Wednesday, 11th December 2024

ರಫೇಲ್‌ಗೆ ನಿಂಬೆಹಣ್ಣು ಕೆಲವರಿಗೇಕೆ ಮೆಣಸಿನಕಾಯಿ?

ಪ್ರಚಲಿತ

 ದೇವಿ ಮಹೇಶ್ವರ ಹಂಪಿನಾಯ್ಡು

ಅಂದು ನಾವುಗಳು ದಿನಂಪ್ರತಿ ಬಳಸುವ ಸಲಕರಣಿ ವಸ್ತುಗಳು ಕಾರ್ಖಾನೆಯ ಯಂತ್ರಗಳು ಆಯುಧಗಳನ್ನು ಸ್ವಚ್ಚಗೊಳಿಸಿ ಪೂಜಿಸುವ ದಿನವಾಗಿರುತ್ತದೆ. ನಮಗೆ ನೆರವಾಗುವ ನಿರ್ಜೀವ ವಸ್ತುವಿಗೂ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ತಾತ್ವಿಕತೆ ಪರಂಪರೆಯ ದೇಶ ನಮ್ಮದು.

ಭಾರತದ ಸನಾತನ ಸಂಸ್ಕೃತಿಯ ಮೇಲೆ ಸಾವಿರಾರು ವರ್ಷಗಳು ಅನೇಕ ರೀತಿಯ ಆಕ್ರಮಣಗಳು ದಾಳಿಗಳು ನಿರಂತರವಾಗಿ ನಡೆದರೂ ಅವುಗಳನ್ನು ದಿಟ್ಟವಾಗಿ ಎದುರಿಸಿ ಇಂದು ಸಹ ವಿಶ್ವಗುರುವಾಗಿ ಸದೃಢವಾಗಿ ನೆಲೆನಿಂತಿದೆ. ಭಾರತೀಯ ಹಿಂದೂ ಧರ್ಮ ಮತ್ತು ಸಂಸ್ಕೃತಿ. ಇದಕ್ಕೆೆ ಕಾರಣ ಅದರಲ್ಲಿರುವ ಭಕ್ತಿಿ ನಂಬಿಕೆ ಶ್ರದ್ಧೆೆ ಅದರ ಅನಂತತೆ ಅಗಾಧತೆಯ ಶಕ್ತಿಿ. ಹಿಂದೂ ಧರ್ಮದ ಮೇಲೆ ಆಕ್ರಮಣದ ಉದ್ದೇಶದಿಂದಲೇ ಬಂದ ಇಸ್ಲಾಾಂ ಧರ್ಮ ಭಾರತದಲ್ಲಿ ರಕ್ತಸಿಕ್ತ ಇತಿಹಾಸ ಬರೆಯಿತು. ಇನ್ನು ವ್ಯಾಾಪಾರಕ್ಕಾಾಗಿ ಬಂದ ಕ್ರಿಿಶ್ಚಿಿಯನ್ ಧರ್ಮ ಇಲ್ಲಿನ ವೈಚಾರಿಕತೆ ನಂಬಿಕೆಗಳನ್ನು ಹಾಳು ಮಾಡುವ ಯತ್ನದೊಂದಿಗೆ ಮತಾಂತರ ಎಂಬ ಪಿಡುಗನ್ನು ಇಂದಿಗೂ ಜೀವಂತವಾಗಿಟ್ಟಿಿದೆ. ಆದರೂ ಈ ಎರಡೂ ಧರ್ಮಗಳಿಗೆ ನೆಲೆಯನ್ನು ಬೆಳೆಯನ್ನು ನೀಡಿ ಸಮಾನತೆಯ ಹಕ್ಕನ್ನು ನೀಡಿ ಸೋದರತೆ ಸಹಬಾಳ್ವೆೆಯನ್ನು ತೋರಿದೆ ನಮ್ಮ ದೇಶ.

