Friday, 18th October 2024

ಒಟ್ಟು 25.87 ಕೋಟಿ ಕರೋನಾ ಲಸಿಕೆ ಡೋಸ್‌ ಪೂರೈಕೆ : ಕೇಂದ್ರ

#Vaccine

ನವದೆಹಲಿ: ಒಟ್ಟು 25.87 ಕೋಟಿ ಕರೋನಾ ಲಸಿಕೆ ಡೋಸ್‌ಗಳನ್ನು ಇದುವರೆಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿರುವು ದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನು 1,12,41,187 ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ. ಇನ್ನು 10,81,300 ಲಸಿಕೆ ಡೋಸ್ ಗಳು ಬರುತ್ತಿದ್ದು ಇವುಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ದಿನದಲ್ಲಿ ಸಿಗಲಿದೆ ಎಂದು ಹೇಳಿದೆ.

ಕಳೆದ 24 ಗಂಟೆಗಳಲ್ಲಿ 84,332 ಹೊಸ ಪ್ರಕರಣಗಳು ದಾಖಲಾಗಿದೆ. ಒಂದು ದಿನದಲ್ಲಿ 84,332 ಮಂದಿಗೆ ಸೋಂಕು ತಗುಲಿರು ವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 1,21,311 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 4,002 ಮಂದಿ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಫುಟ್ನಿಕ್ ವಿ ಲಸಿಕೆಗಳನ್ನು ನೀಡಲಾಗುತ್ತಿದೆ. 147 ದಿನಗಳಲ್ಲಿ 24,96,00,304 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿರುವುದಾಗಿ ತಿಳಿದುಬಂದಿದೆ.