ಚೆನ್ನೈ: ಮೀಟೂ ಪ್ರತಿಭಟನೆಯ ಪರಿಣಾಮ, ತಮಿಳು ಗೀತರಚನೆಕಾರ ವೈರಮುತ್ತು ಅವರು ತಮಗೆ ನೀಡಲಾದ ಒಎನ್ ವಿ ಕುರುಪ್ ಸಾಹಿತ್ಯ ಪ್ರಶಸ್ತಿಯನ್ನು ಮರಳಿಸಿದ್ದಾರೆ.
ಗೀತರಚನೆಕಾರ ವೈರಮುತ್ತು ವಿರುದ್ಧ ಮೀಟೂ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವೈರಮುತ್ತು, ಪ್ರಶಸ್ತಿ ತೀರ್ಪು ಗಾರರಿಗೆ ಅವಮಾನವಾಗದಂತೆ ಮಾಡುವುದಕ್ಕೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಪ್ರಶಸ್ತಿ ನೀಡುವುದನ್ನು ಮರುಪರಿಶೀಲನೆ ಮಾಡುವ ನಿರ್ಧಾರದ ಹಿಂದಿನ ಹಗೆತನವನ್ನು ವೈರಮುತ್ತು ದೂಷಿಸಿದ್ದಾರೆ. ಅಕಾಡೆಮಿಯಿಂದ ಘೋಷಣೆ ಮಾಡಲಾಗಿರುವ 3 ಲಕ್ಷ ಬಹುಮಾನದ ಹಣವನ್ನು ಕೇರಳ ಸಿಎಂ ಪಬ್ಲಿಕ್ ರಿಲೀಫ್ ಫಂಡ್ ಗೆ ನೀಡುವಂತೆ ವೈರ ಮುತ್ತು ಮನವಿ ಮಾಡಿದ್ದು ತಾವೂ ಸಹ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.