ಆದರೆ, ಇದುವರೆಗೂ ಯಾವುದೇ ಧರ್ಮದ ಮೇಲೆ ದಂಡೆತ್ತಿಿ ದಾಳಿ ಮಾಡದೆ, ಯಾವುದೇ ಮಸೀದಿ ಮತ್ತು ಚರ್ಚ್‌ಗಳನ್ನು ಧ್ವಂಸಗೊಳಿಸದೆ, ಇನ್ನೊೊಂದು ಧರ್ಮದ ಮೇಲೆ ಆಕ್ರಮಣ ಮಾಡದೆ, ಒಂದು ಪ್ರಾಾಣಿಯನ್ನೂ ಸಹ ಬಲವಂತವಾಗಿ ಹಿಂದೂ ಧರ್ಮಕ್ಕೆೆ ಮತಾಂತರ ಮಾಡದೆ ಎಲ್ಲಾಾ ರೀತಿಯ ದಾಳಿಗಳನ್ನು ಸಹಿಸಿಕೊಂಡು ಸಾಗುತ್ತಿಿದೆ ಸನಾತನ ಹಿಂದೂ ಧರ್ಮ. ದುರಂತವೆಂದರೆ ಈಗಲೂ ಸಹ ಹಿಂದೂಗಳು ನಿರಭಿಮಾನಿಗಳಾಗಿ ಬಲಹೀನರಾಗಿ ಕುಳಿತರೆ ಕೂಡಲೇ ಮತಾಂತರವೆಂಬ ಕ್ರಿಿಶ್ಚಿಿಯನ್ ಅಸ್ತ್ರ ಭಯೋತ್ಪಾಾದನೆ ಎಂಬ ಇಸ್ಲಾಾಂ ಅಸ್ತ್ರಗಳಲ್ಲದೆ ಅದಕ್ಕಿಿಂತಲೂ ಭಯಾನಕ ಹಾಗೂ ಅಪಾಯಕಾರಿಯಾದ ಪ್ರಗತಿಪರ, ಬುದ್ಧಿಿಜೀವಿಗಳೆಂಬ ವಿದೇಶಿ ಕಮ್ಯುನಿಸ್‌ಟ್‌ ಎಡಗೈ ಸಿದ್ಧಾಾಂತದ ರೋಗಕ್ಕೆೆ ಒಳಗಾಗಿರುವ ಹಿಂದುಗಳೇ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಮೇಲೆ ಆಕ್ರಮಣ ಮಾಡುವ ಅವಕಾಶಕ್ಕೆೆ ಮತ್ತು ಸಂಭವಕ್ಕೆೆ ಕಾದು ಕುಳಿತಿದೆ.

ಮೊನ್ನೆೆ ನನ್ನ ಆತ್ಮೀಯ ಸ್ನೇಹಿತರು ಅಂಬೇಡ್ಕರ್ ಸಿದ್ಧಾಾಂತ ಎಂಬ ವ್ಯಾಾಟ್‌ಸ್‌‌ಪ್ ಗ್ರೂಪನ್ನು ಮಾಡಿ ಅದರಲ್ಲಿ ನನ್ನ ಸಂಖ್ಯೆೆಯನ್ನೂ ಸೇರಿಸಿದ್ದರು. ಅದರಲ್ಲಿ ಒಬ್ಬರು ಮೊನ್ನೆೆಯ ನವರಾತ್ರಿಿ ಆಚರಣೆಯ ಚಾಮುಂಡೇಶ್ವರಿ ಆರಾಧನ ಚಿತ್ರಗಳು ಯುವರಾಜರಾದ ಯದುವೀರರ ಪೂಜೆ ಪುನಸ್ಕಾಾರದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದನ್ನು ಕಂಡ ಒಂದಿಬ್ಬರು ನಮ್ಮ ಅಂಬೇಡ್ಕರ್ ಅವರು ವಿರೋಧಿಸುವ ಇಂತಹ ವಿಚಾರಗಳನ್ನು ಚಿತ್ರಗಳನ್ನು ಹಾಕಿರುವುದು ನಮಗೆ ಸರಿಯಾಗುವುದಿಲ್ಲ ಎಂದು ಬರೆದುಕೊಂಡಿದ್ದರು. ಮತ್ತೊೊಬ್ಬರು ಹಿಂದೂ ಧರ್ಮವನ್ನು ನಾನು ವಿರೋಧಿಸುತ್ತೇನೆ, ಪುರೋಹಿತ ಶಾಹಿಗಳು ಈ ದೇಶಕ್ಕೆೆ ಶಾಪ, ಹಿಂದೂ ಧರ್ಮಕ್ಕಿಿಂತ ಅಂಬೇಡ್ಕರ್ ಅವರ ಬೌದ್ಧ ಧರ್ಮವೇ ಭಾರತದ ಧರ್ಮವಾಗಬೇಕು ಹೀಗೆ ಪೋಸ್‌ಟ್‌‌ಗಳನ್ನು ಹಾಕಿದ್ದವರು ಸಾಕ್ಷಾತ್ ಹಿಂದೂ ಹೆಸರಿನ ವ್ಯಕ್ತಿಿಯೇ. ಅವರ ಈ ಪೂರ್ವಗ್ರಹವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರೂ ಅವರ ಅಭಿಪ್ರಾಾಯ ಭದ್ರವಾಗಿರುವುದರಿಂದ ನಾನೇ ಆ ಗ್ರೂಪ್‌ನಿಂದ ಹೊರಬಂದೆ.

