ಪ್ರಚಲಿತ
ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು
ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ!
‘ಮನೆ ಕಟ್ಟಿಿನೋಡು, ಕನ್ನಡಿಗರ ಹುಡುಕಿ ನೋಡು’ ಹೀಗೊಂದು ಆಧುನಿಕ ಗಾದೆಮಾತು ಬೆಂಗಳೂರಿನಲ್ಲಿ ಮನೆಕಟ್ಟುವ ಕನ್ನಡಿಗರ ಅನುಭವದ ಮಾತಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಮನೆ ಕಟ್ಟುವ ಯೋಜನೆ ಕಾರ್ಯಾರಂಭಗೊಂಡರೆ ಅದರ ಮೊದಲ ಕೆಲಸವಾಗಿ ಮನೆಯ ಕಟ್ಟಡದ ನೀಲನಕ್ಷೆಯನ್ನು ಹಾಕಿಕೊಡುವುದು ಕನ್ನಡಿಗರು ಸಿಕ್ಕರೆ ಸಿಗಬಹುದು. ಆ ನಂತರ ಅದನ್ನು ಕಟ್ಟಡ ರೂಪಕ್ಕೆೆ ತರುವ ಮೇಸ್ತ್ರಿಿ ಖಂಡಿತಾ ಕನ್ನಡಿಗರು ಸಿಗುವುದಿಲ್ಲ. ಆ ಪಾತ್ರವನ್ನು ನಿರ್ವಹಿಸುವವರು ಬೆಂಗಳೂರಿನಲ್ಲೇ ವಾಸಿಸುತ್ತಿಿರುವ ಪುರಾತನ ತಮಿಳಿಗನೇ ಆಗಿರುತ್ತಾಾನೆ. ಪಾಯ ತೋಡುವವರೂ ಬಹುತೇಕ ತಮಿಳು ಅಥವಾ ತೆಲುಗು ಭಾಷೆಯ ವಲಸಿಗರೇ ಆಗಿರುತ್ತಾಾರೆ. ಜೆಸಿಬಿ ಯಂತ್ರಕ್ಕೆೆ ಬಂಡವಾಳ ಹೂಡಿರುವವ ಕನ್ನಡಿಗನೇ ಆಗಿದ್ದರೂ ಅದನ್ನು ಚಲಾಯಿಸಿ ಗುಂಡಿ ತೋಡುವವನು ಮತ್ತೆೆ ತಮಿಳಿಗ ಅಥವಾ ತೆಲುಗನೇ ಆಗಿರುತ್ತಾಾನೆ. ಇಟ್ಟಿಿಗೆ ಕಂಬಿಗಳು ಕನ್ನಡಿಗರಿಂದಲೇ ದೊರಕಿದರೂ ಕಟ್ಟಡ ಕಟ್ಟುವ ನುರಿತ ಗಾರೆಯವರು ಬಹುತೇಕ ತಮಿಳಿಗನೇ ಆಗಿರುತ್ತಾಾನೆ. ಆತನಿಗೆ ಸಹಾಯಕರಾಗಿ ಸಿಮೆಂಟ್ ಮರಳು ಬೆರೆಸಿ ತಂದು ನೀಡುವ ಕೂಲಿ ಆಳು ತಮಿಳಿಗನೇ ಆಗಿರುತ್ತಾಾನೆ ಇಲ್ಲದಿದ್ದರೆ ನಮ್ಮ ಉತ್ತರ ಕರ್ನಾಟಕದಿಂದ ಗುಳೇ ಬಂದ ನಮ್ಮ ರಾಯಚೂರು ಕಲಬುರ್ಗಿಯ ರೈತ ಕುಟುಂಬದವರೇ ಆಗಿರುತ್ತಾಾರೆ. ಮುಂದೆ ಮನೆಯನ್ನು ಪೂರ್ಣಗೊಳಿಸಲು ಬೇಕಾದ ಪೇಂಟರ್, ಟೈಲ್‌ಸ್ ಹಾಕವವರು, ಬಡಗಿ (ಕಾರ್ಪೆಂಟರ್) ಇವರುಗಳು