Wednesday, 27th November 2024

ಯೋಗ ಗುರು ಬಾಬಾ ರಾಮದೇವ್’ಗೆ ಸಮನ್ಸ್

ನವದೆಹಲಿ: ಯೋಗ ಗುರು ಬಾಬಾ ರಾಮದೇವ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ಜಾರಿ ಮಾಡಿದೆ. ದೆಹಲಿ ವೈದ್ಯಕೀಯ ಸಂಘ(ಡಿಎಂಎ) ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಬೆಳವಣಿಗೆ ನಡೆದಿದೆ.

ದೇಶದಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ಮಧ್ಯೆ ಪತಂಜಲಿಯ ಕೊರೋನಿಲ್ ಟ್ಯಾಬ್ಲೆಟ್ ಬಗ್ಗೆ ರಾಮ್ ದೇವ್ ಅವರು ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಜನರಿಗೆ ಹಬ್ಬಿಸುತ್ತಿದ್ದು, ಅದಕ್ಕೆ ತಡೆ ನೀಡಬೇಕೆಂದು ಕೋರಿ ದೆಹಲಿ ವೈದ್ಯಕೀಯ ಸಂಘ ಹೈಕೋರ್ಟ್ ನಲ್ಲಿ ದಾವೆ ಹೂಡಿತ್ತು.

ಸಾರ್ವಜನಿಕವಾಗಿ ಯೋಗ ಗುರು ರಾಮದೇವ್ ಅವರು ನೀಡುತ್ತಿರುವ ಹೇಳಿಕೆಗಳು ವಿಜ್ಞಾನ ಮತ್ತು ವೈದ್ಯಲೋಕದ ಮೇಲಿರುವ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ನಾಗರಿಕ ಹಕ್ಕುಗಳ ರಕ್ಷಣೆ ಕೋರಿ ಈ ಅರ್ಜಿಯನ್ನು ಹೂಡ ಲಾಗಿದೆ ಎಂದು ಸಂಘದ ಪರ ವಕೀಲ ಅಡ್ವೊಕೇಟ್ ರಾಜೀವ್ ದತ್ತ ಹೇಳಿದರು.

ಅಲೋಪಥಿ ಔಷಧಿ ಬಗ್ಗೆ ಈ ಮೊದಲು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಯೋಗ ಗುರು ಬಾಬಾ ರಾಮದೇವ್ ವಿರುದ್ಧ ದೂರು ದಾಖಲಿಸಿತ್ತು.

ಅಲೋಪಥಿ ಔಷಧಿಯಿಂದ ಕರೋನಾ ಹೋಗುವುದಿಲ್ಲ, ಬದಲಿಗೆ ಪತಂಜಲಿಯ ಕೊರೊನಿಲ್ ಮೂಲಕ ಗುಣಪಡಿಸಬಹುದು ಎಂದು ಜನರಿಗೆ ಹೇಳಿ ಅವರನ್ನು ನಂಬುವಂತೆ ಮಾಡಿ ಈ ಸಂಕಷ್ಟ ಸಮಯದಲ್ಲಿ ಲಾಭ ಮಾಡಿಕೊಳ್ಳಲು ನೋಡು ತ್ತಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.