ನೋಡಿ, ದಲಿತರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳಲ್ಲಿ ಇಂತಹ ಪೂರ್ವಗ್ರಹವನ್ನು ನಮ್ಮ ದುಷ್ಟ ವೋಟ್‌ಬ್ಯಾಾಂಕ್ ರಾಜಕಾರಣಿಗಳು ಅವರ ದೂತರುಗಳಾದ ಬುದ್ಧಿಿಜೀವಿಗಳೆಂಬ ಜ್ಞಾಾನವಂತರು ಯಾವ ಮಟ್ಟಿಿಗೆ ತುಂಬಿದ್ದಾಾರೆ ಎಂದರೆ ಇದನ್ನು ಸರಿಪಡಿಸಲು ಯತ್ನಿಿಸುವವರೇ ದೇಶದ್ರೋಹಿಗಳಾಗಿ ಬಿಂಬಿತರಾಗುವ ಅಪಾಯವಿದೆ. ಇದಕ್ಕಿಿಂತ ಗಂಡಾಂತರ ದೇಶಕ್ಕೆೆ ಬೇಕೆ? ಕಳೆದವಾರವಷ್ಟೇ ಐತಿಹಾಸಕ ಮೈಸೂರು ನವರಾತ್ರಿಿ ಹಾಗೂ ದಸರಾ ಉತ್ಸವ ವಿಜೃಂಭಣೆಯಿಂದ ಜರುಗಿತು. ಈ ಹತ್ತು ದಿನಗಳ ಧಾರ್ಮಿಕ ಉತ್ಸವದಲ್ಲಿ ನವಮಿಯಾದ ಒಂಬತ್ತನೇ ದಿನವೇ ಆಯುಧ ಪೂಜೆ ಬಹುಮುಖ್ಯ ಆಚರಣೆಯ ದಿನ. ಅಂದು ನಾವುಗಳು ದಿನಂಪ್ರತಿ ಬಳಸುವ ಸಲಕರಣೆಗಳು, ಕಾರ್ಖಾನೆಗಳ ಯಂತ್ರಗಳು ಆಯುಧಗಳನ್ನು ಸ್ವಚ್ಛಗೊಳಿಸಿ ಪೂಜಿಸುವ ದಿನವಾಗಿರುತ್ತದೆ.