ಮಾತ್ರ ಪಕ್ಕಾಾ ಉತ್ತರಪ್ರದೇಶ ಬಿಹಾರ ರಾಜಸ್ಥಾಾನ ಗುಜರಾತ್ ಒರಿಶಾದಿಂದ ದುಡಿಮೆಗಾಗಿಯೇ ಬಂದತಹ ಪರಭಾಷಿಕರೇ ಹೊರತು ಕನ್ನಡಿಗರ ಪಾತ್ರ ವಿರಳ. ಈ ರಾಜ್ಯದಿಂದ ಬರುವ ಕೆಲಸಗಾರರು ಎಂತಹ ಕಟ್ಟುನಿಟ್ಟಾಾಗಿರುತ್ತಾಾರೆಂದರೆ ಸ್ಥಳೀಯರಿಗಿಂತ ಕಡಿಮೆ ಬೆಲೆಗೆ ಒಪ್ಪಿಿಕೊಳ್ಳುತ್ತಾಾರೆ, ಹಗಲು ರಾತ್ರಿಿ ಎರಡೂ ಪಾಳೆಯದಲ್ಲಿ ಒಂದೇ ಸಮನೆ ಕೆಲಸಮಾಡಿ ಒಪ್ಪಿಿಕೊಂಡ ಕೆಲಸವನ್ನು ಬೇಗ ಮಾಡಿ ಮುಗಿಸುತ್ತಾಾರೆ ಹಾಗೂ ಒಪ್ಪಿಿಕೊಂಡ ಕೂಲಿ ಹಣವನ್ನು ಕೆಲಸ ಮುಗಿಸಿದ ನಂತರವೇ ಪಡೆದುಕೊಂಡು ತೆರಳುವುದು ಇವರ ಜನಪ್ರಿಿಯತೆಗೆ ಕಾರಣ.
ಅದ್ದರಿಂದ ಮನೆಕಟ್ಟುವ ಕನ್ನಡಿಗರೇ ಆಗಲಿ ಇನ್ನಾಾರೇ ಆಗಲಿ ಇವರಿಗೇ ಮೊದಲ ಪ್ರಾಾಶಸ್ತ್ಯ ನೀಡಿ ತನ್ನ ಮನೆಯನ್ನು ಅಚ್ಚುಕಟ್ಟಾಾಗಿ ಸರಾಗವಾಗಿ ಪೂರ್ಣಗೊಳಿಸಿಕೊಳ್ಳುತ್ತಾಾನೆ. ಇನ್ನು ಮನೆ ಕಟ್ಟಲು ಬೇಕಾದ ಗ್ರಾಾನೈಟ್, ಟೈಲ್‌ಸ್, ಎಲೆಕ್ಟ್ರಿಿಕಲ್ ಸರಂಜಾಮುಗಳು, ಹಾರ್ಡ್‌ವೇರ್, ಕೊಳಾಯಿ ಕೆಲಸಗಳ ವಸ್ತುಗಳು, ಪೈಂಟ್‌ಗಳು ಇವೆಲ್ಲವನ್ನು ಮಾರುವವರು ಶೇ.90 ರಷ್ಟು ಹಿಂದಿ ಭಾಷಿಕರು ಅಥವಾ ತೆಲುಗು ಭಾಷಿಕರೇ ಆಗಿರುತ್ತಾಾರೆ. ಅಪ್ಪಿಿತಪ್ಪಿಿ ಅವರು ಕನ್ನಡಿಗರಾಗಿದ್ದರೂ ಅವರ ಬಳಿ ಕನ್ನಡಿಗರೇ ಹೋಗುವುದಿಲ್ಲ. ಏಕೆಂದರೆ ಇವರುಗಳು ಕನ್ನಡಿಗರಿಗಿಂತ ಕಡಿಮೆ ದರದಲ್ಲಿ ನೀಡುತ್ತಾಾರೆ. ಆಯ್ತು, ಮನೆ ಕಟ್ಟಿಿ ‘ಕೋಮುವಾದಿ, ಮನುವಾದಿ, ಪುರೋಹಿತಶಾಹಿ’ಗಳಿಂದ ಹೋಮ ಹವನಗಳನ್ನು ಮಾಡಿಸಿ ವಿದೇಶಿ ತಳಿಯ ‘ಜೆರ್ಸಿ’ ಗೋವನ್ನು ಕರೆತಂದು ಗೋಪೂಜೆ ಮಾಡಿ ಗೃಹಪ್ರವೇಶ ಮಾಡಿ ಮನೆಸೇರಿ ಸಂಸಾರ ನಡೆಸಲು ಶುರುವಿಟ್ಟರೆ ದಿನಸಿ ಪದಾರ್ಥಗಳನ್ನು ಮಾರುವವರೂ ಹಿಂದಿ ಭಾಷಿಕರದ್ದೇ ಮಾರುಕಟ್ಟೆೆ.
