Thursday, 26th December 2024

ಬ್ಯಾನರ್ಜಿ’ಗೆ ನೊಬೆಲ್ : ಕೆಲವರು ‘ರೆಬೆಲ್’ ಆಗಿದ್ದು ಯಾಕೆ?

ಇವರು ಮಾಡಿರುವ ಹಲವು ಸಂಶೋಧನೆ ಹಾಗೂ ಪ್ರಯೋಗಗಳ ಪರ, ವಿರೋಧಗಳ ಬಗ್ಗೆೆ ಮಾಡನಾಡಲೇ ಬೇಕಿದೆ. ಐದು ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗಾಗಿ ಮಂಡಿಸಿರುವ ಸಂಶೋಧನೆ, ವಾದಗಳನ್ನು ಒಮ್ಮೆೆಲೆ ಒಪ್ಪಲು ಸಾಧ್ಯವೇ?

ಜಗತ್ತಿನಲ್ಲಿ ಯಾರು ಏನೇ ಸಾಧಿಸಿದರೂ, ಈ ಸಾಧನೆಯ ಉತ್ತುಂಗದ ಮಾಪಕವನ್ನು ಅಳೆಯಲು ಪ್ರಶಸ್ತಿಯೊಂದು ಬೇಕೆ ಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧಿಸಿದವರಿಗೆ ಆಯಾ ಕ್ಷೇತ್ರದ ಅನುಗುಣವಾಗಿ ಪ್ರಶಸ್ತಿಗಳಿವೆ. ಇದೇ ರೀತಿ ಯಾವ ಕ್ಷೇತ್ರದಲ್ಲಾಾದರೂ ಸಾಧನೆ ಮಾಡಿ ನೀಡುವ ಜಗತ್ತಿನ ಅತ್ಯಂತ ಪ್ರಮುಖವಾದ ಪ್ರಶಸ್ತಿಯೆಂದರೆ ‘ನೊಬೆಲ್’ ಪ್ರಶಸ್ತಿ. ಯಾವ ಕ್ಷೇತ್ರದಲ್ಲಾಾರೂ ಗುರಿ ಸಾಧಿಸಿದ ವ್ಯಕ್ತಿಿಗಳನ್ನು ಗುರುತಿಸಿ ಜಗತ್ತಿನಾದ್ಯಂತ ಇರುವ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಭಾರತದ ಸಾಧಕರೂ ಕಮ್ಮಿಯಿಲ್ಲ. ರವೀಂದ್ರನಾಥ ಠಾಗೂರ್, ಸಿ.ವಿ.ರಾಮನ್, ಮದರ್ ತೆರೇಸಾ, ಅಮರ್ತ್ಯಸೇನ್ ತರಹದ ಘಟಾನುಘಟಿ ಸಾಧಕರುಗಳಿಗೆ ಈ ಪ್ರಶಸ್ತಿಯು ಲಭಿಸಿದೆ.

ಇವರ ಪಟ್ಟಿಗೆ ತೀರಾ ಇತ್ತೀಚೆಗೆ ಸೇರಿದ ಹೆಸರು ಬೆಂಗಾಳಿ ಮೂಲದ ಅಭಿಜಿತ್ ಬ್ಯಾನರ್ಜಿ. ಅಭಿಜಿತ್ ಕೋಲ್ಕತಾನಲ್ಲಿ ಹುಟ್ಟಿ ಬೆಳೆದು, ಅಮೆರಿಕದಲ್ಲಿ ನೆಲೆಸಿದ್ದರೂ ಅಲ್ಲಿ ತನ್ನ ಹೆಂಡತಿ ಹಾಗೂ ಸ್ನೇಹಿತನೊಂದಿಗೆ ಜತೆಗೂಡಿ ‘ಅಭಿವೃದ್ಧಿಿಯ ಆರ್ಥಿಕಥೆ ಹಾಗೂ ಬಡತನ ನಿರ್ಮೂಲನ’ ವಿಷಯದಲ್ಲಿ ಹಲವಾರು ವರ್ಷಗಳಿಂದ ಮಾಡಿದ ಪ್ರಯೋಗಗಳನ್ನು ಗುರುತಿಸಿ ‘ನೊಬೆಲ್’ ಪ್ರಶಸ್ತಿಿಯನ್ನು ನೀಡಿದರು. ಈ ಪ್ರಶಸ್ತಿಿಯು ಅಷ್ಟು ಸುಲಭವಾಗಿ ಯಾರಿಗೂ ದೊರೆಯುವುದಿಲ್ಲ. ಇದರ ಹಿಂದೆ ಹಲವಾರು ವರ್ಷಗಳ ಪರಿಶ್ರಮವಿದ್ದು, ಹಲವು ಸಂಶೋಧನೆಗಳು ಇರುತ್ತವೆ. ಹೀಗೆ ಹತ್ತು ಹಲವಾರು ಸಂಶೋಧನೆಗಳ ಬಳಿಕ ಅಭಿಜಿತ್ ಜಗತ್ತಿಿನ ಅತ್ಯುನ್ನತ ಪ್ರಶಸ್ತಿಿಗೆ ಭಾಜನರಾದರು. ಅಭಿಜಿತ್ ಹಾಗೂ ಅವರ ತಂಡದವರ ಈ ಸಂಶೋಧನೆಯನ್ನು ಕೇವಲ ಅರ್ಧ ಗಂಟೆಯಲ್ಲಿ ಹೇಳಲಾಗುವುದಿಲ್ಲ. ಅದರ ಆಳವನ್ನು ಸಂಪೂರ್ಣವಾಗಿ ತಿಳಿದರಷ್ಟೇ ಪೂರ್ಣ ವಿಷಯವು ಅರ್ಥವಾಗುವುದು.