ಹೀಗೆ ನಮಗೆ ನೆರವಾಗುವ ನಿರ್ಜೀವ ವಸ್ತುವಿಗೂ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸುವ ತಾತ್ವಿಿಕತೆ ಪರಂಪರೆಯ ದೇಶ ನಮ್ಮದು. ಇದನ್ನು ರಾಜರ ಕಾಲದಿಂದಲೂ ನಡೆಸಿಕೊಂಡು ಬರಲಾಗಿದೆ. ಇದೇ ಒಂಬತ್ತು ದಿನಗಳ ಉತ್ಸವವನ್ನು ಉತ್ತರ ಭಾರತದಲ್ಲಿ ನವರಾತ್ರಿಿ ಜಾಗರಣ ಎಂಬ ಪದ್ಧತಿಯಲ್ಲಿ ಕಾಳಿಮಾತೆ ದುರ್ಗೆಯ ಹೆಸರಿನಲ್ಲಿ ವ್ರತ ಉಪವಾಸ ಧ್ಯಾಾನಗಳ ಮೂಲಕ ಆಚರಿಸಲಾಗುತ್ತದೆ. ಹೆಣ್ಣು ಹೊನ್ನು ಮಣ್ಣು ನೆಲ ಜಲ ಅನ್ನ ಅಕ್ಷರ ಎಲ್ಲವೂ ಇಲ್ಲಿ ದೈವಿಕತೆಯ ಭಾಗವಾಗಿಯೇ ಮನಗಂಡು ಪೂಜಿಸಿ ಗೌರವಿಸುವ ವೈಚಾರಿಕತೆ ಹೊಂದಿರುವಂತ್ತದ್ದು. ಇದೇ ನಂಬಿಕೆಯನ್ನೇ ಬಳಸಿಕೊಂಡ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾಾತಂತ್ರ್ಯ ಸಂಗ್ರಾಾಮದಲ್ಲಿ ಸಾರ್ವಜನಿಕ ಗಣೇಶೋತ್ಸವದ ಮೂಲಕ ದೊಡ್ಡ ಆಂದೋಲನವನ್ನು ಏರ್ಪಡಿಸಿ ಆಂಗ್ಲರಿಗೆ ದೇಶಬಿಟ್ಟು ತೊಲಗುವಂತೆ ಮಾಡಿದ್ದರು. ದೇಶದ ಸ್ವಾಾತಂತ್ರ್ಯ ಹೋರಾಟದ ಕಿಚ್ಚು ರಣಕಹಳೆಯಾಗಿದ್ದ ‘ವಂದೇ ಮಾತರಂ’ ಮಂತ್ರವೂ ಸಾಕ್ಷಾತ್ ದುರ್ಗಾ ದೇವಿಯನ್ನು ಸ್ಮರಿಸುವ ಭಾರತೀಯರ ಆತ್ಮಗೀತೆಯಾಗಿತ್ತು.

ಇಲ್ಲಿ ಹೆಣ್ಣು ಹೊನ್ನು ಮಣ್ಣು ಅನ್ನ ನೀರು ನೆಲ ಜಲ ವಾಹನ ಆಯುಧ ಎಲ್ಲವೂ ಪೂಜ್ಯನೀಯ. ಇದೇ ಭಾವನೆಯಿಂದ ರಕ್ಷಣಾ ಮಂತ್ರಿಿಗಳಾದ ರಾಜನಾಥ್ ಸಿಂಗ್ ಅವರು ರಫೇಲ್ ಚಕ್ರಕ್ಕೆೆ ನಿಂಬೆಹಣ್ಣು ಇಟ್ಟು ದೇಶದೊಳಗೆ ತಂದಿದ್ದು ದೇಶಕ್ಕೆೆ ದೇಶದ ದೈವ ಯೋಧರಿಗೆ ಒಳಿತಾಗಲಿ ಎಂಬ ಹರಕೆಯಿಂದಲೇ ಹೊರತು ತಾನು ತನ್ನ ಮಗ ಮೊಮ್ಮಗ ವಂಶಸ್ಥರೆಲ್ಲಾಾ ಇದರ ಮೇಲೆ ಕುಳಿತು ಚುನಾವಣೆ ಪ್ರಚಾರ ಮಾಡಲಿ ಎಂಬ ದುರುದ್ದೇಶದಿಂದಲ್ಲ.