ಅಥವಾ ಪರಭಾಷಿಕರಾದ? ಶೆಟ್ಟರ ಅಂಗಡಿ. ಇದನ್ನೂ ಮೀರಿ ವಿದೇಶಿ ಕಂಪನಿಗಳು ಅಥವಾ ರಿಲೆಯನ್‌ಸ್, ಬಿಗ್ ಬಜಾರ್, ಡಿಮಾರ್ಟ್‌ಗಳೆಂಬ ಪರರಾಜ್ಯದ ಕಂಪನಿಗಳು ನಡೆಸುವ ದೊಡ್ಡದೊಡ್ಡ ಸೂಪರ್ ಮಾರ್ಕೆಟ್‌ಗಳು. ಇಂತಹ ಸ್ಥಳಗಳಲ್ಲಿ ಕಾರ್ಯ ನಿರ್ವಹಸುವ ಕೆಲಸಗಾರರು ಕನ್ನಡಿಗರಿದ್ದರೂ ಕನ್ನಡಿಗರಂತೆ ಕಾಣುವುದಿಲ್ಲ. ಇನ್ನು ರಜಾ ದಿನದಲ್ಲಿ ಮೊದಲೆಲ್ಲಾಾ ಕ್ಷೌರ ಮಾಡಿಸಿಕೊಳ್ಳಲು ಹೋದಾಗ ತೆಲುಗು ಭಾಷಿಕನು ನಮ್ಮೊೊಂದಿಗೆ ಸ್ನೇಹ ಜೀವಿಯಾಗಿ ಕಷ್ಟಸುಖ ವಿಚಾರಿಸಿ ನಮ್ಮನ್ನು ಅಲಂಕರಿಸಿ ಕಳಿಸುತ್ತಿಿದ್ದ. ಆದರೆ, ಇಂದು ಈ ಉದ್ಯಮವೂ ದೊಡ್ಡ ಮಟ್ಟದಲ್ಲಿ ಬೆಳೆದು ಕ್ಷೌರವನ್ನು ಮಾಡುವವರು ಉತ್ತರಪ್ರದೇಶ ಬಿಹಾರದಿಂದ ವಲಸೆ ಬಂದಿರುವ ಮುಸಲ್ಮಾಾನ ಯುವಕರೇ ಆಗಿರುವುದು ಕನ್ನಡಿಗರ ಅದೃಷ್ಟ. ಇನ್ನು ಮಹಿಳೆಯರ ಬ್ಯೂಟಿ ಪಾರ್ಲರ್‌ನಲ್ಲಿ ಕನ್ನಡತಿಯರನ್ನು ಹುಡುಕುವುದು ಸಾಧ್ಯವೇ ಇರುವುದಿಲ್ಲ. ಅಲ್ಲಿ ಗ್ರಾಾಹಕರನ್ನು ಅಲಂಕರಿಸುವುದು ಬೆಂಗಾಲಿಗಳು, ಟಿಬೆಟಿಯನ್ ಯುವತಿಯರದ್ದೇ ಪಾರುಪತ್ಯ. ನಡೀರಿ ಆಭರಣ ಖರೀದಿಸೋಣ ಎಂದು ಆಭರಣ ಖರೀದಿಸಲು ಹೊರಟರೆ ಸಣ್ಣಪುಟ್ಟ ಅಂಗಡಿಗಳೆಲ್ಲಾಾ ರಾಜಸ್ಥಾಾನಿಗಳು ಗುಜರಾತಿಗಳಾದರೆ, ದೊಡ್ಡ ಚಿನ್ನದಂಗಡಿಗಳೆಲ್ಲಾಾ ಕೇರಳದವರು ನಡೆಸುವ ಅಪ್ಪಟ ಪರಭಾಷಿಕರದೇ ಆಗಿರುತ್ತದೆ.
