ವಿಶಾಖಪಟ್ಟಣಂ: ಆಂಧ್ರಪ್ರದೇಶ ಮತ್ತು ಒರಿಸ್ಸಾ ಗಡಿಯಲ್ಲಿರುವ ಸಿಲೇರು ನದಿಯಲ್ಲಿ ಎರಡು ನಾಡದೋಣಿ ಮುಳುಗಡೆ ಯಾಗಿವೆ.
ದೋಣಿಯಲ್ಲಿ ಕುಳಿತು ಅರ್ಧ ನದಿಯವರೆಗೆ ಬರುತ್ತಿದ್ದಂತೆ ಒಂದು ದೋಣಿ ಮುಳುಗಿದೆ. ಈ ವೇಳೆ ಮುಳುಗಿದ ದೋಣಿಯಲ್ಲಿದ್ದ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಎರಡನೇ ದೋಣಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆಗ ಎರಡನೇ ದೋಣಿಯೂ ಮುಳುಗಿದೆ. ಎರಡೂ ದೋಣಿಯಲ್ಲಿದ್ದ 13 ಜನರ ಪೈಕಿ ನಾಲ್ವರು ಈಜಿ ದಡವನ್ನು ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಲೇರು ನದಿಯಲ್ಲಿ 10 ತಿಂಗಳ ಮಗುವಿನ ಶವ ಪತ್ತೆಯಾಗಿತ್ತು. ಮಧ್ಯಾಹ್ನದ ವೇಳೆಗೆ ಇನ್ನಿಬ್ಬರ ಶವ ಪತ್ತೆಯಾಗಿದೆ.
ಬುಡಕಟ್ಟು ಜನಾಂಗದ ಜನರು, ವಲಸಿಗ ಕಾರ್ಮಿಕರು ಹೈದರಾಬಾದ್ನಿಂದ ಒರಿಸ್ಸಾದ ಕೊಂಡುಗುಡ ಎಂಬ ತಮ್ಮ ಹಳ್ಳಿಗೆ ದೋಣಿಯಲ್ಲಿ ಪ್ರಯಾಣಿಸು ತ್ತಿದ್ದಾಗ ಈ ದುರಂತ ಸಂಭವಿಸಿದೆ. ಆಂಧ್ರಪ್ರದೇಶ ಮತ್ತು ಒರಿಸ್ಸಾದಲ್ಲಿ ಕೋವಿಡ್ ಕರ್ಫ್ಯೂ ವಿಧಿಸಿದ್ದರಿಂದ ರಸ್ತೆ ಮಾರ್ಗದ ಬದಲಾಗಿ ನದಿಯ ಮೂಲಕ ಅವರು ತಮ್ಮ ಊರುಗಳಿಗೆ ಹೊರಟಿದ್ದರು.
ಇವರೆಲ್ಲ ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.