ಮೊನ್ನೆೆ ದೇಶದ ಭದ್ರತೆಗೆ ಸೇರ್ಪಡೆಯಾದ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ವಿಮಾನಕ್ಕೆೆ ನಮ್ಮ ದೇಶದ ರಕ್ಷಣಾ ಮಂತ್ರಿಿಗಳು ಫ್ರಾಾನ್‌ಸ್‌‌ನಲ್ಲಿ ಭಾರತೀಯ ಸಾಂಸ್ಕೃತಿಕ ಸಂಪ್ರದಾಯದಂತೆ ಕುಂಕುಮ ಹೂವು ಇಟ್ಟು ತೆಂಗಿನಕಾಯಿ ಒಡೆದು ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಪೂಜಿಸಿದ್ದನ್ನು ಅದೇ ಕೆಲವರು ವಿರೋಧಿಸಿ ಮೆಣಸಿನಕಾಯಿ ತಿಂದವರಂತೆ ಮೈಪರಚಿಕೊಂಡರು. ಇವರುಗಳು ಹೇಳುವುದೇನೆಂದರೆ ಭಾರತ ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲರೂ ಸಮಾನರು, ದೇಶದ ಚುನಾಯಿತ ವ್ಯಕ್ತಿಿಯಾದ ಮಂತ್ರಿಿಗಳು, ದೇಶದ ಆಸ್ತಿಿಯಾದ ವಿಮಾನಕ್ಕೆೆ ಹಿಂದೂ ಧಾರ್ಮಿಕ ನೀತಿಯಂತೆ ಪೂಜಿಸಿರುವುದು ಜಾತ್ಯತೀತತೆಯ ವಿರೋಧಿ ನಡೆ, ಹಾಗೆ ಮಾಡಿರುವುದು ಇಲ್ಲಿನ ಅಲ್ಪಸಂಖ್ಯಾಾತರಿಗೆ ತಡೆದುಕೊಳ್ಳಲಾಗುವುದಿಲ್ಲ ಎಂದು ಬಾಯಿಬಡಿದುಕೊಂಡಿದ್ದಾಾರೆ.

ಸರಿ, ಇವರ ಜಾತ್ಯತೀತ ಸಿದ್ಧಾಾಂತವನ್ನೇ ಜೋಪಾನ ಮಾಡುವ ದೃಷ್ಟಿಿಯಿಂದ ಕೇಳುವುದಾದರೆ, ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆೆಯಾದಾಗ ಹಂತಕರ ಜಾತಿಯನ್ನು ನೋಡಿ ಸಾವಿರಾರು ಸಿಖ್‌ರನ್ನು ಸರ್ವನಾಶ ಮಾಡಿದರಲ್ಲ ಅದು ಯಾವ ನೀತಿಯ ಜಾತ್ಯತೀತ? ಆಂಧ್ರಪ್ರದೇಶದಲ್ಲಿ ಪ್ರಜೆಗಳಿಂದ ಚುನಾಯಿತನಾದ ಮುಖ್ಯಮಂತ್ರಿಿಯೊಬ್ಬ ಕೇವಲ ತನ್ನ ಸ್ವಾಾರ್ಥಕ್ಕಾಾಗಿ ತನ್ನ ಪಕ್ಷವೊಂದರ ದೊಡ್ಡ ವ್ಯಕ್ತಿಿಯನ್ನು ಮೆಚ್ಚಿಿಸುವ ಗುಲಾಮಗಿರಿಗಾಗಿ ತಾನು ತನ್ನ ಕುಟುಂಬವನ್ನು ಮತಾಂತರಗೊಳಿಸಿಕೊಂಡು ಅದರ ಪ್ರಭಾವದಿಂದ ರಾಜ್ಯದ ಸಾವಿರಾರು ಜನರನ್ನು ಮತಾಂತರಗೊಳಿಸುವುದರಲ್ಲಿ ಸಫಲನಾದನಲ್ಲಾಾ, ಅದು ಯಾವ ಸೀಮೆಯ ಜಾತ್ಯತೀತತೆ? ಎಂಬ ಇದಲ್ಲದೆ ದೇವಾಲಯಗಳ ದಿಕ್ಕುದೆಸೆಗಳ ತಿಳಿವಳಿಕೆಗಳಿಲ್ಲದ ದಡ್ಡ ಮನುಷ್ಯರೆಲ್ಲಾಾ ಕೇವಲ ವೋಟಿಗಾಗಿ ಹಣೆತುಂಬ ಕುಂಕುಮ ಬಳಿದುಕೊಂಡು ದೇವಸ್ಥಾಾನಗಳನ್ನು ಮಠಗಳನ್ನು ಸುತ್ತುವುದು ಇವರಿಗೆ ಜಾತ್ಯತೀತದ ವಿರೋಧಿಯಾಗುವುದಿಲ್ಲ.