ರೋಗ ಬಂದು ವೈದ್ಯರ ಬಳಿ ತೆರಳಿದರೆ ನಮಗೆ ಖಂಡಿತಾ ಕನ್ನಡಿಗರೇ ಸಿಗುತ್ತಾಾರೆನ್ನಿಿ. ಆದರೆ, ಇತ್ತೀಚೆಗೆ ಕನ್ನಡ ಬಾರದ ಡಾಕ್ಟರ್‌ಗಳೇ ಚೆನ್ನಾಾಗಿ ಟ್ರೀಟ್‌ಮೆಂಟ್ ಕೊಡುತ್ತಾಾರೆ ಎಂಬ ನಂಬಿಕೆ ಹೆಚ್ಚುತ್ತಿಿದೆ. ಆ ವೈದ್ಯರು ಬರೆದುಕೊಟ್ಟ ಔಷಧಯನ್ನು ಖರೀದಿಸಲು ಹೊರಟರೆ ಬೆಂಗಳೂರಿನಲ್ಲಿ ಬಹುತೇಕ ಹಿಂದಿ ಭಾಷಿಕರದ್ದೇ ಅಂಗಡಿಗಳಿರುತ್ತದೆ. ಬಡಪಾಯಿ ಕನ್ನಡಿಗನ ಔಷಧದ ಅಂಗಡಿಗಳು ವಿರಳಾತಿ ವಿರಳ. ಆದರೆ, ಇಲ್ಲಿ ರಾತ್ರಿಿಯ ಔಷಧಗಳೆಂದು ಕರೆಯಲಾಗುವ ಎಣ್ಣೆೆ ಅಂಗಡಿ ಬಾರ್ ರೆಸ್ಟೋೋರೆಂಟ್ ನಡೆಸಲು ಪರವನಾಗಿ ಪಡೆದು ಧೈರ್ಯವಾಗಿ ನಡೆಸುವುದು ಮಾತ್ರ ಪಕ್ಕಾಾ ಕನ್ನಡಿಗನೇ ಆಗಿರುತ್ತಾಾನೆ ಎಂಬುದಷ್ಟೇ ಹೆಮ್ಮೆೆ? ಇನ್ನು ಮನೆಯ ದಿನಪತ್ರಿಿಕೆ ಪುಸ್ತಕಗಳನ್ನು ರದ್ದಿಗೆ ಹಾಕಲು ಹೊರಟರೆ ಅಲ್ಲೂ ತಮಿಳು ಭಾಷಿಕರದ್ದು ಅಥವಾ ಮುಸಲ್ಮಾಾನರದ್ದೇ ಆಗಿರುತ್ತದೆ. ನಮ್ಮ ನಾಡಿನಲ್ಲಿ ಮುಸಲ್ಮಾಾನರು ಮಾಡದ ವ್ಯಾಾಪಾರಗಳೇ ಇಲ್ಲವೆನ್ನಬಹುದು. ಗುಜರಿ ಅಂಗಡಿಯಿಂದ ವಾಹನ ರಿಪೇರಿ ಚಿನ್ನ ಜವಳಿ ತರಕಾರಿ ಹಣ್ಣು ಬಟ್ಟೆೆ ಚಪ್ಪಲಿ ಮಾಂಸದಂಗಡಿ ಕುಂಚದ ಕಲಾವಿದರು ಎಲ್ಲರೂ ಅವರೇ ಆಗಿರುತ್ತಾಾರೆ.
ಇನ್ನು ನಾವು ವಾಸಿಸುವ ನಗರದ ಪ್ರತೀ ರಸ್ತೆೆಯನ್ನು ದಿನಬೆಳಗಾದರೆ ಗುಡಿಸಿ ಸ್ವಚ್ಚಗೊಳಿಸಿ ಅಂದಗೊಳಿಸಿ, ನಾವುಗಳು ಬೇಕಾಬಿಟ್ಟಿಿ ಬಿಸಾಡುವ ಮನೆಯ ತ್ಯಾಾಜ್ಯವನ್ನು ಕೈಯಲ್ಲಿ ಮುಟ್ಟಲೂ ಕಣ್ಣಿಿಂದ ನೋಡಲೂ ಸಾಧ್ಯವಾಗದ ಅಸಹ್ಯಕರ ಹಸಿತ್ಯಾಾಜ್ಯಗಳನ್ನು ಯಾವ ಸಂಕೋಚ ಅಸಹ್ಯ ಭೇದಭಾವಗಳಿಲ್ಲದೆ ಹೊತ್ತೋೋಯ್ದು ನೆರವಾಗುವ ಪೌರಕಾರ್ಮಿಕರೆಂಬ ನಿತ್ಯಕರ್ಮಿಗಳು ಕೂಡಾ ತೆಲುಗು ಮತ್ತು ತಮಿಳು ಭಾಷೆಕರೇ ಆಗಿರುತ್ತಾಾರೆ. ಹೊರತು ಅಲ್ಲಿ ಕನ್ನಡಿಗರಿಗೆ ಯಾವ ಸೀಮೆಯ ಮೀಸಲುಯೂ ಇಲ್ಲ.
