Thursday, 19th September 2024

ಅಮೆರಿಕ – ಚೀನಾ ಮುನಿಸು ಭಾರತದತ್ತ ಎಲ್ಲರ ಚಿತ್ತ

ಕೆಲವೇ ವರ್ಷಗಳ ಹಿಂದೆ ಭಾರತದ ಶತ್ರುರಾಷ್ಟ್ರ ಎಂದೊಡನೆ ಪಾಕಿಸ್ತಾನ ಎಂಬ ಭಾವನೆ ವ್ಯಕ್ತವಾಗುತಿತ್ತು. ಆದರೆ ಗಡಿ ವಿವಾದದ ಮೂಲಕ ಚೀನಾ ಹಂತ ಹಂತವಾಗಿ ಭಾರತದ ವಿರುದ್ಧದ ನಡೆ ಪ್ರದರ್ಶಿಸುತ್ತಿದೆ.

ಈ ಪರಿಸ್ಥಿತಿಯನ್ನು ಗಮನಿಸುತ್ತಿರುವ ಕೆಲವು ರಾಷ್ಟ್ರಗಳು ಭಾರತವನ್ನು ಚೀನಾದ ವಿರೋಧಿ ರಾಷ್ಟ್ರವನ್ನಾಗಿ ಕಾಣುತ್ತಿವೆ. ಈ ವೇಳೆ ರಷ್ಯಾದ ಅಧ್ಯಕ್ಷ ವ್ಲಾದಿಯರ್ ಪುಟಿನ್ ಭಾರತಕ್ಕೆ ನೀಡಿರುವ ಹೇಳಿಕೆಯೊಂದು ಮಹತ್ವದ್ದಾಗಿದೆ. ಭಾರತ-ಚೀನಾ ನಡುವಿನ ಬಿಕ್ಕಟ್ಟು ಶಮನಕ್ಕೆ ಯಾವುದೇ ರಾಷ್ಟ್ರದ ಮಧ್ಯಸ್ಥಿಕೆ ಅಗತ್ಯವಿಲ್ಲ. ಎರಡು ದೇಶಗಳ ಪ್ರಧಾನಿಗಳು ಸಮಸ್ಯೆಗಳನ್ನು ಬಗೆಹರಿಸಿ
ಕೊಳ್ಳುವಷ್ಟು ಸಮರ್ಥರಿದ್ದಾರೆ ಎಂದು. ಅಂದರೆ ಇದೀಗ ಜಾಗತಿಕವಾಗಿ ಚೀನಾದ ವಿರೋಧ ರಾಷ್ಟ್ರವಾಗಿಯೇ ಭಾರತವನ್ನು ಬಿಂಬಿಸಲಾಗುತ್ತಿದೆ. ಆದರೆ ಇದರಿಂದ ಆಗಬಹುದಾದ ಲಾಭಗಳೇನು ಎಂಬುದನ್ನು ಅವಲೋಕಿಸುವುದಾರೆ, ಭಾರತಕ್ಕೆ
ಒಂದಷ್ಟು ಲಾಭವಾಗುವ ಸಾಧ್ಯತೆ ಇದೆ.

ಕರೋನಾ ಸಂದರ್ಭದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಬಾಂಧವ್ಯ ಹದಗೆಟ್ಟಿರುವುದರಿಂದ ಅಮೆರಿಕದ ಆಸಕ್ತಿ ಭಾರತದ ಕಡೆಗೆ ಕೇಂದ್ರೀಕರಿಸುತ್ತಿದೆ. ಮುಂದಿನ ದಿನಗಳಲ್ಲಿ ಅಮೆರಿಕವು ಚೀನಾದ ಬದಲಾಗಿ ಹೂಡಿಕೆ ಹಾಗೂ ಉತ್ಪನ್ನಗಳ ಆಮದಿಗೆ ಭಾರತವನ್ನು ಆಶ್ರಯಿಸುವ ಸಾಧ್ಯತೆಗಳು ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗುವ
ಸಾಧ್ಯತೆಯನ್ನೂ ಗಮನಿಸಬಹುದು.

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವಧಿಯಲ್ಲಿ ಚೀನಾದ ಕೆಲವು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಹಾಲಿ ಪ್ರಧಾನಿ ಜೋ ಬೈಡನ್ ಸಹ ಚೀನಾದ ಕೆಲವು ಕಂಪನಿಗಳನ್ನುಕಪ್ಪುಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಮುಂಬರುವ ಆ.2ರಿಂದ ಜಾರಿಗೊಳ್ಳಲಿದೆ. ಒಟ್ಟು 59 ಕಂಪನಿಗಳು ಕಪ್ಪುಪಟ್ಟಿ ಸೇರಲಿವೆ. ಕರೋನಾದಿಂದ ಕಂಗೆಟ್ಟಿರುವುದರ ನಡುವೆಯೂ ಭಾರತ ಇತರ ರಾಷ್ಟ್ರಗಳ ಪಾಲಿಗೆ ಸದೃಢ ರಾಷ್ಟ್ರವಾಗಿ ಗೋಚರಿಸುತ್ತಿರುವುದು ಉತ್ತಮ ಬೆಳವಣಿಗೆ.

Leave a Reply

Your email address will not be published. Required fields are marked *