ಅಭಿಜಿತ್ ಬ್ಯಾಾನರ್ಜಿ, ಎಸ್ತರ್ ಡಪ್ಲೋೋ ಹಾಗೂ ಮೈಕಲ್ ಕ್ರೇಮರ್, ಮೂರು ಆರ್ಥಿಕ ತಜ್ಞರು ಬಡತನ ನಿರ್ಮೂಲನೆಯ ವಿಚಾರದಲ್ಲಿ ಜಗತ್ತಿಿನಾದ್ಯಂತ ಹಲವಾರು ಪ್ರಯೋಗಗಳನ್ನು ಮಾಡಿ, ಮೂರು ಜನ ನೊಬೆಲ್ ಪ್ರಶಸ್ತಿಿಯನ್ನು ಹಂಚಿಕೊಂಡಿದ್ದಾಾರೆ. ಅಭಿಜಿತ್ ಬ್ಯಾಾನರ್ಜಿ ಹಾಗೂ ಎಸ್ತರ್ ಡುಪ್ಲೋೋ ದಂಪತಿಗಳಾಗಿರುವುದು ಮತ್ತೊೊಂದು ಖುಷಿಯಾದ ಸಂಗತಿ. ಈ ಮೂರೂ ಜನರು 5 ವಿಭಾಗಗಗಳಲ್ಲಿ ತಮ್ಮ ಸಂಶೋಧನೆಗಳನ್ನು ಮಾಡಿದ್ದಾಾರೆ. ಮೊದಲನೆಯದಾಗಿ ವಿದ್ಯಾಾಭ್ಯಾಾಸ, ಎರಡನೆಯದಾಗಿ ಆರೋಗ್ಯ, ಮೂರನೆಯದಾಗಿ ನಡವಳಿಕೆಗಳು, ನಾಲ್ಕನೆಯದಾಗಿ ಲಿಂಗಭೇದ ಹಾಗೂ ಕೊನೆಯದಾಗಿ ರಾಜಕೀಯ ಹಾಗೂ ಸಾಲಗಳು.

ಈ ಐದು ವಿಭಾಗಗಳನ್ನು ಜಗತ್ತಿಿನಾದ್ಯಂತ ಹಲವಾರು ಸಂಶೋಧನೆಗಳನ್ನು ಮಾಡಿ ಈ ವಿಷಯಗಳಲ್ಲಿನ ಸಮಸ್ಯೆೆಗಳು, ಆ ಸಮಸ್ಯೆೆಗಳನ್ನು ಬಗೆಹರಿಸಲು ಅನುಸರಿಸಿದ ಕೆಲವು ಪ್ರಯೋಗಗಳು, ಇದರಲ್ಲಿ ಯಶಸ್ವಿಿಯಾದ ಪ್ರಯೋಗಗಳು, ವಿಶಾಲವಾದ ಪ್ರಯೋಗಗಳು ಹೀಗೆ ಹಲವಾರು ಪ್ರಯೋಗಗಳನ್ನು ಯಶಸ್ವಿಿಯಾಗಿ ನಡೆಸಿದ್ದಾಾರೆ.

ಹಾಗಂತ ಈ ಪ್ರಯೋಗಗಳನ್ನು ಕೇವಲ ಇವರು ಮಾತ್ರ ಮಾಡಿದ್ದಾಾರೆಂದು ಹೇಳಲಾಗುವುದಿಲ್ಲ. ಇವರಂತೆ ಹಲವಾರು ಮಂದಿ ಮಾಡಿರಬಹುದು. ಆದರೆ, ಮಾಡಿರುವುದನ್ನು ಹೇಳಿಕೊಂಡವರಿಗೆ ಮಾತ್ರ ‘ನೊಬೆಲ್’ ಪ್ರಶಸ್ತಿಿದಕ್ಕುವುದೆಂಬುದು ನಿಜ ಸಂಗತಿ. ಅಭಿಜಿತ್ ಬ್ಯಾಾನರ್ಜಿಯವರಿಗೆ ನೊಬೆಲ್ ಬಂದಾಕ್ಷಣ ಖುಷಿ ಪಟ್ಟವರಿಗಿಂತಲೂ ಟೀಕಿಸಿದ ಮಂದಿಯೇ ಹೆಚ್ಚಾಾಗಿದ್ದರು. ಅದಕ್ಕೂ ಬಲವಾದ ಕಾರಣವಿದೆ. ಈ ವ್ಯಕ್ತಿಿಯು ದೆಹಲಿಯಲ್ಲಿ ನಡೆದ ‘ನಿರ್ಭಯ’ ಅತ್ಯಚಾರ ಪ್ರಕರಣದ ಆರೋಪಿಗಳ ವಿಚಾರದಲ್ಲಿ ಕಾಮದಾಸೆಯಿಂದ ಆ ಹುಡುಗರು ಹೀಗೆ ಮಾಡಿದ್ದರು ಎಂಬ ಅಸಹ್ಯಕರವಾದ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯು ಬರೀ ವಿವಾದಕ್ಕೆೆ ಕಾರಣವಾಗಿತ್ತು.