ಇಷ್ಟು ಮುಗಿದ ಮೇಲೆ ನಗರದ ಕನ್ನಡಿಗರು ಮನರಂಜನೆಗಾಗಿ ತೆರಳುವುದು ಕನ್ನಡ ಪರಿಸರವೇ ಇಲ್ಲದ ಮಾಲ್‌ಗಳಿಗೆ, ಬಜಾರುಗಳಿಗೆ ಪಬ್ಬು ಕ್ಲಬ್ ಬಾರ್‌ಗಳಿಗೆ ಹೊರತು ಜಾತ್ರೆೆ ಸಂತೆಗಳಿಗಲ್ಲ. ಬಹುಶಃ ಕಲಾ ಕ್ಷೇತ್ರಗಳಿಗೆ ಹೋಗುವವರು ಮಾತ್ರ ಸ್ವಲ್ಪ ಹಿರಿಯ ಕನ್ನಡಿಗರಿರಬಹುದು. ಮೊನ್ನೆೆ ತೆಲುಗು ಚಿತ್ರ ಸೈರ ನರಸಿಂಹರೆಡ್ಡಿಿ ಬಿಡುಗಡೆಯಾಯಿತು. ಅದನ್ನು ನೋಡಲು ಹೋದ ಕನ್ನಡಿಗರು ಚಿತ್ರಮಂದಿರದಲ್ಲಿ ವಿಚಾರಿಸಿದ್ದು ‘ಇದು ತೆಲುಗು ಚಿತ್ರ ತಾನೇ?’ ಎಂದು. ಏಕೆಂದರೆ ಅಂದು ಈ ಚಿತ್ರವು ಕನ್ನಡದಲ್ಲೂ ಡಬ್ಬಿಿಂಗ್ ಆಗಿ ಬಿಡುಗಡೆಗೊಂಡಿತ್ತು.
ಆದರೆ, ಕನ್ನಡಿಗ ಮಾತ್ರ ಆ ಚಿತ್ರವನ್ನು ಸಾಕ್ಷಾತ್ ತೆಲುಗಿನಲ್ಲೇ ನೋಡಬೇಕೆಂದು ಬಯಸಿದ್ದ. ಕಾರಣ ಆತ ಚಿರಂಜೀವಿಯ ಡೈಲಾಗ್‌ನ್ನು ತೆಲುಗಿನಲ್ಲೇ ಕೇಳಿದರೆ ಮಾತ್ರ ಮಜಾ ಎಂಬುದನ್ನು ಅರಿತಿದ್ದ. ಈಗ ಹೇಳಿ ಕೆಲವರು ಡಬ್ಬಿಿಂಗ್ ವಿರೋಧಿಸಿದ್ದು ಸರಿಯಾಗಿಯೇ ಇದೆ ಎನಿಸುವುದಿಲ್ಲವೇ? ಮೇಲ್ವರ್ಗದ ಕನ್ನಡಿಗರೆನಿಸಿಕೊಂಡವರು ತಮ್ಮ ಮಕ್ಕಳೊಂದಿಗೆ ನೋಡುವುದು ಪರಭಾಷೆಯ ಹಿಂದಿ ಇಂಗ್ಲಿಿಷ್ ತಮಿಳು ತೆಲುಗು ಚಿತ್ರಗಳನ್ನು ಹಾಗೂ ಅದನ್ನು ದೊಡ್ಡಮೊತ್ತದ ಚಿಕ್ಕ ಪರದೆಗಳೆಂಬ ದುಬಾರಿ ಮಾಲ್‌ಗಳಲ್ಲೇ ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಇಂತಹ ಮಾಲ್‌ಗಳು ಹೆಚ್ಚಾಾದಂತೆಲ್ಲಾಾ ಕನ್ನಡಿಗರು ದಶಕಗಳಿಂದ ನಡೆಸಿಕೊಂಡು ಬಂದಿದ್ದ ಚಿತ್ರಮಂದಿರವೆಲ್ಲಾಾ ನೆಲಸಮವಾಗಿ ಮಾಲುಗಳಾಗಿ ಪರಿವರ್ತನೆಗೊಳ್ಳುತ್ತಿಿವೆ. ಹೀಗಾದಗಲೆಲ್ಲಾಾ ಅದು ಸಾಮಾನ್ಯ ಕನ್ನಡಿಗನಿಂದ ದೂರಾಗುತ್ತಲೇ ಹೋಗುತ್ತದೆಂಬುದು ದುರ್ದೈವ.
