ಶ್ರೀನಿವಾಸ ಮೂರ್ತಿ ಎನ್. ಎಸ್.
ಹಾಸನ ಜಿಲ್ಲೆ ಎಂದರೆ ನಮಗೆ ನೆನಪಾಗುವುದು ಅಪೂರ್ವ ವಾಸ್ತು ಶೈಲಿಯ ಹೊಯ್ಸಳರ ದೇವಾಲಯಗಳು. ಅಲ್ಲಿನ ಕೆಲವು ವಾಸ್ತು ರತ್ನಗಳು ಸಂಪನ್ಮೂಲ ಕೊರತೆಯಿಂದ ವಿನಾಶದತ್ತ ಸಾಗಿವೆ. ಅಂತಹ ಒಂದು ದೇಗುಲ ಚನ್ನರಾಯಪಟ್ಟಣ ತಾಲ್ಲೂಕಿನ ಆಣತಿ ಗ್ರಾಮದ ಲಕ್ಷ್ಮೀನಾರಾಯಣ ದೇವಾಲಯ.
ಅಣತಿ ಈಗ ಕುಗ್ರಾಮ. ಹಿಂದೆ ಪ್ರಮುಖ ಅಗ್ರಹಾರವಾಗಿದ್ದ ಇಲ್ಲಿ ಹಲವು ದೇವಾಲಯಗಳಿದ್ದು, ಅರಸರು ದತ್ತಿ ನೀಡಿದ ಉಖ
ನೋಡಬಹುದು. ಇಲ್ಲಿನ ಲಕ್ಷ್ಮೀನಾರಾಯಣ ದೇವಾಲಯ 1139 ರಲ್ಲಿ ರಾಜ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ‘ಹೊಯ್ಸಳ ಶಿಲ್ಪಕಲೆ’ ಪುಸ್ತಕದಲ್ಲಿ ವಸಂತಲಕ್ಷ್ಮೀ ದಾಖಲಿಸಿದ್ದಾರೆ. ಭುಜಬಲ ವೀರಗಂಗನ ಕಾಲದಲ್ಲಿ ಜನಾ ರ್ಧನ ಭಟ್ಟರು ಲಕ್ಷ್ಮೀನಾರಾಯಣ ಪ್ರತಿಷ್ಠಾಪಿಸಿದ ಶಾಸ್ತ್ರ ನೋಲ್ಲೇಖವಿದೆ. ಇನ್ನು ಈ ಶಾಸನದಲ್ಲಿ ಉಲ್ಲೇಖಗೊಂಡ ಹೊಯ್ಸಳ
ರಾಜ ವಿಷ್ಣುವರ್ಧನ ಇರಬೇಕೆಂದು ಅಭಿಪ್ರಾಯ ಇದೆ.
1615 ರ ಶಾಸನದಲ್ಲಿ ತಿಮ್ಮಪ್ಪ ನಾಯಕನ ಮಗ ಅಣತಿಯ ತಿರುಮಲ ನಾಯಕರು ದೀಪಮಾಲೆ ಕಂಭದ ಸೇವೆ ಮಾಡಿದ ಉಲ್ಲೇಖ ನೋಡಬಹುದು. ಆದರೆ ಈ ಶಾಸನದಲ್ಲಿ ಲಕ್ಷ್ಮೀಕಾಂತ ಎಂದು ಉಲ್ಲೇಖಿಸಲಾಗಿದೆ. ದೇವಾಲಯ ಗರ್ಭಗುಡಿ,
ಸುಖನಾಸಿ, ಅಂತರಾಳ ಹಾಗು ನವರಂಗ ಹೊಂದಿದ್ದು ಪ್ರವೇಶ ಮಂಟಪ ನಂತರ ಕಾಲದಲ್ಲಿ ಸೇರ್ಪಡೆಯಾಗಿದೆ. ಗರ್ಭಗುಡಿ ಯಲ್ಲಿ ಸುಮಾರು 8 ಅಡಿ ಎತ್ತರದ ಸುಂದರವಾದ ಲಕ್ಷ್ಮೀ ನಾರಾಯಣನ ಮೂರ್ತಿ ಇದ್ದು ಎಡ ಭಾಗದಲ್ಲಿ ಲಕ್ಷ್ಮಿಯನ್ನು
ತೊಡೆಯ ಮೇಲೆ ಕೂಡಿಸಿಕೊಂಡಿದ್ದು ಶಂಖ ಚಕ್ರಾಧಾರಿಯಾಗಿದ್ದಾನೆ.
ನಿರ್ವಹಣೆ ಕೊರತೆಯಿಂದ ಮೂರ್ತಿ ಸಾಕಷ್ಟು ಸವೆದಿದ್ದು ಶಿಲ್ಪದ ಲಕ್ಷಣ ಗುರುತಿಸಿವುದು ಕಷ್ಟ. ಗರುಡ ಪೀಠದ ಮೇಲೆ ಇರುವ ಮೂರ್ತಿ ಹಾರ ಹಾಗು ಕಾಲಿನ ಪೀಠಗಳು ವಿಶೇಷವಾಗಿದೆ. ಇಲ್ಲಿನ ನವರಂಗದ ಭುವನೇಶ್ವರಿಯಲ್ಲಿನ ಕಮಲದ ಕೆತ್ತನೆ ಇದ್ದು ಮಧ್ಯದಲ್ಲಿನ ಗರ್ಭಗುಡಿಯ ಮೂರ್ತಿಯ ಪ್ರತಿರೂಪ ಇರುವುದು ವಿಶೇಷ. ದೇವಾಲಯ ವಿನಾಶದತ್ತ ಸಾಗಿದ್ದು ಒಂದು ಭಾಗದ ಗೋಡೆಗಳು ಬಿದ್ದು ಹೋಗಿದೆ. ಗರ್ಭಗುಡಿಯಲ್ಲಿ ಬೆಳಕಿನ ಕೊರತೆಯಿಂದ ಇಲ್ಲಿನ ನವರಂಗದಲ್ಲಿ ಇರಿಸಲಾದ ಉತ್ಸವ ಮೂರ್ತಿಗೆ ಪೂಜೆ ನಡೆಯುತ್ತಿದೆ.
ದೇವಾಲಯದ ಸುಂದರ ಮೂರ್ತಿ ಹಾಳಾಗುವ ಮುನ್ನ ಸಂರಕ್ಷಿಸಿದಲ್ಲಿ ಸುಂದರ ಇತಿಹಾಸದ ಕೊಂಡಿಯನ್ನು ಉಳಿಸಿದಂತಾಗು ತ್ತದೆ. ಹೊಸ ದೇವಾಲಯದ ಬದಲಾಗಿ ಇರುವ ದೇವಾಲಯವನ್ನೇ ಉಳಿಸುವಲ್ಲಿ ಸರಕಾರ, ಸಂಘ ಸಂಸ್ಥೆಗಳು ಮನಸ್ಸು ಮಾಡಬೇಕು. ಅಣತಿಯು ಚನ್ನರಾಯಪಟ್ಟಣದಿಂದ 32 ಕಿಮೀ ಮತ್ತು ತಿಪಟೂರಿನಿಂದ 17 ಕಿಮೀ ದೂರದಲ್ಲಿದೆ.