ಹೆಣ್ಣಿಿನ ಅತ್ಯಾಾಚಾರದ ವಿಚಾರದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದವನಿಗೆ ‘ನೊಬೆಲ್’ ಕೊಟ್ಟಿಿದ್ದು ತಪ್ಪಲ್ಲವೇ? ಇಷ್ಟೊೊಂದು ಗಂಭೀರವಾದ ಪ್ರಕರಣದ ಆಳವನ್ನೇ ಅರಿಯದ ಈ ವ್ಯಕ್ತಿಿಯು, ಬಡತನ ನಿರ್ಮೂಲನೆಯ ವಿಚಾರದಲ್ಲಿ ‘ನೊಬೆಲ್’ ಪ್ರಶಸ್ತಿಿ ಪಡೆಯಲು ಹೇಗೆ? ಎಂಬುದು ಹಲವರ ವಾದ. ಇದರ ಜತೆಗೆ 2019ರ ಕೇಂದ್ರ ಚುನಾವಣಾ ಪ್ರಚಾರ ಸಮಯದಲ್ಲಿ ಕಾಂಗ್ರೆೆಸ್ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆೆ ತಾವು ಬಂದರೆ ಪ್ರತಿ ಒಂದು ಬಡ ಕುಟುಂಬಕ್ಕೆೆ ವರ್ಷದಲ್ಲಿ 72,000 ರುಪಾಯಿಯನ್ನು ನೀಡುವುದಾಗಿ ಹೇಳಿಕೆಯನ್ನು ನೀಡಿದ್ದರು. ಇದರ ವಿರುದ್ಧ ಹಾಗೂ ಪರ ಹಲವಾರು ಚರ್ಚೆಗಳಾಗಿದ್ದವು. ಈ ವಿಚಾರದಲ್ಲಿ ‘ಅಭಿಜಿತ್ ಬ್ಯಾಾನರ್ಜಿ’ ಇದರ ಪರವಾಗಿ ಮಾತನಾಡಿ ಸುದ್ದಿ ಮಾಡಿದ್ದರು.

ಬಡತನ ನಿರ್ಮೂಲನೆ ಮಾಡಲಿ. ಭಾರತದಂತಹ ರಾಷ್ಟ್ರದಲ್ಲಿ ಹಲವಾರು ಸಾಮಾಜಿಕ ಕಲ್ಯಾಾಣ ಯೋಜನೆಗಳನ್ನು ದಶಕಗಳಿಂದ ಮಾಡುತ್ತಲೇ ಬಂದಿದ್ದೇವೆ. ಇಷ್ಟಾಾದರೂ ಇಂದಿಗೂ ‘ಗರೀಬಿ ಹಠಾವೋ’ ಎಂಬ ಕೂಗು ಕೇಳಿ ಬರುತ್ತಿಿದೆ. ನಮ್ಮ ರಾಷ್ಟ್ರದಲ್ಲಿ ಈ ರೀತಿಯ ಯೋಜನೆಗಳಿಂದಾಗಿ ಒಂದು ಸಮಸ್ಯೆೆ ಬಗೆಹರಿದು ಮತ್ತೊೊಂದು ಸಮಸ್ಯೆೆಯು ಹುಟ್ಟಿಿಕೊಳ್ಳುತ್ತದೆ. ಈ ನಿಟ್ಟಿಿನಲ್ಲಿ ಕಾಂಗ್ರೆೆಸ್ಸಿಿನ ಈ ಯೋಜನೆಯನ್ನು ಜಾರಿಗೆ ತಂದರೆ ಕೆಲಸ ಮಾಡದ ಸೋಂಬೇರಿಗಳು ಹೆಚ್ಚುತ್ತಿಿತ್ತು. ಜತೆಗೆ ಸರಕಾರದ ಬೊಕ್ಕಸಕ್ಕೆೆ ಸುಮಾರು 12ಲಕ್ಷ ಕೋಟಿಯಷ್ಟು ನಷ್ಟವಾಗುತ್ತಿಿತ್ತೆೆಂದು ಅಂದಾಜಿಸಲಾಗಿತ್ತು. ಇನ್ನು ಭ್ರಷ್ಟಾಾಚಾರದ ಬಗ್ಗೆೆ ಹೇಳುವಂತಿಲ್ಲ ಬಿಡಿ. ಹೀಗೆ ಹಲವರು ರೀತಿಯಲ್ಲಿ ವಿರೋಧವು ವ್ಯಕ್ತವಾಗಿತ್ತು.

ಮತ ಬ್ಯಾಾಂಕಿನ ರಾಜಕಾರಣ ಮಾಡಿದ ಕಾಂಗ್ರೆೆಸ್, ಅಭಿಜಿತ್ ಬ್ಯಾಾನರ್ಜಿಯಂತಹ ಆರ್ಥಿಕ ತಜ್ಞನ ಹೇಳಿಕೆಯನ್ನಿಿಟ್ಟಕೊಂಡು ಜನರ ಮನಸ್ಸನ್ನು ಬದಲಿಸಲು ಮುಂದಾಗಿತ್ತು. ಆದರೂ ಯಾಕೋ ಜನರು ಈ ಯೋಜನೆಗೆ ಸೊಪ್ಪುು ಹಾಕಲಿಲ್ಲ. ಭಾರತೀಯರಿಗೆ ದುಡಿಯುವ ಕೆಲಸಗಳು ಬೇಕಿತ್ತೇ ಹೊರತು, ಉಚಿತವಾಗಿ ಬಂದ ಹಣವಲ್ಲ. ಈ ರೀತಿಯ ಹಲವು ಯೋಜನೆಗಳನ್ನು ಈಗಾಗಲೇ ಭಾರತೀಯರು ನೋಡಿ ಆಗಿತ್ತು. ಇದು ಈತನ ಒಂದು ವಿಚಾರಧಾರೆಯ ಪರ ವಿರೋಧವಾದರೆ ಇವರು ಮಾಡಿರುವ ಹಲವು ಸಂಶೋಧನೆ ಹಾಗೂ ಪ್ರಯೋಗಗಳ ಪರ, ವಿರೋಧಗಳ ಬಗ್ಗೆೆ ಮಾಡನಾಡಲೇ ಬೇಕಿದೆ. ಇವರು ಐದು ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗಾಗಿ ಮಂಡಿಸಿರುವ ಸಂಶೋಧನೆ ಹಾಗೂ ವಾದಗಳನ್ನು ಒಮ್ಮೆೆಲೆ ಒಪ್ಪಲು ಸಾಧ್ಯವಿಲ್ಲ. ಜತೆಗೆ ಒಂದೇ ಅಂಕಣದಲ್ಲಿಯೂ ಬರೆಯಲೂ ಸಾಧ್ಯವಿಲ್ಲ. ಹಾಗಾಗಿ ಒಂದು ಸರಣಿ ಲೇಖನಗಳನ್ನೇ ಬರೆದು ತಿಳಿಸಬೇಕಿದೆ. ಮೊದಲನೆಯದಾಗಿ ಇವರು ಮಂಡಿಸಿರುವ ‘ವಿದ್ಯಾಾಭ್ಯಾಾಸದ’ ಸಂಶೋಧನೆ ಹಾಗೂ ಪ್ರಯೋಗಗಳ ಬಗ್ಗೆೆ ಒಂದಷ್ಟು ಪರ ವಿರೋಧದ ಚರ್ಚೆಯಾಗಬೇಕಿದೆ.