ರೈಲ್ವೆೆ ಇಲಾಖೆ, ಬಿಎಸ್‌ಎನ್‌ಎಲ್, ಭಾರತೀಯ ಸ್ಟೇಟ್ ಬ್ಯಾಾಂಕ್, ಅಂಚೆ ಕಚೇರಿಗಳಲ್ಲಿ ಬಹುತೇಕ ತಮಿಳಿಗರೇ ಹೆಚ್ಚಿಿನ ಸಂಖ್ಯೆೆಯಲ್ಲಿರುತ್ತಾಾರೆ. ಹಾಗೆಯೇ ಎಚ್‌ಡಿಎಫ್‌ಸಿ, ಐಸಿಐಸಿಐ ಯಂತಹ ಖಾಸಗಿ ಬ್ಯಾಾಂಕ್‌ಗಳಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರೆಂದರೆ ಅಲ್ಲಿನ ಅಟೆಂಡರ್‌ಗಳು, ಸೆಕ್ಯೂರಿಟಿಯವರು ಮಾತ್ರ ಆಗಿರುತ್ತಾಾರೆ. ಇನ್ನು ಕಾಲ್ ಸೆಂಟರ್‌ಗಳಲ್ಲಿ ಎಲ್ಲಾಾ ಭಾಷೆಗಳನ್ನು ಮಾತನಾಡುವ ಅಥವಾ ಕನ್ನಡವನ್ನು ಅಲ್ಪ ಮಟ್ಟಿಿಗೆ ಕಲಿತಿರುವ ಯುವಕ ಯುವತಿಯರಿಗೆ ಮಾತ್ರ ಅವಕಾಶ.
ಇಂತಹ ಕಂಪನಿಗಳಲ್ಲಿ ಕನ್ನಡದಲ್ಲಿ ಮಾತನಾಡುವುದೇ ಒಂದು ದೌರ್ಬಲ್ಯದ ಅರ್ಹತೆಯಾಗಿರುತ್ತದೆ. ಈಗ ಹೇಳಿ ಬೆಂಗಳೂರಿನಲ್ಲಿ ಅಪ್ಪಟ ಅಥವಾ ಮೂಲ ಕನ್ನಡಿಗರನ್ನು ಎನ್ನೆೆಲ್ಲಿ ಹುಡುಕಬೇಕು? ಎಲ್ಲಿದ್ದಾಾನೆ ನಮ್ಮ ಅಸಲಿ ಕನ್ನಡಿಗ ಯಾವ ಕ್ಷೇತ್ರದಲ್ಲಿದ್ದಾಾನೆ ನಮ್ಮ ಹೆಮ್ಮೆೆಯ ಕನ್ನಡಿಗ? ಸಮಾಧಾನವೆಂದರೆ ನಮ್ಮ ಕನ್ನಡಿಗರು ಇರುವುದು ನಗರದ ಆಟೋಚಾಲಕರಲ್ಲಿ, ಟ್ಯಾಾಕ್ಸಿಿ ಡ್ರೈವರ್‌ಗಳಲ್ಲಿ, ಮರಳು ಚಪ್ಪಡಿಕಲ್ಲು ವ್ಯಾಾಪಾರದಲ್ಲಿ, ಹೂವು ತರಕಾರಿ ವ್ಯಾಾಪರದಲ್ಲಿ, ಪೆಟ್ರೋೋಲ್ ಬಂಕ್‌ಗಳಲ್ಲಿ, ರಾಜ್ಯ ಸರಕಾರದ ಕಚೇರಿಗಳಲ್ಲಿ, ಕೋರ್ಟ್‌ಗಳಲ್ಲಿ, ಸಾರಿಗೆ ಸಂಸ್ಥೆೆಗಳಲ್ಲಿ ಮಾತ್ರ. ಮೇಲೆ ಹೇಳಲಾದ ಎಲ್ಲಾಾ ಪರಭಾಷಿಕರ ಕ್ಷೇತ್ರಗಳನ್ನು ದಂಡಿಯಾಗಿ ಬಳಸಿಕೊಳ್ಳುತ್ತಿಿರುವುದು ಅನುಕೂಲ ಪಡೆಯುತ್ತಿಿರುವುದು ಮಾತ್ರ ನಗರದ ಕನ್ನಡಿಗರೇ ಆಗಿರುತ್ತಾಾರೆ. ಮತ್ತು ಅದರಿಂದ ಉದ್ದಾಾರವಾಗುತ್ತಿಿರುವುದು ಪರಭಾಷಿಕರೇ ಆಗಿರುತ್ತಾಾರೆ.
