂಖ್ಯೆ ಹಾಗೂ ಕಂಟ್ರೋಲ್​ ರೂಮ್​ನ್ನೂ ತೆರೆದಿದ್ದಾರೆ.

ಕಳೆದ ವರ್ಷ ಜನವರಿ ತಿಂಗಳಲ್ಲಿ ಇವರಿಗೆ ಆಮ್ಲಜನಕ ಬೇಕೆಂದು 50 ಕರೆಗಳು ಬಂದಿದ್ದರೆ ಈ ವರ್ಷ 500ಕ್ಕೂ ಹೆಚ್ಚು ಕರೆಗಳನ್ನ ಸ್ವೀಕರಿಸಿದ್ದಾರಂತೆ.