Friday, 22nd November 2024

1.2 ಲಕ್ಷ ರೂ.ಗೆ 12 ಮಾವಿನ ಹಣ್ಣು ಮಾರಿ ಸ್ಮಾರ್ಟ್‌’ಫೋನ್‌ ಖರೀದಿಸಿದ ಬಾಲಕಿ

ಜಮ್ ಶೆಡ್ ಪುರ: ಎಷ್ಟೇ ಕಷ್ಟವಾದರೂ ಕಲಿಯಲೇಬೇಕೆಂಬ ಹಠದಲ್ಲಿ ಆನ್ಲೈನ್ ಕ್ಲಾಸ್‌ಗಾಗಿ ಹನ್ನೊಂದು ವರ್ಷದ ಬಾಲಕಿ ತುಳಸಿ ಕುಮಾರಿ, 12 ಮಾವಿನ ಹಣ್ಣಗಳನ್ನ 1.2 ಲಕ್ಷಗಳಿಗೆ ಮಾರಾಟ ಮಾಡಿ ಸ್ಮಾರ್ಟ್ಫೋನ್ ಖರೀದಿಸಿದ್ದಾಳೆ.

ಇದಕ್ಕೆ ಇಂಬು ನೀಡುವಂತೆ, 8 ವರ್ಷದ ತುಳಸಿ ಕುಮಾರಿ ಎಂ#ಬ ಮಾವಿನಹಣ್ಣು ಮಾರಾಟ ಮಾಡುವ ಹುಡುಗಿಗೆ ಎಡುಟೈನ್ಮೆಂಟ್ ಕಂಪನಿಯ ಉಪಾಧ್ಯಕ್ಷ ನರೇಂದ್ರ ಹೆಟೆ ಅವರು 1 ಲಕ್ಷ ಇಪ್ಪತ್ತು ಸಾವಿರ ನೀಡಿ 12 ಮಾವಿನ ಹಣ್ಣಗಳನ್ನ ಖರೀದಿಸಿದ್ದಾರೆ. ಈ ಹಣದಿಂದ ಹುಡುಗಿ ಅಧ್ಯಯನ ಮಾಡಲು ಫೋನ್ ಖರೀದಿಸಿದ್ದಾಳೆ. ಕರೊನಾ ಸಮಯ ದಲ್ಲಿ ಶಾಲೆ ಮುಚ್ಚಲಾಗಿದ್ದು, ಆನ್‌ಲೈನ್ ಕ್ಲಾಸ್‌ ಮಾತ್ರ ನಡೆಯುತ್ತಿವೆ. ಬಾಲಕಿಯ ಬಳಿ ಫೋನ್ ಇಲ್ಲದ ಕಾರಣ ಅಧ್ಯಯನ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ತುಳಸಿಗೆ ಮೊಬೈಲ್ ಫೋನ್ ಮತ್ತು ಎರಡು ವರ್ಷಗಳ ಇಂಟರ್ನೆಟ್ ಸಹ ಒದಗಿಸಲಾಗಿದ್ದು, ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಬಹುದು. ನರೇಂದ್ರ ಅವರ ಪುತ್ರ ಅಮೆಯಾ ಸಂತೋಷ ವ್ಯಕ್ತಪಡಿಸಿದ್ದು, ತುಳಸಿ ತನ್ನ ಅಧ್ಯಯನ ಪುನರಾರಂಭಿಸಲು ಸಾಧ್ಯವಾಗುತ್ತೆ ಎಂದು ಹೇಳಿದರು.

ಈ ಕುರಿತು ಸಂತೋಷ ವ್ಯಕ್ತ ಪಡಿಸಿದ ತುಳಸಿಯ ತಂದೆ ತಂದೆ ಶ್ರೀಮಲ್ ಕುಮಾರ್, ದೇವರ ರೂಪದಲ್ಲಿ ಬಂದಿದ್ದಾರೆ. ತುಳಸಿಯ ತಾಯಿ ಪದ್ಮಿನಿ ದೇವಿ ಧನ್ಯವಾದ ಅರ್ಪಿಸಿದರು. ನನ್ನ ಹೆಚ್ಚಿನ ಅಧ್ಯಯನಕ್ಕೆ ಸ್ಮಾರ್ಟ್‌ಪೋನ್‌ ಸಹಾಯವಾಗುತ್ತೆ. ನಾನಿನ್ನೂ ಮಾವಿನಹಣ್ಣು ಮಾರಾಟ ಮಾಡಬೇಕಾಗಿಲ್ಲ ಎಂದಿದ್ದಾಳೆ.