ಮೊಟ್ಟ ಮೊದಲ ಬಾರಿಗೆ ಈ ಜೋಡಿಯು 1996ರಲ್ಲಿ ಪಶ್ಚಿಿಮ ಕೀನ್ಯಾಾದಲ್ಲಿ ಎರಡು ಪ್ರಯೋಗಗಳನ್ನು ಮಾಡಿದ್ದರು. ಅಲ್ಲಿನ ಶಾಲೆಗಳಲ್ಲಿನ ಮಕ್ಕಳ ವಿದ್ಯಾಾಭ್ಯಾಾಸದ ಗುಣಮಟ್ಟವನ್ನು ಹೆಚ್ಚಿಿಸಲು ಸರಕಾರವು ನೀಡಿರುವ ಪಠ್ಯಪುಸ್ತಕಗಳ ಜತೆಗೆ ಕೆಲವೊಂದು ಹೆಚ್ಚಿಿನ ಪುಸ್ತಕಗಳನ್ನು ನೀಡಿದರು. ಪುಸ್ತಕಗಳ ಜತೆಗೆ ಕೆಲವೊಂದು ‘ಚಿತ್ರಸಹಿತ ಚಾರ್ಟ್’ಗಳನ್ನು ನೀಡಿದ್ದರು. ಆದರೆ, ಈ ಪ್ರಯೋಗಗಳಲ್ಲಿ ಹೆಚ್ಚಿಿನ ಪುಸ್ತಕಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಕಲಿಕೆಯಲ್ಲಿ ಅಂತಹ ಆಮೂಲಾಗ್ರ ಬದಲಾವಣೆಯೇನು ಆಗಲಿಲ್ಲ. ಆದರೆ, ಈ ಹಿಂದೆಯೂ ಬುದ್ಧಿಿವಂತರಾಗಿದ್ದ ವಿದ್ಯಾಾರ್ಥಿಗಳ ಅಂಕಗಳು ಮಾತ್ರ ಹೆಚ್ಚಳವಾಗಿದ್ದವು. ಹಾಗಾಗಿ ಈ ಪ್ರಯೋಗವು ಯಶಸ್ವಿಿಯಾಗಲಿಲ್ಲ. ‘ಚಿತ್ರಸಹಿತ ಚಾರ್ಟ್’ಗಳನ್ನು ನೀಡಿದ್ದರಿಂದಲೂ ಯಾವುದೇ ಪರಿಣಾಮವಾಗಲಿಲ್ಲ. ಇದು ಇಷ್ಟೇನ ಇವರ ಸಂಶೋಧನೆ, ಇದಕ್ಕಾಾಗಿ ಇವರಿಗೆ ನೊಬೆಲ್ ಪ್ರಶಸ್ತಿಿಯನ್ನು ನೀಡಿದ್ದರಾ ಎನ್ನಬಹುದು. ಹೌದು ಇದು ನಿಜವೇ, ಈ ಪ್ರಯೋಗಗಳು ಸಹ ಇವರ ಸಂಶೋಧನೆಯ ಒಂದು ಭಾಗ.

ಹಾಗಾದರೆ ನಮ್ಮ ಶಾಲೆಗಳಲ್ಲಿ ಇದೇ 1990ರ ದಶಕಗಳಲ್ಲಿ ಈ ಪ್ರಯೋಗಗಳನ್ನು ಮಾಡಿರಲಿಲ್ಲವೇ? ಖಂಡಿತವಾಗಿಯೂ ಮಾಡಿದ್ದರು. ರಾಜಕೀಯ ನಾಯಕರುಗಳು, ಅಧಿಕಾರಿಗಳೂ ಈ ರೀತಿಯ ಹಲವು ಯೋಜನೆಗಳನ್ನು ಅನುಷ್ಠಾಾನ ಗೊಳಿಸಿದ್ದರೆಂಬುದು ನಮಗೆ ತಿಳಿದಿಲ್ಲವೇ ಸ್ವಾಾಮಿ? ಆದರೆ, ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಅವರು ಮಾಡಿದ ಪ್ರಯೋಗ ಕೀನ್ಯಾಾ ದೇಶದಲ್ಲಿ, ಆ ರಾಷ್ಟ್ರವು 1996ರಲ್ಲಿ ಹೇಗಿತ್ತೆೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಬಿಡಿ. ಯಾವಾಗ ಈ ಎರಡೂ ಪ್ರಯೋಗಗಳು ಪರಿಣಾಮಕಾರಿಯಾಗಿ ಅನುಷ್ಠಾಾನವಾಗಲಿಲ್ಲವೋ, ವಿದ್ಯಾಾರ್ಥಿಗಳ ವಿದ್ಯಾಾಭ್ಯಾಾಸದ ಗುಣಮಟ್ಟವನ್ನು ಹೆಚ್ಚಿಿಸಲು, ಶಿಕ್ಷಕರಿಗೆ ಸಂಬಳದ ಜತೆಗೆ ಪ್ರೋೋತ್ಸಾಾಹ ಧನ ನೀಡುವ ಪ್ರಯೋಗವನ್ನು ಮಾಡಿದರು.