ದುರಂತವೆಂದರೆ ಒಂದು ಭಾಷೆಯ ರಕ್ಷಣೆಗಾಗಿ ನಮ್ಮ ರಾಜ್ಯದಲ್ಲರುವಷ್ಟು ಸಂಘಗಳು ವೇದಿಕೆಗಳು ಹೋರಾಟಗಳು ಬೇರಾವುದೇ ರಾಜ್ಯಗಳಲಿಲ್ಲ. ಕೆಲ ಸಂಘಟನೆಗಳು ತಮ್ಮ ಜಾತಿ ಪುರುಷರ, ಜಾತಿ ಬಾಂಧವರ ರಕ್ಷಣೆಯ ಧೋರಣೆಯ ಸಮಯ ಸಾಧಕತನದ ನಡವಳಿಕೆಗಳಿಂದ ಹೆಸರನ್ನು ಮರ್ಯಾದೆಯನ್ನು ಕೆಡಿಸಿಕೊಂಡಿವೆ. ವಾಟಾಳ್ ನಾಗರಾಜ್‌ರಂತ ಕನ್ನಡ ಚಳವಳಿ ನಾಯಕನನ್ನು ಅಸಲಿಗೆ ಕನ್ನಡಿಗರೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾರಣ ಅವರೂ ಗಂಭೀರವಾಗಿ ವರ್ತಿಸುವುದಿಲ್ಲ ಎಂಬ ಸ್ಪಷ್ಟತೆ. ವರನಟ ಡಾ. ರಾಜಣ್ಣನವರು ಬದುಕಿರುವವರೆಗೂ ಕನ್ನಡವೆಂದರೆ ಸ್ವಾಾಭಿಮಾನದ ವಿಷಯವಾಗಿತ್ತು. ಆದರೆ, ಈಗ ಬರಿಯ ಸ್ವಾಾರ್ಥದ ವಿಚಾರವಾಗಿರುವುದು ಸುಳ್ಳಲ್ಲ.
ಈಗ ನೋಡಿ, ಇಲ್ಲಿ ದಶಕಗಳಿಂದ ವಾಸವಿದ್ದು ಇಲ್ಲಿನ ಜನಗಳ ವಿಶ್ವಾಾಸಗಳಿಸಿ ಸಂವಿಧಾನಾತ್ಮಕವಾಗಿ ಚುನಾವಣೆಯನ್ನು ಎದುರಿಸಿ ಕನ್ನಡಿಗರ ಮತಗಳನ್ನೇ ಪಡೆದು ನಗರದ ಪ್ರಥಮ ಪ್ರಜೆ ಮಹಾಪೌರರನ್ನು ಪರಭಾಷಿಕರು ಎಂದು ಹತಾಶೆಯಿಂದ ದೂಷಿಸುವ ದೌರ್ಭಾಗ್ಯ ಕೆಲವರದ್ದಾಾಗಿದೆ. ಇಂತಹ ಅಪವಾದವನ್ನು ತೊಡೆದು ಹಾಕಲು ಬರುವ ‘ನವೆಂಬರ್ ಒಂದರಿಂದ ಕನ್ನಡದ ಫಲಕಗಳಿಲ್ಲದಿದ್ದರೆ ಪರವನಾಗಿ ರದ್ದುಗೊಳಿಸುವ ಆದೇಶ’ವನ್ನು ಮಹಾಪೌರರಾದ ‘ಗೌತಮ್ ಕುಮಾರ್ ಜೈನ್’ ಹೊರಡಿಸಿದ್ದಾಾರೆ. ಇದು ಆರಂಭಿಕ ಶೂರತ್ವವೋ ನಿಜವಾದ ಕನ್ನಡ ಕೆಲಸದ ಶುರುವೋ ಮುಂದೆ ತಿಳಿಯುತ್ತದೆ. ಇಲ್ಲಿ ‘ಕನ್ನಡದ ಫಲಕಗಳಷ್ಟೇ ಕನ್ನಡದ ಅಸ್ಮಿಿತೆಯೂ ನಗರಕ್ಕೆೆ ಅವಶ್ಯಕತೆ’ ಇದೆ. ಮಹಾಪೌರರನ್ನು ಕೇವಲ ಜೈನ್ ಜನಾಂಗ ಎಂದು ದೂಷಿಸುವುದು ಅಲ್ಪಜ್ಞಾಾನವಾಗುತ್ತದೆ.