ಇದೇ ಜನ್ಮದಲ್ಲಿ ಅವಕಾಶವಿದ್ದರೂ ಮುಂದಿನ ಜನ್ಮದಲ್ಲಿ ಮುಸಲ್ಮಾಾನನಾಗಿ ಹುಟ್ಟುತ್ತೇನೆ ಎಂದು ಮತದಾರರ ಮುಂದೆ ಹೇಳಿಕೊಂಡು, ಅದೇ (ಇವರುಗಳೇ ಕರೆದಿರುವ) ಮನುವಾದಿಗಳನ್ನು ಪುರೋಹಿತಶಾಹಿಗಳನ್ನು ಕೋಮುವಾದಿಗಳನ್ನು ಕರೆಸಿಕೊಂಡು ಮನೆಯೊಳಗೆ ಶತ್ರುನಾಶ, ಉಗ್ರರ ಹೋಮ ಹವನಗಳನ್ನು ಮಾಡುವುದಿದೆಯಲ್ಲಾಾ? ಅದಕ್ಕಿಿಂತ ಜಾತ್ಯತೀತೆಯ ಅವಲಕ್ಷಣಗಳು ಇವರುಗಳಿಗೆ ಬೇಕೇ? ದೂರುಗಳು ಬಂದು ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ ದಾಳಿ ಮಾಡಿ ಸಾಕ್ಷಿಗಳನ್ನು ಸಂಗ್ರಹಿಸಿ ಪರಿಶೀಲಿಸುವ ಆದಾಯ ತೆರಿಗೆಯ ಕರ್ತವ್ಯವನ್ನು ಜಾತಿಗಳ ವ್ಯಾಾಪ್ತಿಿಯೊಳಗೆ ಸೇರಿಸಿ ಪ್ರತಿಭಟಿಸುವುದು ಯಾವ ಜಾತ್ಯತೀತ? ಆದರೆ, ಅವುಗಳನ್ನೆೆಲ್ಲಾಾ ಇವುಗಳು ವಿರೋಧಿಸುವುದಿಲ್ಲ. ಏಕೆಂದರೆ ಅವುಗಳೆಲ್ಲಾಾ ಇವುಗಳು ಸಮಯಕ್ಕೆೆ ಸರಿಯಾಗಿ ಉಪಯೋಗಿಕೊಳ್ಳುವ ಮತ್ತು ಉಪಯೋಗಿಸಲ್ಪಡುವ ಆಯುಧಗಳೇ ಆಗಿರುವುದರಿಂದ ಎದೆಗೆ ಒದೆಯುಲಾಗುವುದಿಲ್ಲ.