ಇದರಿಂದ ಶಿಕ್ಷಕರು ವಿದ್ಯಾಾರ್ಥಿಗಳಿಗೆ ಪಾಠ ಮಾಡುತ್ತಿಿದ್ದ ಕ್ರಮವು ಬದಲಾಗಿ, ವಿದ್ಯಾಾರ್ಥಿಗಳನ್ನು ಪರೀಕ್ಷೆೆಗಳಲ್ಲಿ ಹಲವು ರೀತಿಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸುವುದರಲ್ಲಿ ಯಶಸ್ವಿಿಯಾದರು. ಗುಣಮಟ್ಟದ ಶಿಕ್ಷಣದ ಬದಲು ಅಂಕಗಳಿಕೆಯನ್ನಷ್ಟೇ ಮನಗಂಡ ಶಿಕ್ಷಕರು ಅಂಕಗಳಿಕೆಯೊಡನೆ ಮಾತ್ರ ತಮ್ಮನ್ನು ತಾವು ಕೇಂದ್ರಿಿಕರಿಸಿದರು. ಈಗ ಜಗತ್ತಿಿನಾದ್ಯಂತ ಸೃಷ್ಟಿಿಯಾಗಿರುವ ನಿರುದ್ಯೋೋಗ ಸಮಸ್ಯೆೆಯ ಮೂಲವೇ ಇದೆಂದರೆ ತಪ್ಪಿಿಲ್ಲ. ಕೇವಲ ಅಂಕಗಳಿಕೆಯನ್ನು ಮಾನದಂಡವನ್ನಾಾಗಿಸಿ ಕೊಂಡಿರುವ ಶಿಕ್ಷಕರು, ಪರೀಕ್ಷೆೆಯಲ್ಲಿ ಶಾಲೆಗಳಿಗೆ ಉತ್ತಮ ಫಲಿತಾಂಶ ನೀಡುವ ಸಲುವಾಗಿ ಕೇವಲ ಪರೀಕ್ಷೆೆಯ ದೃಷ್ಟಿಿಯಿಂದ ಮಕ್ಕಳಿಗೆ ಪಾಠಮಾಡಿ, ವಿದ್ಯಾಾರ್ಥಿಗಳ ಆಳವನ್ನು ಹೇಳಿಕೊಡುತ್ತಿಿಲ್ಲ. ಇದರಿಂದ ಅತೀ ಹೆಚ್ಚು ಅಂಕ ಪಡೆದ ವಿದ್ಯಾಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿಯ ರೀತಿ ವರ್ತಿಸುತ್ತಾಾರೆ.

ಕಂಠ ಪಾಠ ಮಾಡಿ ಅಂಕತೆಗೆದ ವಿದ್ಯಾಾರ್ಥಿಗಳ ತಲೆಯಲ್ಲಿ ಕೆಲಸ ಮಾಡಲು ಏನು ತಾನೇ ಇದ್ದೀತು? ಹಾಗಾಗಿಯೇ ಅವರಿಗೆ ಕೆಲಸ ಸಿಗುತ್ತಿಿಲ್ಲ. ಯೋಗ್ಯತೆಗೆ ಅನುಸಾರವಾಗಿ ಅಂಕಗಳನ್ನು ನೀಡಿ ಪಾಸು ಮಾಡಿದರೆ ಖಂಡಿತವಾಗಿಯೂ ಅವರಿಗೆ ಕೆಲಸ ಸಿಗುತ್ತದೆ. ಈ ಸತ್ಯವನ್ನು ಇವರ ಸಂಶೋಧನೆಯಲ್ಲಿ ಎಲ್ಲಿಯೂ ಹೇಳಿಲ್ಲ. ಇವರ ಈ ಪ್ರಯೋಗಗಳು ಕೀನ್ಯಾಾ ಅಷ್ಟೇ ಅಲ್ಲ, ಭಾರತ ದೇಶದಲ್ಲಿಯೂ ನಡೆದಿದೆ. ಕೀನ್ಯಾಾದಲ್ಲಿ ಇವರ ಪ್ರಯೋಗಗಳು ಯಶಸ್ಸು ಕಾಣದಿದ್ದಾಾಗ, 2007ರಲ್ಲಿ ಭಾರತದಲ್ಲಿ ಬೇರೆ ಪ್ರಯೋಗವನ್ನುಇವರು ನಡೆಸುತ್ತಾಾರೆ. ಗುಜರಾತಿನ ವಡೋದರಾದಲ್ಲಿ ಹಲವು ಪ್ರಯೋಗಗಳನ್ನು ನಡೆಸಿ, ಮಕ್ಕಳನ್ನು ಶಾಲೆಗೆ ಕರೆತರಲು ಹಲವಾರು ರೀತಿಯ ಯೋಜನೆಗಳನ್ನು ಸರಕಾರಗಳು ರೂಪಿಸಬೇಕೆಂದು ವಾದಿಸುತ್ತಾಾರೆ. ಇವರ ಪ್ರಕಾರ ಶಾಲೆಯ ಗುಣಮಟ್ಟವನ್ನು ಹೆಚ್ಚಿಿಸಿದರೆ, ಶಾಲೆಗೆ ಹೆಚ್ಚಿಿನ ಮಕ್ಕಳ ಬರುತ್ತಾಾರೆಂದು ಹೇಳುತ್ತಾಾರೆ.

