Sunday, 15th December 2024

ಸಂಯಮ ತೋರಿದ ವಾಟ್ಸಾಪ್

ವಾಟ್ಸಾಪ್ ಬಳಕೆದಾರರಿಗೆ ಆಗಾಗ ಒಂದು ಸಂದೇಶ ಬರುತ್ತಿರುತ್ತದೆ. ತನ್ನ ಹೊಸ ನಿಯಮಾವಳಿಗಳನ್ನು ಓದಿ ಮತ್ತು ಅದಕ್ಕೆ ಒಪ್ಪಿಗೆ ನೀಡಿ ಎಂದು ಬಳಕೆದಾರರನ್ನು ಮನವಿ ಮಾಡುವ ಸಂದೇಶ ಅದು.

ಅಂತಹ ನಿಯಮಾವಳಿಗೆ ಒಪ್ಪಿಗೆ ನೀಡದಿದ್ದರೆ, ವಾಟ್ಸಾಪ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಕಳೆದ ಜನವರಿಯಲ್ಲಿ ನೀಡಲಾಗಿತ್ತು. ಅದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ನಂತರ, ಷರತ್ತುಗಳಿಗೆ ಒಪ್ಪಿಗೆ ಸೂಚಿಸುವ ದಿನಾಂಕವನ್ನು ಮುಂದೂಡಲಾಗಿತ್ತು. ಹೊಸ ಷರತ್ತುಗಳಿಗೆ ಒಪ್ಪಿಗೆ ಸೂಚಿಸದೇ ಇದ್ದರೂ, ವಾಟ್ಸಾಪ್ ಸೇವೆಯನ್ನು ಮುಂದು ವರಿಸಲಾಗುವುದು ಎಂದು ವಾಟ್ಸಾಪ್ ಈಗ ಹೇಳಿದೆ.

ತನ್ನ ನಿಯಮಗಳನ್ನು ಒಪ್ಪದೇ ಇರುವವರ ಖಾತೆಯು ಮೇ 15ರ ನಂತರ ನಿಧಾನವಾಗಿ ಸ್ಥಗಿತಗೊಳ್ಳಬಹುದು ಎಂದು ವಾಟ್ಸಾಪ್ ಸೂಚಿಸಿತ್ತು. ಆದರೆ, ಸದ್ಯದ ಸುದ್ದಿ ಎಂದರೆ, ಈ ಕೂಡಲೆ ಅಂತಹ ಕಾರ್ಯಕ್ಕೆ ತಾನು ಕೈ ಹಾಕುವುದಿಲ್ಲ ಎಂದು ಫೇಸ್‌ಬುಕ್ ಒಡೆತನದ ವಾಟ್ಸಾಪ್ ಹೇಳಿಕೆ ನೀಡಿದೆ.

ಹಾಗಿದ್ದರೂ, ತನ್ನ ಹೊಸ ನಿಯಮಗಳನ್ನು ಒಪ್ಪಿಕೊಳ್ಳುವಂತೆ ಬಳಕೆದಾರರಿಗೆ ನೆನಪೋಲೆಗಳನ್ನು ವಾಟ್ಸಾಪ್ ಕಳಿಸುತ್ತಲೇ ಇರುತ್ತದಂತೆ! ಪ್ರತಿಬಾರಿ ಅಲ್ಲದಿದ್ದರೂ, ಆಗಾಗ ಪಾಪ್‌ಅಪ್ ಆಗುವ ಷರತ್ತು ಸ್ವೀಕಾರದ ಮನವಿಯು, ಕೆಲವು ಬಳಕೆದಾರರಿ ಗಾದರೂ ಕಿರಿಕಿರಿ ಎನಿಸಬಹುದು. ಈಗ ವಾಟ್ಸಾಪ್ ಸಂಯಮ ತೋರಿದೆ. ಷರತ್ತುಗಳಿಗೆ ಒಪ್ಪಿಗೆ ನೀಡದಿದ್ದರೂ, ಸೇವೆ ಮುಂದು ವರಿಸುವುದಾಗಿ ಹೇಳಿದೆ.