ಮೊನ್ನೆೆ ನಡೆದ ಮಹಿಷಾಸುರ ಉತ್ಸವವನ್ನು ಆಚರಿಸಲು ಹೊರಟವರ ಮೇಲೆಯೂ ಇಂತಹದೇ ಪ್ರಭಾವವನ್ನು ಇವರುಗಳು ಬಿತ್ತಿಿದ್ದಾಾರೆ. ಒಂದೆಡೆ ಜಾತ್ಯತೀತ ರಾಷ್ಟ್ರ ಎನ್ನುತ್ತಾಾರೆ. ಮತ್ತೊೊಂದೆಡೆ ರಾಕ್ಷಸನಾದ ಮಹಿಷಾಸುರನ ಜಾತಿಯನ್ನು ಶೋಧಿಸಿ ಅವನ ಉತ್ಸವವನ್ನು ಆಚರಿಸುವುದು ನಮ್ಮ ಹಕ್ಕು ಎನ್ನುತ್ತಾಾರೆ. ನಾಳೆ ಕಾಡುಗಳ್ಳ ವೀರಪ್ಪನ್ ಜಾತಿಯನ್ನು ಪರಿಗಣಿಸಿ ಆತನ ಜನ್ಮೋೋತ್ಸವವನ್ನೂ ಆಚರಿಸಿದರೆ ಆಶ್ಚರ್ಯವಿಲ್ಲ! ಇಂತಹ ರೆಡಿಮೇಡ್ ರೋಗಗಳು ಪ್ರತಿಭಟನೆಗಳೆಲ್ಲಾಾ ಬಿಜೆಪಿ ಸರಕಾರವಿರುವಾಗಲೇ ನಾ ನಿನ್ನ ಬಿಡಲಾರೆ ಚಲನಚಿತ್ರದ ಕಾಮಿನಿಯಂತೆ ಮೈಮೇಲೆ ಏರಿಬಿಡುತ್ತದೆ. ಇವರುಗಳಿಗೆ ಬಹುಸಂಖ್ಯಾಾತ ಹಿಂದೂಗಳನ್ನು ಬಗ್ಗಿಿಸಬೇಕೆಂಬ ವಿಕೃತ ಖಯಾಲಿ. ಅಂದು ಬ್ರಿಿಟಿಷರು ದೇಶವನ್ನು ಅಧೀನಕ್ಕೆೆ ಪಡೆಯುವ ಮೊದಲ ಅಸ್ತ್ರವೇ ಇಲ್ಲಿನ ಪಾರಂಪರಿಕ ಭಕ್ತಿಿ ನಂಬಿಕೆ ಶ್ರದ್ಧೆೆ ಆಚರಣೆಗಳನ್ನು ಕುಲಗೆಡಿಸುವುದಾಗಿತ್ತು. ಅದರ ಮುಂದುವರೆದ ಸಂತಾನವೇ ಇಂದಿಗೂ ಅಸ್ತಿಿತ್ವದಲ್ಲಿದೆ.

ಆ ಮೂಲಕ ಅಲ್ಪಸಂಖ್ಯಾಾತರನ್ನು ದಲಿತರನ್ನು ಹಿಂದೂ ಧರ್ಮದ ವಿರುದ್ಧ ಸದಾ ಹತ್ತಿಿಕ್ಕುವ ಕುತಂತ್ರ ಭಾಗವಾಗಿ ಇಂತಹ ಪ್ರತಿಭಟನೆ ಮೊಸಳೆ ಕಣ್ಣೀರು ಸಮಯ ಸಾಧಕತನಗಳ ಬಯಲು ಪ್ರದರ್ಶಗಳಾಗುತ್ತದೆ. ಸ್ಪಷ್ಟವಾದ ವಿಚಾರವೆಂದರೆ ನಮ್ಮ ದೇಶದಲ್ಲಿ ಸಂವಿಧಾನ ಇರುವುದು ಪ್ರಜಾತಂತ್ರ ವ್ಯವಸ್ಥೆೆಗಾಗಿ, ಅದರ ಭದ್ರತೆ ಸಮಾನತೆಯ ಅನುಷ್ಠಾಾನಕ್ಕೆೆ ಹೊರತು ದೇಶದ ಪಾರಂಪರಿಕತೆಯನ್ನು, ಭಯ ಭಕ್ತಿಿ ನಂಬಿಕೆಯನ್ನು ನಾಶಪಡಿಸುವುದಕ್ಕಲ್ಲ. ‘ಸಂವಿಧಾನ’ ಆಧುನಿಕ ಭಾರತದ ಪ್ರಜಾಪ್ರಭುತ್ವದ ಮಹಾಗ್ರಂಥ. ಇಂತಹ ‘ಸಂವಿಧಾನ’ದ ಶಕ್ತಿಿಯೇ ಬಡಪಾಯಿ ಪ್ರತಾಪಚಂದ್ರ ಸಾರಂಗಿ ಅವರಂತಹ ಹಣಬಲವಿಲ್ಲದ ಸಾಧಾರಣ ಸರಳ ವ್ಯಕಿಯನ್ನು ಸಂಸತ್ ಸದಸ್ಯನಾಗಿ ಚುನಾಯಿಸಿ ದೇಶದ ಸಂಸತ್ ಭವನಕ್ಕೆೆ ಕಳುಹಿಸುತ್ತದೆ ಮತ್ತು ಮಂತ್ರಿಿಯನ್ನಾಾಗಿಸುತ್ತದೆ. ಅದೇ ಸಂವಿಧಾನವೇ ಅಕ್ರಮ ಕೋಟ್ಯಧಿಪತಿಗಳನ್ನು ತಿಹಾರ್ ಜೈಲಿನೊಳಗೆ ತಿಗಣೆಗಳೊಂದಿಗೆ ಜೀವಿಸುವಂತೆ ಮಾಡುತ್ತದೆ.