ಒಂದು ವಿಚಾರವನ್ನು ಇಲ್ಲಿ ಹೇಳಲೇಬೇಕು, 1999ರಿಂದ 2004ರ ಮಧ್ಯೆೆ ಅಟಲ್‌ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಿಯಾಗಿದ್ದಾಾಗ ‘ಸರ್ವ ಶಿಕ್ಷಣ ಅಭಿಯಾನ’ ಜಾರಿಗೆ ತಂದಿದ್ದರು. ಈ ಯೋಜನೆಯ ಫಲವಾಗಿ ಭಾರತದಲ್ಲಿ ಹಳ್ಳಿಿಹಳ್ಳಿಿಗಳಲ್ಲಿ ಗುಣಮಟ್ಟದ ಶಾಲೆಗಳನ್ನು ಜಾರಿಗೆ ತಂದರು. ನಂತರ ದಿವಾಸಗಳಲ್ಲಿ ಅದರ ಗುಣಮಟ್ಟವು ಕುಸಿದಿರುವುದರ ಬಗ್ಗೆೆ ಎಲ್ಲರಿಗೂ ತಿಳಿದಿದೆ. ಶಾಲೆಗಳಲ್ಲಿನ ಗುಣಮಟ್ಟದ ಬಗ್ಗೆೆ ಹಾಗೂ ಮಕ್ಕಳನ್ನು ಶಾಲೆಗೆ ಕರೆ ತರುವ ಬಗ್ಗೆೆ ಹಲವಾರು ರೀತಿಯ ಕ್ರಮಗಳನ್ನು 2007ರ ಹೊತ್ತೆೆಗೆ ಸರಕಾರಗಳು ಹಾಗೂ ಅಧಿಕಾರಿಗಳು ಕೈಗೊಂಡಿದ್ದರು. ಬಿಸಿಯೂಟದ ಯೋಜನೆಗಳು, ಉಚಿತ ಸಮವಸ್ತ್ರಗಳು, ಉಚಿತ ಸೈಕಲ್ ಹೀಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಹಾಗಾದರೆ ಇವರೆಲ್ಲರಿಗೂ ಈ ಸಮಸ್ಯೆೆಗಳ ಬಗ್ಗೆೆ ಈ ಮುಂಚೆಯೇ ಗೊತ್ತಿಿತ್ತು ಎಂದಾಯಿತಲ್ಲ, ಇವರಿಗೆ ನೊಬೆಲ್ ಪ್ರಶಸ್ತಿಿ ಬೇಡವೇ?

ಇವರ ಮತ್ತೊೊಂದು ಪ್ರಯೋಗವು 2009ರಲ್ಲಿ ನಡೆಯಿತು. ಶಾಲೆಯಲ್ಲಿನ ಕೆಲವು ವಿದ್ಯಾಾರ್ಥಿಗಳು ಕಡಿಮೆ ಅಂಕಗಳನ್ನು ಪಡೆಯುತ್ತಿಿದ್ದರು. ಈ ವಿದ್ಯಾಾರ್ಥಿಗಳಿಗೆ ಅಂತಲೇ ವಿಶೇಷ ತರಗತಿಗಳನ್ನು ನಡೆಸಲಾಯಿತು. ಇನ್ನು ಕೆಲವು ವಿದ್ಯಾಾರ್ಥಿಗಳಿಗೆ ಗಣಿತದಲ್ಲಿ ಗಣಕಯಂತ್ರದ ಮೂಲಕ ಕಲಿಯಲು ಕೆಲವು ಪಾಠವನ್ನು ಹೇಳಿ ಕೊಡಲಾಯಿತು. ಈ ಎರಡು ಪ್ರಯೋಗಗಳು ಯಶಸ್ಸನ್ನು ಕಂಡವು. ಇದರಿಂದಾಗಿ ಕಡಿಮೆ ಅಂಕಗಳಿಸುತ್ತಿಿದ್ದ ವಿದ್ಯಾಾರ್ಥಿಗಳು 2 ರಿಂದ 3 ವರ್ಷಗಳಲ್ಲಿ ಅತೀ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಇದನ್ನು ಓದುತ್ತಿಿರುವ ಶಿಕ್ಷಕರಿಗೆ ಎಷ್ಟು ನಗು ಬರುತ್ತದೆಯೋ ತಿಳಿದಿಲ್ಲ. ಅಲ್ಲದೆ ನಾನು 90ರ ದಶಕದಲ್ಲಿ ಶಾಲೆಗೆ ತೆರಳಿರುವಾಗಲೇ, ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಿಸುವ ಸಲುವಾಗಿ ‘ವಿಶೇಷ ತರಗತಿಗಳನ್ನು’ ನಡೆಸುತ್ತಿಿದ್ದರು. ಈಗ 2007ರಲ್ಲಿ ಇವರೇನು ಬದನೆಕಾಯಿ ಈ ವಿಶೇಷ ತರಗತಿಗಳ ಬಗ್ಗೆೆ ಸಂಶೋಧಿಸುವುದು ಅಲ್ಲವೇ, ಆದರೂ ಇವರಿಗೆ ‘ನೊಬೆಲ್’ ಸಿಕ್ಕಿಿದೆ. ಇನ್ನು ಗಣಕಯಂತ್ರದ ಮೂಲಕ ಕಲಿಸುವ ಇವರ ಸಂಶೋಧನೆಯನ್ನು ಅಂದಿನ ಕಾಲಘಟ್ಟದಲ್ಲಿ ಪ್ರಶಂಸಿಸಿ ನೋಡಿ, ಈಗ ಅದೂ ಔಟ್‌ಡೇಟೆಡ್ ಬಿಡಿ ಮೊಬೈಲ್‌ನಲ್ಲಿಯೇ ಕಲಿಯುವ ಹಲವಾರು ವ್ಯವಸ್ಥೆೆ ಚಾಲ್ತಿಿಯಲ್ಲಿದೆ.

