Saturday, 23rd November 2024

700 ಆಮ್ಲಜನಕ ಟ್ಯಾಂಕರ್‌, ವೈದ್ಯಕೀಯ ಸಾಮಗ್ರಿ ಪೂರೈಕೆ: ಐರ್ಲೆಂಡ್‌ ಸಹಾಯ ಹಸ್ತ

ನವದೆಹಲಿ: ಸುಮಾರು 700 ಆಮ್ಲಜನಕ ಟ್ಯಾಂಕರ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ದೇಶಕ್ಕೆ ಕಳುಹಿಸುವುದಾಗಿ ಘೋಷಿಸಿದೆ. ಈ ಮೂಲಕ ಭಾರತಕ್ಕೆ ಸಹಾಯ ಹಸ್ತ ಚಾಚಿರುವ ದೇಶಗಳ ಪಟ್ಟಿಗೆ ಐರ್ಲೆಂಡ್ ಮಂಗಳವಾರ ಸೇರ್ಪಡೆಗೊಂಡಿದೆ.

ಬುಧವಾರ ಆಮ್ಲಜನಕ ಸಾಂದ್ರಕಗಳು ಭಾರತವನ್ನು ತಲುಪುವ ನಿರೀಕ್ಷೆಯಿದೆ ಎಂದು ಐರಿಶ್ ರಾಯಭಾರ ಕಚೇರಿ ತಿಳಿಸಿದೆ.

ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡಲು ಐರ್ಲೆಂಡ್ 700 ಆಮ್ಲಜನಕ ಟ್ಯಾಂಕರ್‌ಗಳನ್ನು ಭಾರತಕ್ಕೆ ಕಳುಹಿಸುತ್ತಿದೆ. ಸಾಂಕ್ರಾ ಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಹೆಚ್ಚಿನ ನೆರವನ್ನು ನೀಡಲು ಬಯಸುತ್ತದೆ ಎಂದು ಐರಿಶ್ ರಾಯಭಾರಿ ಬ್ರೆಂಡನ್ ವಾರ್ಡ್ ಹೇಳಿದ್ದಾರೆ.

‘ಅಧಿಕ ಪ್ರಮಾಣದ ಭಾರತೀಯ ಸಮುದಾಯ ಇರುವ ಐರ್ಲೆಂಡ್‌ ದೇಶವು ಭಾರತದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ವೃತ್ತಿಪರರು ಬಹಳ ಮುಖ್ಯ’ ಎಂದು ಹೇಳಿದರು.

ಅಮೆರಿಕ, ಜರ್ಮನಿ, ಫ್ರಾನ್ಸ್, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಾಪುರ್, ಇಸ್ರೇಲ್ ಮತ್ತು ಇತರ ಹಲವಾರು ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಯುರೋಪಿಯನ್ ಒಕ್ಕೂಟ ಈಗಾಗಲೇ ಭಾರತಕ್ಕೆ ತುರ್ತು ವೈದ್ಯಕೀಯ ನೆರವು ಘೋಷಿಸಿವೆ.