ಕನ್ನಡಿಗ ಮತ್ತು ಪರಭಾಷಿಕರು ಎಂಬ ಭೇದ ಎಲ್ಲಿಯವರೆಗೂ ಇರುತ್ತದೆ ಎಂದರೆ, ಇಲ್ಲಿನ ನೆಲ ಅನ್ನ ನೀರು ಗಾಳಿ ಪಡೆದು ಇಲ್ಲಿನ ಭಾಷೆಗೆ ಇಲ್ಲಿನ ಸಂಸ್ಕೃತಿಗೆ ಸ್ಪಂದಿಸದೆ ಬದುಕುವುದು. ಆದರೆ, ಇಲ್ಲಿನ ಔದಾರ್ಯಕ್ಕೆೆ ಋಣಿಯಾಗಿ ಇಲ್ಲಿನ ಭಾಷೆಯನ್ನು ಗೌರವಿಸಿ ಕಲಿತು ಸಾಮಾಜಿಕ ಸಾಂಸ್ಕೃತಿಕವಾಗಿ ಸ್ಪಂದಿಸುವುದಿದೆಯಲ್ಲ ಅಂತಹ ಪ್ರಜೆಗಳನ್ನು ಪರಭಾಷಿಕರು ಎಂದು ಕರೆಯುವುದು ಅಸಾಧ್ಯ. ನೋಡಿ, ನಮ್ಮ ‘ಕನ್ನಡದ ಸಾರಸತ್ವ ಲೋಕದಲ್ಲಿ ಟಿ.ಪಿ ಕೈಲಾಸಂ, ಜಿ.ಪಿ ರಾಜರತ್ನಂ, ಮಾಸ್ತಿಿ ವೆಂಕಟೇಶ್ ಅಯ್ಯಂಗಾರ್, ದತ್ತಾಾತ್ರೇಯ ರಾಮಚಂದ್ರ ಬೇಂದ್ರೆೆ’ಯವರ ಮಾತೃ ಭಾಷೆ ಕನ್ನಡವಲ್ಲ. ವಚನಕಾರ ಪಾಲ್ಕುರಿಕೆ ಸೋಮನಾಥ, ಕನ್ನಡದ ಪ್ರಥಮ ವಾಕ್ಚಿಿತ್ರದ ನಾಯಕ ನಟ ಸುಬ್ಬಯ್ಯ ನಾಯ್ಡು ಅವರು ಮೂಲತಃ ತೆಲುಗಿನವರು. ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರು ಮೂಲತಃ ತೆಲುಗು ಪ್ರದೇಶದವರು ಎಂದರೆ ನಂಬಲು ಅಸಾಧ್ಯ. ಇನ್ನು ಜನಪದ ಕವಿ ಸಂತ ಶಿಶುನಾಳ ಷರೀಫರು, ಸಾಹಿತಿಗಳಾದ ಎಸ್.ಕೆ. ಕರೀಂಖಾನ್, ನಿಸಾರ್ ಅಹಮದ್ ಅವರನ್ನು ಕೇವಲ ಮುಸಲ್ಮಾಾನರಾಗಿ ಗುರುತಿಸುವುದು ಎಲ್ಲಾಾದರೂ ಉಂಟೇ? ಅಷ್ಟೇ ಏಕೆ ಕನ್ನಡದ ಆದಿಕವಿ ಪಂಪ ರನ್ನ ಪೊನ್ನ ಜನ್ನ, ನಮ್ಮ ಕನ್ನಡ ನಾಡನ್ನು ಆಳಿದ ಅನೇಕ ಅರಸರು ಕನ್ನಡಿಗರಾದರೂ ಅವರು ಜೈನತ್ವವನ್ನು ಅನುಸರಿಸಿದವರು. ಅವರನ್ನು ಪರಭಾಷಿಕರು ಎಂದು ಭಾವಿಸುವುದು ಇತಿಹಾಸ ದ್ರೋಹವಾಗುತ್ತದಲ್ಲವೇ?