ಇಂತಹ ಸಂವಿಧಾನವೇ ದೇಶದ ಪ್ರಜಾಪ್ರಭೂತ್ವದ ಯಂತ್ರವನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಹೋಗುತ್ತಿಿದೆ. ಆದರೆ, ವಿಶ್ವದ ದೃಷ್ಟಿಿಯಲ್ಲಿ ಭಾರತವೆಂದರೆ ಒಂದು ಧಾರ್ಮಿಕತೆ ನೆಲೆಗೊಂಡಿರುವ ಸಾಂಸ್ಕೃತಿಕ ದೇಶ. ನಮ್ಮ ದೇಶದಲ್ಲಿ ಜನ್ಮ ನೀಡುವ ಹೆತ್ತ ತಾಯಿಯಿಂದ ಮೊದಲಾಗಿ, ಕೊನೆಗೊಳ್ಳುವ ಮಣ್ಣು ಅಗ್ನಿಿ ಬೂದಿ ಎಲ್ಲವನ್ನು ಕೃತಜ್ಞತಾ ಪೂರ್ವಕವಾಗಿ ಕಾಣುವ ಪ್ರತೀತಿ ನಮ್ಮ ಸಂಸ್ಕೃತಿಯದ್ದು. ಇಲ್ಲಿನ ಜನಗಳ ವೈಯಕ್ತಿಿಕ ನಂಬಿಕೆ ಭಯ ಭಕ್ತಿಿಯನ್ನು ಅಲ್ಲಗೆಳೆಯಲಾಗುವುದಿಲ್ಲ. ಇಲ್ಲಿ ಧ್ವಜವೆಂಬುದು ಬರಿಯ ಬಟ್ಟೆೆಯ ತುಂಡಲ್ಲ. ಅದು ಭಾವನೆಯ ಪ್ರತೀಕ. ಹಾಗೆಯೇ ತಾಯಿ ಎಂದರೆ ಬರಿಯ ಹೆಣ್ಣಲ್ಲ ಆಕೆ ಪ್ರತ್ಯಕ್ಷ ದೈವ. ಇಲ್ಲಿ ಹೆಣ್ಣು ಹೊನ್ನು ಮಣ್ಣು ಅನ್ನ ನೀರು ನೆಲ ಜಲ ವಾಹನ ಆಯುಧ ಎಲ್ಲವೂ ಪೂಜ್ಯನೀಯ. ಇದೇ ಭಾವನೆಯಿಂದ ರಕ್ಷಣಾ ಮಂತ್ರಿಗಳಾದ ರಾಜನಾಥ್ ಸಿಂಗ್ ಅವರು ರಫೇಲ್ ಚಕ್ರಕ್ಕೆೆ ನಿಂಬೆಹಣ್ಣು ಇಟ್ಟು ದೇಶದೊಳಗೆ ತಂದಿದ್ದು ದೇಶಕ್ಕೆೆ ದೇಶದ ದೈವ ಯೋಧರಿಗೆ ಒಳಿತಾಗಲಿ ಎಂಬ ಹರಕೆಯಿಂದಲೇ ಹೊರತು ತಾನು ತನ್ನ ಮಗ ಮೊಮ್ಮಗ ವಂಶಸ್ಥರೆಲ್ಲಾಾ ಇದರ ಮೇಲೆ ಕುಳಿತು ಚುನಾವಣೆ ಪ್ರಚಾರ ಮಾಡಲಿ ಎಂಬ ದುರುದ್ದೇಶದಿಂದಲ್ಲ.