ರವಿ ಜಡ್ಡಿನಗದ್ದೆ
ದೇಹದ ಆಕಾರ ಬದಲಿಸುವ ‘ಟ್ರಾನ್ಸ್ ಫಾರ್ಮರ್’ ತಂತ್ರಜ್ಞಾನದ ರೋಬೋಟ್‌ಗಳು ಮಕ್ಕಳಿಗೆ ಹೆಚ್ಚು ಪರಿಚಯ!
ಅದೇ ಹೆಸರಿನ ಚಲನಚಿತ್ರಗಳ ಮೂಲಕ, ಆಧುನಿಕ ತಂತ್ರಜ್ಞಾನ ಬಳಸುವ ವಿವಿಧ ರೋಬೋಟ್‌ಗಳ ಓಡಾಟವನ್ನು ಚಿತ್ರಗಳಲ್ಲಿ ಕಂಡು ವಿಸ್ಮಯಗೊಂಡವರುಂಟು. ಈಗ ದೇಹದ ಆಕಾರ ಬದಲಿಸುವ ಅತ್ಯಾಧುನಿಕ ರೋಬೋಟ್‌ಗಳನ್ನು ಜಪಾನ್ ದೇಶವು ಚಂದ್ರನ ಮೇಲೆ ಉಪಯೋಗಿಸಲಿದೆ.
ಜಪಾನಿನ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿಯು ಸೋನಿ ಸಂಸ್ಥೆಯ ಸಹಯೋಗದಲ್ಲಿ ರೂಪಿಸಿರುವ ಗೋಳಾಕಾರದ ರೋಬೋಟ್, ಚಂದ್ರನನ್ನು ತಲುಪಲಿದೆ. ದೇಹದ ಆಕಾರ ಬದಲಿಸಬಲ್ಲ ಈ ಗೋಳಾಕಾರದ ರೋಬೋಟ್ ತಯಾರಿಸಲು ಅಲ್ಲಿನ ಆಟಿಕೆಗಳ ತಯಾರಕರಾದ ಟೋಮಿ ಸಂಸ್ಥೆ ಸಹ ಕೈಜೋಡಿಸಿದೆ.
ಜಪಾನಿನ ಚಂದ್ರಯಾನದ ಸಾಹಸದಲ್ಲಿ ಭಾಗಿಯಾಗಲಿರುವ ಈ ರೋಬೋಟ್, ಲೂನಾರ್ ಲ್ಯಾಂಡರ್‌ಮೂಲಕ ಚಂದ್ರನ ನೆಲದ ಮೇಲೆ ಇಳಿಯಲಿದೆ. ಕೆಳಗಿಳೀಯುವಾಗ ಅದರ ಆಕಾರ ಗೋಳದಂತಿರುತ್ತದೆ. ನೆಲವನ್ನು ಮುಟ್ಟಿದ ಕೂಡಲೆ, ತನ್ನ ಪೂರ್ಣ ಸಾಮರ್ಥ್ಯದ ಆಕಾರಕ್ಕೆ ರೂಪಾಂತರಗೊಂಡು, ಚಂದ್ರನ ಮೇಲಿನ ಛಾಯಾಚಿತ್ರಗಳನ್ನು ತೆಗೆಯಲಿದೆ. 2022ರಲ್ಲಿ
ಜಪಾನಿನ ಚಂದ್ರಯಾನದ ಯಾತ್ರಿಯಾಗಲಿರುವ ಈ ಗೋಳಾಕಾರದ ರೋಬೋಟ್, ಮುಂದಿನ ದಿನಗಳಲ್ಲಿ ಉಪಯೋಗಿಸ ಲ್ಪಡಬಹುದಾದ ವಿನ್ಯಾಸ ಬದಲಿಸಬಲ್ಲ ವಿವಿಧ ರೊಬೋಟ್‌ಗಳ ಮುನ್ಸೂಚನೆ ಎಂದೇ ಹೇಳಬಹುದು.
ದೇಹದ ಆಕಾರ ಬದಲಿಸುವ ರೋಬೋಟ್‌ಗಳ ಲಾಭವೆಂದರೆ, ಅವನ್ನು ಬಾಹ್ಯಾಕಾಶ ನೌಕೆಗಳಲ್ಲಿ ಸಾಗಿಸಲು ಕಡಿಮೆ ಜಾಗ ಸಾಕು. ಚಲನಚಿತ್ರಗಳಲ್ಲಿ ಇಂದು ಕಂಡುಬರುತ್ತಿರುವ ಟ್ರಾನ್ಸ್ ಫಾರ್ಮರ್ ರೋಬೋಟ್‌ಗಳು ಬಾಹ್ಯಾಕಾಶ ಯಾನದ ಅವಿಭಾಜ್ಯ
ಅಂಗಗಳಾಗುವ ದಿನ ದೂರವಿಲ್ಲ.