ಜೈಪುರ್: ರಾಜಸ್ಥಾನದಲ್ಲಿ ಆಹಾರ ಕೊಡುವ ನೆಪದಲ್ಲಿ ಆಂಬುಲೆನ್ಸ್ ನಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾ ಚಾರ ಎಸಗಲಾಗಿದೆ.
ಆಂಬುಲೆನ್ಸ್ ಚಾಲಕ ಮತ್ತು ಕ್ಲೀನರ್ ಅತ್ಯಾಚಾರ ಎಸಗಿದ ಆರೋಪಿಗಳು. ಆಹಾರ ನೀಡುವುದಾಗಿ ಯುವತಿಗೆ ಆಮಿಷವೊಡ್ಡಿದ ಆರೋಪಿಗಳು ಆಂಬು ಲೆನ್ಸ್ ನಲ್ಲಿ ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಆಂಬು ಲೆನ್ಸ್ ನಲ್ಲೇ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೋತಿ ಡೋಂಗ್ರಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.