2005ರಲ್ಲಿ ಇದೇ ಜೋಡಿಯು ಕೀನ್ಯಾಾದಲ್ಲಿ ಮತ್ತೊೊಂದು ಪ್ರಯೋಗವನ್ನು ಮಾಡುತ್ತದೆ. ಕೀನ್ಯಾಾದಲ್ಲಿ ಉಚಿತ ಪ್ರಾಾಥಮಿಕ ಶಿಕ್ಷಣವನ್ನು ಸರಕಾರವು ಜಾರಿಗೊಳಿಸಿದ ನಂತರ, ವಿದ್ಯಾಾರ್ಥಿಗಳು ಶಾಲೆಗಳಿಗೆ ಹೆಚ್ಚಾಾಗಿ ಬಂದರು. ಹಲವಾರು ಎನ್‌ಜಿಒಗಳು ಮುಂದೆ ಬಂದು ಲಕ್ಷಾಾಂತರ ರುಪಾಯಿಯ ಸಹಾಯವನ್ನು ಮಾಡಿದರು. ಈ ಧನ ಸಹಾಯದಿಂದ ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಿಸಿ ತರಗತಿಗಳನ್ನು ವಿಂಗಡಿಸಿ, ಶಿಕ್ಷಕರು ಹಾಗೂ ವಿದ್ಯಾಾರ್ಥಿಗಳ ಅನುಪಾತವನ್ನು ಕಡಿತಗೊಳಿಸಿದರು. ಇದರಿಂದಾಗಿ ಶಿಕ್ಷಕರು, ವಿದ್ಯಾಾರ್ಥಿಗಳ ಮೇಲೆ ಹೆಚ್ಚಿಿನ ಸಮಯವನ್ನು ನೀಡಲು ಸಹಕಾರಿಯಾಯಿತು. ಈ ಪ್ರಯೋಗವನ್ನು ಯಶಸ್ವಿಿಯಾಗಿ ನಡೆಸಿದ ಮೇಲೆ, ವಿದ್ಯಾಾರ್ಥಿಗಳ ಅಂಕಗಳಿಕೆಯಲ್ಲಿ ಏರಿಕೆಯಾಯಿತು. ಈ ಪ್ರಯೋಗವು ಭಾರತದಲ್ಲಿ ಅಷ್ಟೊೊಂದು ಯಶಸ್ವಿಿಯಾಗಲಿಲ್ಲ. 2005ರಲ್ಲಿ ವಿದ್ಯಾಾರ್ಥಿಗಳಿಗೆ ಇದ್ದಂತಹ ಬದ್ಧತೆ ಈಗಿಲ್ಲ ಬಿಡಿ. ಈ ಪ್ರಯೋಗಗಳು ಹಾಗೂ ಯೋಜನೆಗಳು ಭಾರತದಲ್ಲಿ 2005ರ ಹೊತ್ತಿಿಗೆ ಹಲವೆಡೆ ನಡೆದಿದ್ದವು. 5 ಕಿ.ಮೀ.ಗೆ ಒಂದು ಶಾಲೆಯಂತೆ ನಿಯಮವನ್ನು ರಚಿಸಿ ಹಲವಾರು ರಾಜ್ಯ ಸರಕಾರಗಳು ಶಾಲೆಗಳು ತೆರೆದಿದ್ದವು.

2015ರಲ್ಲಿ ಈ ತಂಡವು ಮತ್ತೊೊಂದು ಆಸಕ್ತಿಿದಾಯಕ ಪ್ರಯೋಗವನ್ನು ನಡೆಸಿತ್ತು. ಸರಕಾರ ನೇಮಕ ಶಿಕ್ಷಕರ ಜತೆಗೆ, ಕಾಂಟ್ರಾಾಕ್‌ಟ್‌ ಆಧಾರದ ಮೇಲೆ ಕೆಲವು ಶಿಕ್ಷಕರನ್ನು ನೇಮಿಸಿ, ಇಬ್ಬರ ಗುಣಮಟ್ಟದ ಶಿಕ್ಷಣವನ್ನು ತುಲನೆ ಮಾಡಿದ್ದರು. ಈ ತುಲನೆಯಲ್ಲಿ ಕಾಂಟ್ರಾಾಕ್‌ಟ್‌ ಆಧಾರದ ಮೇಲೆ ನೇಮಕವಾದ ಶಿಕ್ಷಕರ ಬೋಧನೆಯ ಪ್ರಭಾವವು, ಸರಕಾರ ನೇಮಿಸಿ ಶಿಕ್ಷಣ ಬೋಧನೆಯ ಪ್ರಭಾವಕ್ಕಿಿಂತಲು ಹೆಚ್ಚಿಿತ್ತು. ಕಾಂಟ್ರಾಾಕ್‌ಟ್‌ ಶಿಕ್ಷಕರು ಕೆಲಸವು ಮುಂದಿನ ದಿನಗಳಲ್ಲಿ ಸಿಗುತ್ತದೆಯೆಂಬ ಹುಮ್ಮಸ್ಸಿಿನಲ್ಲಿ ತಮ್ಮ ಶಿಕ್ಷಣದ ಕಲಿಕೆಯಲ್ಲಿ ಅತೀ ಹೆಚ್ಚಿಿನ ಆಸಕ್ತಿಿಯನ್ನು ತೋರಿಸಿದ್ದರು. ತಿಂಗಳಿಗೆ ಆರಾಮಾಗಿ ಸಂಬಳ ಬರುತ್ತೆೆ, ನಾನು ಯಾಕೆ ಅಷ್ಟೊೊಂದು ಮಕ್ಕಳ ಬಗ್ಗೆೆ ತಲೆ ಕೆಡಿಸಿಕೊಳ್ಳಬೇಕೆಂಬ ಮನಸ್ಥಿಿತಿಯಲ್ಲಿ ಸರಕಾರಿ ಶಿಕ್ಷಕರಿದ್ದರು. ಈಗಲೂ ಇದೇ ಮನಸ್ಥಿಿತಿಯಲ್ಲಿ ಹಲವಾರು ಸರಕಾರ ನೇಮಿತ ಶಿಕ್ಷಕರಿದ್ದಾಾರೆ. ಈ ಸಂಶೋಧನೆಯು ಹೇಳಿಕೊಳ್ಳುವಂತಹ ಸಂಶೋಧನೆಯಲ್ಲ. ಈ ನಿಟ್ಟಿಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿಿವೆ. ಇದೇ ರೀತಿಯ ಸಂಶೋಧನೆಯನ್ನು ನರ್ಸ್‌ಗಳ ವಿಚಾರದಲ್ಲಿ ಮಾಡಲು ಹೋಗಿ ವೈಫಲ್ಯ ಕಂಡಿದ್ದರು. ಸರಕಾರಗಳು ಇಂದಿಗೂ ಹಲವು ಶಿಕ್ಷಕರನ್ನು ಕಾಂಟ್ರಾಾಕ್‌ಟ್‌‌ನಿಂದ ಮುಕ್ತಗೊಳಿಸಿ, ಶಾಶ್ವತ ಸ್ಥಾಾನವನ್ನು ನೀಡಲಿಲ್ಲ.

