Friday, 22nd November 2024

ಯಾಸ್ ಚಂಡಮಾರುತ: ಒಡಿಶಾಗೆ 1000 ಸಾವಿರ ಕೋ., ಪ.ಬಂಗಾಳ, ಜಾರ್ಖಂಡ್‌ಗೆ ತಲಾ 500 ಕೋ. ರೂ. ಪರಿಹಾರ

ನವದೆಹಲಿ: ಯಾಸ್ ಚಂಡಮಾರುತ ಪರಿಹಾರ ಕಾರ್ಯಗಳಿಗಾಗಿ ಪ್ರಧಾನಿ ಮೋದಿ ಶುಕ್ರವಾರ ಒಂದು ಸಾವಿರ 1000 ಕೋಟಿ ರೂ. ಒಡಿಶಾಗೆ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ಗೆ ತಲಾ 500 ಕೋಟಿ ರೂ.ಗಳನ್ನು ನೀಡಲಾಗುವುದು ಎಂದಿದ್ದಾರೆ.

ಹಾನಿಯ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರವು ನಿಯೋಜಿಸಿರುವ ಜಡ-ಮಂತ್ರಿಮಂಡಲದ ತಂಡವು ಮೌಲ್ಯಮಾಪನ ಮಾಡುತ್ತದೆ. ಮೃತ ವ್ಯಕ್ತಿಯ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಚಂಡ ಮಾರುತದಲ್ಲಿ ಗಂಭೀರವಾಗಿ ಗಾಯ ಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದರು.

ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿ ಪರಿಶೀಲಿಸಲು ಮೋದಿ ಶುಕ್ರವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದರು. ಅವರು ಒಡಿಶಾದ ಭದ್ರಾಕ್ ಮತ್ತು ಬಾಲೇಶ್ವರ ಜಿಲ್ಲೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಪುರ್ಬಾ ಮೆಡಿನಿಪುರ ದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಂಡರು. ‘ವಿಪತ್ತುಗಳ ಹೆಚ್ಚು ವೈಜ್ಞಾನಿಕ ನಿರ್ವಹಣೆ ಯತ್ತ ನಾವು ಗಮನ ಹರಿಸಬೇಕಾ ಗಿದೆ ಎಂದು ಪಿಎಂ ಹೇಳಿದರು.

ಯಾಸ್ ಚಂಡಮಾರುತದಿಂದ ಒಡಿಶಾದಲ್ಲಿ ಗರಿಷ್ಠ ಹಾನಿ ಮತ್ತು ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ನ ಕೆಲವು ಭಾಗಗಳಿಗೆ ತೊಂದರೆಯಾಗಿದೆ ಎಂದು ಪ್ರಧಾನಿಗೆ ತಿಳಿಸಲಾಯಿತು. ಏತನ್ಮಧ್ಯೆ, ಉಂಟಾದ ಹಾನಿಯನ್ನು ತಗ್ಗಿಸಲು ಕೇಂದ್ರದಿಂದ ಯಾವುದೇ ಹಣಕಾಸಿನ ನೆರವು ಪಡೆಯುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.