ವಿದ್ಯಾಾಭ್ಯಾಾಸದ ವಿಚಾರದಲ್ಲಿ ಇವರುಗಳ ಸಂಶೋಧನೆಯಲ್ಲಿ ಹಲವಾರು ಪ್ರಮುಖ ಅಂಶಗಳ ಬಗ್ಗೆೆ ಎಲ್ಲಿಯೂ ಪ್ರಯೋಗಗಳನ್ನು ಮಾಡಬಹುದಿತ್ತು. ಪರೀಕ್ಷಾಾ ಕ್ರಮಗಳು ಎಲ್ಲಿಯೂ ಹೊಸ ಪ್ರಯೋಗಗಳನ್ನು ಮಾಡಲಿಲ್ಲ. ವೃತ್ತಿಿಪರವಾದ ಶಿಕ್ಷಣದ ಬಗ್ಗೆೆಯೂ ಎಲ್ಲಿಯೂ ಪ್ರಯೋಗಗಳನ್ನು ಮಾಡಲೇ ಇಲ್ಲ. ಮಕ್ಕಳಿಗೆ ಏನು ಬೇಕು? ಏನು ಬೇಡ? ಎಂಬ ಅಂಶಗಳ ಬಗ್ಗೆೆ ಅಷ್ಟೊೊಂದು ಸಂಶೋಧನೆಯನ್ನು ಮಾಡಲೇ ಇಲ್ಲ. ಪ್ರಸಕ್ತ ಶಿಕ್ಷಣ ವ್ಯವಸ್ಥೆೆಯಲ್ಲಿ ಇವರುಗಳು ಮಾಡಿದ ಸಂಶೋಧನೆಗಳು ಹೊಸತನ್ನು ನೀಡಲಿಲ್ಲ. ಇವರ ಸಂಶೋಧನೆಯನ್ನು ಕೇವಲ ‘ನೊಬೆಲ್’ ಪ್ರಶಸ್ತಿಿ ನೀಡಿದರೆಂಬ ಮಾತ್ರಕ್ಕೆೆ ಬೇರೆ ದೇಶದವರು ನಿಜವೆಂದು ಓದಿದರೆ ಯಾವ ರೀತಿಯ ಸಂದೇಶವು ಹೋಗಿರಬಹುದೆಂದು ಯೋಚಿಸಿ ನೋಡಿ.

ತುಂಬಾ ಜನರಿಗೆ ಇವರ ಪ್ರಯೋಗಗಳನ್ನು ಕೇಳಿ ತುಂಬಾನೇ ಸಿಲ್ಲಿ ಅನಿಸಿರಬಹುದು. ಹೌದು ಇದು ನೇರವಾಗಿ ಅವರ ಸಂಶೋಧನಾ ಪತ್ರದಿಂದಲೇ ತೆಗೆದಿರುವಂತಹ ವಿಚಾರಗಳು, ಅಂದಿನ ಕಾಲಘಟ್ಟದಲ್ಲಿಯೂ ಅವರು ಮಾಡಿದ ಪ್ರಯೋಗಗಳು ಹಾಗೂ ಸಂಶೋಧನೆಗಳನ್ನು ನೆಲಮಟ್ಟದಲ್ಲಿ ಅವರಿಗಿಂತ ತುಂಬಾ ಹಿಂದೆಯೇ ಅನುಷ್ಠಾಾನಗೊಳಿಸಿದ ಕೀರ್ತಿ ಭಾರತ ದೇಶದ್ದು. ನಮ್ಮ ನಾಯಕರುಗಳು ಏನೇ ಮಾಡಿಲ್ಲ ಎಂದರೂ ಈ ರೀತಿಯ ಯೋಜನೆಗಳನ್ನು ಅರ್ಧಂಬರ್ಧವಾದರೂ ಅನುಷ್ಠಾಾನಗೊಳಿಸಿದ್ದಾಾರೆ ಎಂಬುದರಲ್ಲಿ ಎರಡು ಮಾತಿಲ್ಲ ಬಿಡಿ. ಪ್ರಬುದ್ಧವಾದ ಸಂಶೋಧನೆಗಳನ್ನು ಮಾಡಿದ್ದರೆ ಒಪ್ಪಬಹುದಿತ್ತು. ಈ ರೀತಿಯ ಸಂಶೋಧನೆಗಳು ಯಾಕೋ ಪ್ರಬುದ್ಧವಾಗಿದ್ದವೆಂದು ನನಗನಿಸುತ್ತಿಿಲ್ಲ. ಬಡತನದ ನಿರ್ಮೂಲನೆಯ ಒಂದು ಮೂಲ ವಿದ್ಯಾಾಭ್ಯಾಾಸವೆಂಬುದು ಸರಿ. ಆದರೆ, ಅಲ್ಲಿನ ಸಮಸ್ಯೆೆಗಳ ಕುರಿತು ನಡೆಸಬಹುದಿದ್ದ ಸಂಶೋಧನೆಗಳು ಪ್ರಬುದ್ಧವಾಗಿರಬೇಕು. ಇವರ ಮುಂದಿನ ಪ್ರಯೋಗ ‘ಆರೋಗ್ಯ’ ಹಾಗೂ ‘ಬಡತನ’ದ ಬಗ್ಗೆೆ ಮುಂದಿನ ಅಂಕಣದಲ್ಲಿ ಚರ್ಚಿಸುತ್ತೇನೆ.